Site icon Vistara News

Assembly Election 2023: ಮಧ್ಯಪ್ರದೇಶದಲ್ಲಿ ಶೇ.71.16, ಛತ್ತೀಸ್‌ಗಢದಲ್ಲಿ ಶೇ.68.15 ಮತದಾನ

Assembly Election 2023: 71.16 pc voting in Madhya Pradesh, 68.15 pc in Chhattisgarh

ನವದೆಹಲಿ: ಮಧ್ಯ ಪ್ರದೇಶ (Madhya Pradesh Election) ಹಾಗೂ ಛತ್ತೀಸ್‌ಗಢ(Chhattisgarh Election) ವಿಧಾನಸಭೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯಿತು(Voting). ಸಂಜೆ 5ರ ಹೊತ್ತಿಗೆ ಮಧ್ಯ ಪ್ರದೇಶದಲ್ಲಿ ಶೇ.71.16 ಹಾಗ ಛತ್ತೀಸ್‌ಗಢದ 70 ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಚುನಾವಣೆಗೆ ಶೇ.68.15ರಷ್ಟು ಮತದಾನ ನಡೆಯಿತು. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಹಣಾಹಣಿ ಇದೆ. ಸದ್ಯ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ (Congress Party) ಆಡಳಿತದಲ್ಲಿದ್ದರೆ, ಮಧ್ಯ ಪ್ರದೇಶದಲ್ಲಿ ಬಿಜೆಪಿ ಪಕ್ಷದ (BJP party) ಸರ್ಕಾರವಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ(election Result).

ಮಧ್ಯಪ್ರದೇಶದಲ್ಲಿ ಶುಕ್ರವಾರ ಮತದಾನ ನಡೆದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.60.52ರಷ್ಟು ಮತದಾನವಾಗಿತ್ತು. ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.45.40ರಷ್ಟು ಮತದಾನ ನಡೆದಿತ್ತು. ಮಧ್ಯ ಪ್ರದೇಶದಲ್ಲಿ ಶುಗ್ರವಾರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿತ್ತು. ಮಧ್ಯ ಪ್ರದೇಶದ ಚುನಾವಣೆಯಲ್ಲಿ 2,500ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸುಮಾರು 5.59 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಇದರಲ್ಲಿ 2.87 ಕೋಟಿ ಪುರುಷ ಮತ್ತು 2.71 ಕೋಟಿ ಮಹಿಳಾ ಮತದಾರರಿದ್ದಾರೆ. ಮಹಿಳೆಯರೇ ನಡೆಸುವ 5,000 ಬೂತ್‌ಗಳು ಮತ್ತು 183 ವಿಕಲಚೇತನರು ನಡೆಸುತ್ತಿರುವ ಮತಗಟ್ಟೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಮತದಾನ

ಛತ್ತೀಸ್‌ಗಢದಲ್ಲಿ ಎರಡನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಶೇ.68.15ರಷ್ಟು ಮತದಾನ ನಡೆಯಿತು. ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.55.31 ರಷ್ಟು ಮತದಾನವಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ.38.22ರಷ್ಟು ಮತದಾನವಾಗಿತ್ತು. ನವೆಂಬರ್ 7ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಛತ್ತೀಸ್‌ಗಢನ 20 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಛತ್ತೀಸ್‌ಗಢ ಒಟ್ಟು 90 ಕ್ಷೇತ್ರಗಳನ್ನು ಹೊಂದಿವೆ.

ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಮತದಾನಕ್ಕಾಗಿ 18,800ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪ್ರಸ್ತುತ ಮತದಾನ ನಡೆಯುತ್ತಿರುವ 70 ಕ್ಷೇತ್ರಗಳಲ್ಲಿ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಎರಡರಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಮುಖ ಹಣಾಹಣಿ ಇದೆ.

ಲೋಕಸಭೆ ಚುನಾವಣೆಗೆ ಸುಮಾರು ಆರು ತಿಂಗಳ ಮುಂಚಿತವಾಗಿ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆಗಳು ವಿವಿಧ ಕಾರಣಗಳಿಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ನಿರ್ಣಾಯಕವಾಗಿವೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮತ ಎಣಿಕೆ ಜೊತೆಗೆ ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನ ಮತ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.

ಈ ಸುದ್ದಿಯನ್ನೂ ಓದಿ: Mahadev App Case: ಛತ್ತೀಸ್‌ಗಢ ಸಿಎಂ ಬಘೇಲ್ ವಿರುದ್ಧ ಲಂಚದ ಪುರಾವೆ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ

Exit mobile version