Site icon Vistara News

Pune Accident | ಪುಣೆ-ಬೆಂಗಳೂರು ಹೈವೇಯಲ್ಲಿ ಭೀಕರ ಅಪಘಾತ, 48 ವಾಹನಗಳು ಜಖಂ

Accident In Pune

ಪುಣೆ: ಸಾಮಾನ್ಯವಾಗಿ ಎಷ್ಟೇ ಭೀಕರ ಅಪಘಾತ ಸಂಭವಿಸಲಿ, ಡಿಕ್ಕಿಯಾದ ಎರಡು ವಾಹನಗಳು ಜಖಂಗೊಳ್ಳುತ್ತವೆ. ಒಂದೆರಡು ಬೇರೆ ವಾಹನಗಳಿಗೂ ಅಪಘಾತದಿಂದ ಹಾನಿಯಾಗಿರುತ್ತದೆ. ಆದರೆ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Pune Accident ) ಭೀಕರ ಅಪಘಾತ ಸಂಭವಿಸಿದ್ದು, ಸುಮಾರು 48 ವಾಹನಗಳು ಜಖಂಗೊಂಡಿವೆ.

ರಾಷ್ಟ್ರೀಯ ಹೆದ್ದಾರಿಯ ನವಲೆ ಸೇತುವೆ ಬಳಿ ಟ್ಯಾಂಕರ್‌ ಒಂದು ಮತ್ತೊಂದು ವಾಹನಕ್ಕೆ ಗುದ್ದಿದೆ. ಇದರಿಂದ ಸರಣಿಯಾಗಿ ವಾಹನಗಳು ಡಿಕ್ಕಿಯಾಗಿವೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕಾರುಗಳು ಸೇರಿ 48 ವಾಹನಗಳಿಗೆ ಹಾನಿಯುಂಟಾಗಿದೆ. ಸ್ಥಳಕ್ಕೆ ಪುಣೆ ಅಗ್ನಿಶಾಮಕ ದಳ, ಪುಣೆ ಮೆಟ್ರೊಪಾಲಿಟನ್‌ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (PMRDA) ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದಿಂದ ಹೆಚ್ಚಿನ ಜನರಿಗೆ ಗಾಯಗಳಾಗಿರುವ ಸಾಧ್ಯತೆ ಇದ್ದು, ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ | Accident | ಕಾರು ಮತ್ತು ಬೈಕ್‌ ನಡುವೆ ಭೀಕರ ಅಪಘಾತ, ಒಂದೇ ಕುಟುಂಬದ ಮೂವರ ಸಾವು

Exit mobile version