Site icon Vistara News

Gehlot Denies | ನನಗೆ ಕಾಂಗ್ರೆಸ್‌ ಅಧ್ಯಕ್ಷನಾಗಲು ಸೂಚನೆ ಇಲ್ಲ ಎಂದ ಅಶೋಕ್‌ ಗೆಹ್ಲೋಟ್

Ashok

ಜೈಪುರ: ಸೋನಿಯಾ ಗಾಂಧಿ ಅವರು ಮೆಡಿಕಲ್‌ ಚೆಕಪ್‌ಗೆ ವಿದೇಶಕ್ಕೆ ಹೋಗುವ ಮೊದಲು ನೀವೇ ಪಕ್ಷವನ್ನು ಮುನ್ನಡೆಸಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಹೇಳಿದ್ದಾರೆ, ಮುಂದೆ ಅವರೇ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಜಸ್ಥಾನ ಸಿಎಂ (Gehlot Denies) ಸ್ಪಷ್ಟಪಡಿಸಿದ್ದಾರೆ.

“ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಲಾಗುತ್ತದೆ ಎಂಬುದನ್ನು ಮಾಧ್ಯಮಗಳಿಂದ ತಿಳಿದುಬಂದಿದೆ. ಆದರೆ, ನನಗೆ ಇದರ ಬಗ್ಗೆ ಗೊತ್ತಿಲ್ಲ. ನನಗೆ ನೀಡಿರುವ ಜವಾಬ್ದಾರಿಗಳನ್ನು ಸಮಪರ್ಕವಾಗಿ ನಿರ್ವಹಿಸುತ್ತಿದ್ದೇನೆ. ನನಗೆ ಹೈಕಮಾಂಡ್‌ ಹಲವು ಕೆಲಸಗಳನ್ನು ವಹಿಸಿದೆ. ಗುಜರಾತ್‌ ಚುನಾವಣಾ ವೀಕ್ಷಕನನ್ನಾಗಿ ನೇಮಿಸಲಾಗಿದೆ. ಅಲ್ಲದೆ, ರಾಜಸ್ಥಾನದಲ್ಲಿ ಯಾವುದೇ ಕೆಲಸ, ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಿ ಆಗುವುದಿಲ್ಲ. ಅಧ್ಯಕ್ಷ ಸ್ಥಾನದ ಕುರಿತು ಮಾಧ್ಯಮಗಳಲ್ಲಿ ಮಾತ್ರ ವರದಿಯಾಗಿದೆ” ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರು ವಿದೇಶಕ್ಕೆ ತೆರಳುತ್ತಿರುವ ಹಾಗೂ ಅವರ ಜತೆ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಅವರೂ ಹೋಗುತ್ತಿರುವ ಕಾರಣ ನೀವೇ ಪಕ್ಷದ ಉಸ್ತುವಾರಿ ವಹಿಸಿಕೊಳ್ಳಿ ಎಂಬುದಾಗಿ ಸೋನಿಯಾ ಗೆಲ್ಹೋಟ್‌ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸೆಪ್ಟೆಂಬರ್‌ನಲ್ಲಿ ಅಶೋಕ್‌ ಗೆಹ್ಲೋಟ್‌ ಅವರನ್ನೇ ಎಐಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ. ಹಾಗಾಗಿ, ಗೆಹ್ಲೋಟ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ | Lead Congress | ನೀವೇ ಪಕ್ಷ ಮುನ್ನಡೆಸಿ, ವಿದೇಶಕ್ಕೆ ತೆರಳುವ ಮುನ್ನ ಸೋನಿಯಾ ಹೀಗೆ ಹೇಳಿದ್ದು ಯಾರಿಗೆ?

Exit mobile version