Site icon Vistara News

Assembly Election 2023: ಮದುವೆಗಳಿಗಾಗಿ ರಾಜಸ್ಥಾನ ಚುನಾವಣಾ ದಿನಾಂಕವೇ ಬದಲು!

97 crore people registered to vote in Lok Sabha Election

ನವದೆಹಲಿ: ಮೊನ್ನೆಯಷ್ಟೇ ಕೇಂದ್ರ ಚುನಾವಣಾ ಆಯೋಗವು (Election Commission of India) ರಾಜಸ್ಥಾನ (Rajasthan) ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿತ್ತು(Assembly Election 2023). ನವೆಂಬರ್ 23ರಂದು ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿತ್ತು. ಆದರೆ, ಬುಧವಾರ ಹಠಾತ್ ಆಗಿ ಚುನಾವಣಾ ದಿನಾಂಕವನ್ನು ಪರಿಷ್ಕರಿಸಿದೆ(polling date revised). ನವೆಂಬರ್ 23ರ ಬದಲಿಗೆ ನವೆಂಬರ್ 25ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗವು ಹೇಳಿದ್ದು, ಫಲಿತಾಂಶವು ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಆದರೆ, ದಿನಾಂಕ ಪರಿಷ್ಕರಣೆಗೆ ಕಾರಣ ಮಾತ್ರ ಮಜವಾಗಿದೆ.

ನವೆಂಬರ್ 25ರಂದು ರಾಜಸ್ಥಾನದಲ್ಲಿ ಭಾರೀ ಸಂಖ್ಯೆಯಲ್ಲಿ ವಿವಾಹಗಳು, ಇತರ ಸಾಮಾಜಿ ಕಾರ್ಯಕ್ರಮಗಳು ಇರುವುದರಿಂದ ದಿನಾಂಕವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಆಯೋಗವು ಹೇಳಿದೆ. ರಾಜಸ್ಥಾನದಲ್ಲಿ ನವೆಂಬರ್ 23ರಂದು ದೊಡ್ಡ ಪ್ರಮಾಣದಲ್ಲಿ ವಿವಾಹಗಳು, ಸಾಕಷ್ಟು ಕಾರ್ಯಕ್ರಮಗಳಿವೆ. ಚುನಾವಣೆಯನ್ನು ಅದೇ ದಿನ ನಡೆಸುವುರಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು. ಜತೆಗೆ ಸಾರಿಗೆ ಸಮಸ್ಯೆಯೂ ಎದರಾಗಬಗಹುದು. ಎಲ್ಲಕ್ಕಿಂತ ಹೆಚ್ಚಾಗಿ ಮತದಾನ ಪ್ರಮಾಣ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಚುನಾವಣೆ ದಿನಾಂಕವನ್ನು ಪರಿಷ್ಕರಿಸಲಾಗಿದೆ ಎಂದು ಆಯೋಗವು ಹೇಳಿದೆ.

ರಾಜಸ್ಥಾನದಲ್ಲಿ ಹೇಗಿದೆ ಪರಿಸ್ಥಿತಿ?

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಡಳಿತವಿದ್ದು, ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅಶೋಕ್‌ ಗೆಹ್ಲೋಟ್‌ ಹಾಗೂ ಅವರದ್ದೇ ಪಕ್ಷದ ಸಚಿನ್‌ ಪೈಲಟ್‌ ಮಧ್ಯೆ ಆಗಾಗ ಭಿನ್ನಮತ ಸ್ಫೋಟವಾಗುತ್ತದೆ. ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದ್ದು, ಈಗಾಗಲೇ ಹಲವು ಬಾರಿ ಬಂಡಾಯವೆಬ್ಬಿಸಿ, ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸಿ ವಿಫಲವಾಗಿದೆ. ಉಚಿತ ಯೋಜನೆಗಳ ಘೋಷಣೆ ಮೂಲಕ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದರೆ, ಬಿಜೆಪಿಗೆ ಮೋದಿ ನಾಮದ ಬಲವೊಂದೇ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಆಂತರಿಕ ಕಚ್ಚಾಟವೇ ಮುಳುವಾಗುವ ಸಾಧ್ಯತೆ ಇದೆ. ‌

ಈ ಸುದ್ದಿಯನ್ನೂ ಓದಿ: Telangana Election: ಪಕ್ಷದಿಂದ ಸಸ್ಪೆಂಡ್ ಆದ ಶಾಸಕ ಟಿ ರಾಜಾ ಸಿಂಗ್‌ಗೆ ಬಿಜೆಪಿ ಟಿಕೆಟ್!

ರಾಜಸ್ಥಾನ- ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್, 7 ಸಂಸದರಿಗೆ ಟಿಕೆಟ್!

ರಾಜಸ್ಥಾನದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಮೊದಲನೇ ಪಟ್ಟಿಟಯನ್ನು ಸೋಮವಾರ ಬಿಡುಗಡೆ ಮಾಡಿದೆ. ಏಳು ಸಂಸದರು ಸೇರಿದಂತೆ ಒಟ್ಟು 41 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಅಕ್ಟೋಬರ್ 1ರಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆಯೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

ಝೋತ್ವಾರವನ್ನು ಪ್ರತಿನಿಧಿಸುವ ರಾಜ್ಯವರ್ಧನ್ ರಾಥೋಡ್ ಮತ್ತು ವಿದ್ಯಾಧರ್ ನಗರದಿಂದ ಸಂಸದೆ ದಿಯಾ ಕುಮಾರಿ ಅವರನ್ನು ಬಿಜೆಪಿ ವಿಧಾನಸಭೆ ಚುನಾವಣೆ ಕಣಕ್ಕಿಳಿಸಲಿದೆ. ಇದೇ ವೇಳೆ, ಬಾಬಾ ಬಾಲಕನಾತ್ ಅವರು ತಿಜರಾ ಮತ್ತು ಕಿರೋಡಿ ಲಾಲ್ ಮೀನಾ ಅವರು ಸವಾಯಿ ಮಾಧೋಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನವೆಂಬರ್ 25ರಂದು ರಾಜಸ್ಥಾನ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version