ತಿರುವನಂತಪುರಂ: ಕೇರಳದಲ್ಲಿ ಹಿಂದುಗಳನ್ನು ಇಸ್ಲಾಂಗೆ ಮತಾಂತರಗೊಳಿಸುವ ಜಾಲದ ಕುರಿತು ಚಿತ್ರಿಸಲಾದ ದಿ ಕೇರಳ ಸ್ಟೋರಿ (The Kerala Story) ದೇಶಾದ್ಯಂತ ಸುದ್ದಿಯಾಗಿತ್ತು. ಈ ಸಿನಿಮಾದಲ್ಲಿ ಹೇಳಿರುವುದೆಲ್ಲ ಸುಳ್ಳು, ಲವ್ ಜಿಹಾದ್ ಅಂತೇನಿಲ್ಲ ಎಂದು ಟೀಕಿಸಿದ್ದ ಕೇರಳದ ಹಿಂದು ಯುವತಿ ಅತುಲ್ಯಾ ಅಶೋಕನ್ ಈಗ ಮುಸ್ಲಿಂ ಗಂಡನಿಂದ ಚಿತ್ರಹಿಂಸೆ ಅನುಭವಿಸಿದ್ದಾಳೆ. ರಿಸಲ್ ಮನ್ಸೂರ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ ಅತುಲ್ಯಾ ಅಶೋಕನ್ ಅವರಿಗೆ ಮುಸ್ಲಿಂ ಪತಿ ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಿಂದು ಯುವತಿ ಅತುಲ್ಯಾ ಅಶೋಕನ್ ಅವರು ಇಸ್ಲಾಂಗೆ ಮತಾಂತರಗೊಂಡು, ಆಲಿಯಾ ಎಂದು ಹೆಸರು ಬದಲಿಸಿಕೊಂಡು, ಎಂಜಿನಿಯರ್ ಆಗಿರುವ ರಿಸಲ್ ಮನ್ಸೂರ್ ಎಂಬುವರನ್ನು ಮದುವೆಯಾಗಿದ್ದರು. ಆದರೆ, ಇತ್ತೀಚೆಗೆ ಅತುಲ್ಯಾ ಅಶೋಕನ್ ಅವರ ಇನ್‌ಸ್ಟಾಗ್ರಾಂ ಸ್ಟೋರಿ ವಿಷಯವು ಚರ್ಚೆಗೆ ಗ್ರಾಸವಾಗಿದೆ. “ನನಗೇನಾದರೂ ಆದರೆ ಅದಕ್ಕೆ ರಿಸಲ್ ಮನ್ಸೂರ್ ಕಾರಣ” ಎಂಬುದಾಗಿ ಅತುಲ್ಯಾ ಅಶೋಕನ್ ಅವರು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಇಟ್ಟಿದ್ದಾರೆ. ಇದು ಈಗ ಅವರ ಬದುಕಿನ ಕುರಿತು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.
She is Athulya Ashokan from Kerala.
— Sunanda Roy 👑 (@SaffronSunanda) November 21, 2023
She got converted to Islam & married to Risal Mansoor.
She was mocking "The Kerala Story" movie. She was showing off her Muslim boyfriend
Now she is uploading status on Instagram that "My life is under threat by him".
Kerala Police must… pic.twitter.com/FUYUztAsLH
ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಆಗಿರುವ ಅತುಲ್ಯಾ ಅಶೋಕನ್ ಅವರು ದಿ ಕೇರಳ ಸ್ಟೋರಿ ಸಿನಿಮಾವನ್ನು ಟೀಕಿಸಿದ್ದರು. ಇದು ಧರ್ಮಗಳ ಮಧ್ಯೆ ದ್ವೇಷ ಬಿತ್ತುವ ಸಿನಿಮಾ ಎಂದಿದ್ದರು. ಅಲ್ಲದೆ, 23 ವರ್ಷದ ಹಿಂದು ಯುವತಿಯು 2023ರ ಏಪ್ರಿಲ್‌ನಲ್ಲಿ ರಿಸಲ್ ಮನ್ಸೂರ್ ಎಂಬುವರನ್ನು ಮದುವೆಯಾಗಿದ್ದರು.
ಮದುವೆಯಾಗುವ ವೇಳೆ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು. ಈಗ ರಿಸಲ್ ಮನ್ಸೂರ್ ಅವರಿಂದ ಯಾವ ರೀತಿಯ ಕಿರುಕುಳ ಎದುರಿಸುತ್ತಿದ್ದಾರೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ, ನನ್ನ ಮದುವೆ ವಿಚಾರವನ್ನು ಕೋಮುವಾದಕ್ಕೆ ತಿರುಗಿಸುವುದು ಬೇಡ ಎಂಬುದಾಗಿ ಅತುಲ್ಯಾ ಅಶೋಕನ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: The Kerala Story: ʼದಿ ಕೇರಳ ಸ್ಟೋರಿʼ ನೋಡಲು ಸಾಧ್ವಿ ಪ್ರಜ್ಞಾ ಕರೆದೊಯ್ದು ಯುವತಿ ಮುಸ್ಲಿಂ ಲವರ್ ಜತೆ ಪರಾರಿ!
Social media is abuzz with the supposed turnaround of Athulya Ashokan, the Hindu girl from Kerala who married a Muzlim man and converted. Now she has apparently deleted all pics of her husband and locked her insta account. I would advise people to not jump to conclusions. For all… pic.twitter.com/K3Ct4IHNSo
— Shefali Vaidya. 🇮🇳 (@ShefVaidya) November 22, 2023
ಲೇಖಕಿ ಶೆಫಾಲಿ ವೈದ್ಯ ಅವರು ಕೂಡ ಅತುಲ್ಯಾ ಅಶೋಕನ್ ಅವರ ಕುರಿತು ಪೋಸ್ಟ್ ಮಾಡಿದ್ದಾರೆ. “ಅತುಲ್ಯಾ ಅಶೋಕನ್ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರು. ಈಗ ಅವರು ತಮ್ಮ ಗಂಡನ ಜತೆಗೆ ಇದ್ದ ಎಲ್ಲ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಇಂತಹ ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ನಾನು ಮನವಿ ಮಾಡುತ್ತಿದ್ದೇನೆ. ಇವೆಲ್ಲ ಸರಿಯಾಗಿ ಪ್ಲಾನ್ ಮಾಡಿದ ಡ್ರಾಮಗಳು (ಮತಾಂತರಗೊಳಿಸಿ ಮದುವೆಯಾಗುವುದು” ಎಂದು ಪೋಸ್ಟ್ ಮಾಡಿದ್ದಾರೆ.
ಈ ಸಂಗತಿ ಕುರಿತು ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮೂಲಕ ತಿಳಿಸಿ