Site icon Vistara News

Muslim Formula | ಜನಸಂಖ್ಯೆ ಹೆಚ್ಚಳದಲ್ಲಿ ಮುಸ್ಲಿಮರಿಗಿಂತ ಹಿಂದುಗಳು ಹಿಂದೆ, ಅಸ್ಸಾಂ ಸಂಸದ ಮೌಲಾನಾ ವಿವಾದ

Moulana Badruddin Ajmal Apology

ಗುವಾಹಟಿ: “ಜನಸಂಖ್ಯೆ ಹೆಚ್ಚಿಸುವಲ್ಲಿ ಮುಸ್ಲಿಮರಿಗಿಂತ ಹಿಂದುಗಳು ಹಿಂದಿದ್ದಾರೆ” ಎಂದು ಹೇಳುವ ಮೂಲಕ ಅಸ್ಸಾಂ ಸಂಸದ, ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (AIUDF) ಅಧ್ಯಕ್ಷ ಮೌಲಾನಾ ಬದ್ರುದ್ದೀನ್‌ ಅಜ್ಮಲ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಿಂದುಗಳು ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಮುಸ್ಲಿಂ ಫಾರ್ಮುಲಾ (Muslim Formula)” ಪಾಲಿಸಲಿ” ಎಂಬ ಸಲಹೆಯನ್ನೂ ನೀಡಿದ್ದಾರೆ.

“ಮುಸ್ಲಿಮರಲ್ಲಿ ಪುರುಷರು ೨೨ ವರ್ಷಕ್ಕೆ, ಹೆಣ್ಣುಮಕ್ಕಳು ೧೮ ವರ್ಷಕ್ಕೆ ಮದುವೆಯಾಗುತ್ತಾರೆ. ಆದರೆ, ಹಿಂದೂಗಳು ೪೦ನೇ ವಯಸ್ಸಿನತನಕ ಒಬ್ಬರಿಂದ ಮೂವರು ಹೆಣ್ಣುಮಕ್ಕಳ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಇದಾದ ಬಳಿಕ ಪೋಷಕರ ಒತ್ತಾಯಕ್ಕೆ ಮಣಿದು ಮದುವೆಯಾಗುತ್ತಾರೆ. ಆಗ, ಜಾಸ್ತಿ ಮಕ್ಕಳನ್ನು ಪಡೆಯಲು ಹೇಗೆ ಸಾಧ್ಯವಾಗುತ್ತದೆ? ಆಗ ಫಲವತ್ತತೆ ಕುಸಿದಿರುತ್ತದೆ. ಹಾಗಾಗಿ, ಮುಸ್ಲಿಂ ಫಾರ್ಮುಲಾ ಅನುಸರಿಸಿ” ಎಂದು ಹೇಳಿದ್ದಾರೆ.

“ಫಲವತ್ತತೆಯ ಭೂಮಿಯಲ್ಲಿ ಬಿತ್ತಿದರೆ ಮಾತ್ರ ಉತ್ತಮ ಫಸಲು ಬರುತ್ತದೆ. ಹಾಗೆಯೇ, ಹಿಂದುಗಳು ೪೦ನೇ ವಯಸ್ಸಿಗೆ ಮದುವೆಯಾಗದೆ, ೨೦-೨೨ ವರ್ಷಕ್ಕೆ ಮದುವೆಯಾಗುವ ಮೂಲಕ ಹೆಚ್ಚಿನ ಮಕ್ಕಳನ್ನು ಪಡೆಯಬಹುದು” ಎಂದಿದ್ದಾರೆ. ಮೌಲಾನಾ ಹೇಳಿಕೆಗೆ ಕೆಲ ಹಿಂದು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ | Vistara ವಿಶ್ಲೇಷಣೆ | 8 ವರ್ಷದಲ್ಲಿ ಕರ್ನಾಟಕಕ್ಕೆ ಜನಸಂಖ್ಯೆ ಗಂಡಾಂತರ: ಮೋಹನದಾಸ್‌ ಪೈ ವರದಿಯಲ್ಲಿ ಬಹಿರಂಗ

Exit mobile version