Site icon Vistara News

Assam Congress: ಅಸ್ಸಾಮ್‌ನಲ್ಲಿ ಕಾಂಗ್ರೆಸ್‌ಗೆ ಹೊಡೆತ! ಬಿಜೆಪಿ ಸೇರಿದ ಹಲವು ನಾಯಕರು

Assam Congress Leaders joined BJP party

ನವದೆಹಲಿ: 2024ರ ಲೋಕಸಭೆ ಚುನಾವಣೆ (Lok Sabha election) ಮುಂದಿರುವಂತೆಯೇ ಅಸ್ಸಾಮ್‌ನಲ್ಲಿ ಕಾಂಗ್ರೆಸ್‌ (Assam Congress) ಭಾರೀ ಹೊಡೆತ ಬಿದ್ದಿದೆ. ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು (Congress Leaders) ಮತ್ತು ಆಲ್ ಅಸ್ಸಾಮ್ ವಿದ್ಯಾರ್ಥಿ ಒಕ್ಕೂಟದ (Students Leaders) ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು, ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾಗಿದ್ದಾರೆ(BJP Party).

ಬಿಜೆಪಿಗೆ ಸೇರ್ಪಡೆಗೊಂಡವರಲ್ಲಿ ಮಾಜಿ ಕಾಂಗ್ರೆಸ್ ಸಚಿವೆ ಬಿಸ್ಮಿತಾ ಗೊಗೊಯ್, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಸ್ಸಾಂ ಘಟಕದ ಮಾಜಿ ಅಧ್ಯಕ್ಷೆ ಅಂಗಿತಾ ದತ್ತಾ, ಆಲ್ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ (ಎಎಎಸ್‌ಯು) ಮಾಜಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ದೀಪಂಕ ಕುಮಾರ್ ನಾಥ್ ಮತ್ತು ಪ್ರಕಾಶ್ ದಾಸ್ ಸೇರಿದ್ದಾರೆ. ರಾಜ್ಯ ವಿಧಾನಸಭೆಯ ಮಾಜಿ ಉಪಸಭಾಪತಿ ದಿಲೀಪ್ ಪಾಲ್ ಕೂಡ ಬಿಜೆಪಿ ಪಾಲಾಗಿದ್ದಾರೆ.

ಬಿಸ್ಮಿತಾ ಅವರು ಮಾಜಿ ಕಾಂಗ್ರೆಸ್ ನಾಯಕ ಜಿಬಾ ಕಾಂತ ಗೊಗೋಯ್ ಅವರ ಸೊಸೆ ಮತ್ತು ಖುಮ್ಟೈನ ಮಾಜಿ ಶಾಸಕರಾಗಿದ್ದರೆ. ದತ್ತಾ ಅವರು ಮಾಜಿ ಕಾಂಗ್ರೆಸ್ ಸಚಿವ ಅಂಜನ್ ದತ್ತಾ ಅವರ ಪುತ್ರಿ. ಐವೈಸಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ ವಿರುದ್ಧ ಕಿರುಕುಳದ ಪ್ರಕರಣ ದಾಖಲಿಸಿದ ನಂತರ ಕಳೆದ ವರ್ಷ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು. ಪಕ್ಷದ ಸೇರ್ಪಡೆಯ ಸಂದರ್ಭದಲ್ಲಿ ಅಸ್ಸಾಮ್ ಬಿಜೆಪಿ ಘಟಕದ ಮುಖ್ಯಸ್ಥ ಭಬೇಶ್ ಕಲಿತಾ ಸೇರಿದಂತೆ ಬಿಜೆಪಿ ನಾಯಕರು ಮತ್ತು ಹಲವು ಸಚಿವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಮತ್ತು ಎಎಎಸ್‌ಯುನ ಈ ನಾಯಕರು ನಮ್ಮೊಂದಿಗೆ ಸೇರಲು ನಿರ್ಧರಿಸಿರುವುದು ನಮಗೆ ಸಂತೋಷವಾಗಿದೆ. ಇಂದಿನ ಕಾರ್ಯಕ್ರಮವು ಇತರ ಪಕ್ಷಗಳ ಜನರು ಬಿಜೆಪಿಗೆ ಸೇರ್ಪಡೆಗೊಳ್ಳುವ ಪ್ರಕ್ರಿಯೆಯ ಭಾಗವಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಹೆಚ್ಚಿನ ಜನರು ನಮ್ಮೊಂದಿಗೆ ಸೇರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂಗು ಕಲಿತಾ ಅವರು ಹೇಳಿದ್ದಾರೆ. ಯಾವುದೇ ಷರತ್ತುಗಳಿಲ್ಲದೇ ಅವರು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಯಾವುದೇ ಭರವಸೆಗಳನ್ನು ನೀಡಿಲ್ಲ ಎಂದು ಅವರು ಹೇಳಿದರು.

ರಾಹುಲ್ ಎಲ್ಲಿ ಹಾದು ಹೋಗುತ್ತಾರೋ ಆ ಸ್ಥಳಗಳಲ್ಲಿ ಕಾಂಗ್ರೆಸ್ ಪತನವಾಗುತ್ತದೆ. ಅವರು ತುಂಬಾ ಸ್ಪೂರ್ತಿರಹಿತರು, ಸೊಕ್ಕಿನವರು ಮತ್ತು ನಾಯಕತ್ವದ ಗುಣಗಳನ್ನು ಹೊಂದಿಲ್ಲ. ವಾಸ್ತವವಾಗಿ, ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ.

ಪ್ರಸ್ತುತ ಕಾಂಗ್ರೆಸ್ ತನ್ನ ಸಿದ್ಧಾಂತವನ್ನು ಕಳೆದುಕೊಂಡಿದೆ. ರಾಹುಲ್ ಗಾಂಧಿ ಅವರ ಕ್ಷೀಣಿಸುತ್ತಿರುವ ರಾಜಕೀಯ ಭವಿಷ್ಯವನ್ನು ಪುನರುತ್ಥಾನಗೊಳಿಸುವುದು ಹೇಗೆ ಎಂಬುದು ಪಕ್ಷದ ಏಕೈಕ ಯೋಜನೆಯಾಗಿದೆ. ಇತ್ತೀಚಿನ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ, ನಾನು ಎದುರಿಸಿದ ಕಿರುಕುಳದ ಬಗ್ಗೆ ನನಗೆ ನ್ಯಾಯವನ್ನು ನೀಡಲು ಗಾಂಧಿಯವರು ನನ್ನೊಂದಿಗೆ ಸಂವಹನ ನಡೆಸದಿರುವುದು ನಿರಾಶಾದಾಯಕವಾಗಿತ್ತು ಎಂದು ಅಂಕಿತಾ ದತ್ತಾ ಹೇಳಿದರು.

ಈ ಸುದ್ದಿಯನ್ನೂ ಓದಿ: IT Raid on Congress leader | ಕಾಂಗ್ರೆಸ್‌ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸಕ್ಕೆ ಐಟಿ ದಾಳಿ, ಮದುವೆ ದಿಬ್ಬಣದಂತೆ ಬಂದರು!

Exit mobile version