ಲಖನೌ: ಉತ್ತರ ಪ್ರದೇಶದ ಫತೇಪುರದಲ್ಲಿ ಹಿಂದು ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಕಂದರ್ ಖಾನ್ (ಸೋನು) ಮನೆಯನ್ನು (Demolition Drive) ಧ್ವಂಸಗೊಳಿಸಲಾಗಿದೆ. ಸಿಕಂದರ್ ಖಾನ್ ಮನೆಯನ್ನು ಎರಡನೇ ಬಾರಿ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ. ಇದಕ್ಕೂ ಮೊದಲು ಜೂನ್ 27ರಂದು ಮನೆ ಕೆಡವಲಾಗಿತ್ತು.
ಜೂನ್ 22ರಂದು 19 ವರ್ಷದ ಯುವತಿಯು ಸಂಬಂಧಿಕರೊಬ್ಬರ ಮದುವೆ ಮುಗಿಸಿಕೊಂಡು ಬರುವಾಗ ಬಿಂಡ್ಕಿ ಕೊತ್ವಾಲಿ ಪ್ರದೇಶದಲ್ಲಿ ಸಿಕಂದರ್ ಖಾನ್ ಎಂಬಾತನು ಅಪಹರಣ ಮಾಡಿದ್ದ. ಆಕೆಯನ್ನು ಹೊತ್ತುಕೊಂಡು ಹೋಗಿ ನಿರ್ಮಾಣ ಹಂತದ ಕಟ್ಟಡದಲ್ಲಿ ಅತ್ಯಾಚಾರ ಎಸಗಿದ್ದ. ಅತ್ಯಾಚಾರ ಎಸಗುವ ಜತೆಗೆ ಆಕೆಯ ತಲೆಗೆ ಇಟ್ಟಿಗೆಯಿಂದ ಜಜ್ಜಿ ಹಲ್ಲೆ ಮಾಡಿದ್ದ. ಇದಾದ ಬಳಿಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
#WATCH | Uttar Pradesh: Demolition drive continues at the residence of Sonu alias Sikandar, accused of love jihad and rape in Fatehpur. The accused allegedly raped and murdered a 19-year-old girl. (04.07) pic.twitter.com/kX5aiBcCwt
— ANI UP/Uttarakhand (@ANINewsUP) July 5, 2023
ಜೂನ್ 23ರಂದು ಕಟ್ಟಡದ ಆವರಣದಲ್ಲಿ ಯುವತಿ ನರಳಾಡುತ್ತ ಬಿದ್ದಿದ್ದು ಜನರಿಗೆ ಗೊತ್ತಾಯಿತು. ಕೂಡಲೇ ಅವಳನ್ನು ಕಾನ್ಪುರ ಹಾಲೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಪೊಲೀಸರು ಸಿಕಂದರ್ ಖಾನ್‌ನನ್ನು ಬಂಧಿಸಿದ್ದು, ಜೈಲಿಗಟ್ಟಿದ್ದಾರೆ. ಆತನ ವಿರುದ್ಧ ಕೊಲೆ, ಅತ್ಯಾಚಾರ ಹಾಗೂ ಲವ್ ಜಿಹಾದ್ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Viral News: ಮಹಿಳಾ ಟೀಚರ್ ಜತೆ ಓಡಿ ಹೋದ 17 ವರ್ಷದ ಬಾಲಕಿ, ಇಲ್ಲೂ ಲವ್ ಜಿಹಾದ್ ಶಂಕೆ
ಯುವತಿಯನ್ನು ಅತ್ಯಾಚಾರ ಮಾಡಿದ ಸಿಕಂದರ್ ಖಾನ್ ವಿರುದ್ಧ ಹಲವೆಡೆ ಪ್ರತಿಭಟನೆ ನಡೆಸಲಾಗಿತ್ತು. ಆತನ ಬಂಧನಕ್ಕೆ ಆಗ್ರಹಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಹಾಗೆಯೇ, ಜೂನ್ 27ರಂದು ಮೊದಲ ಬಾರಿಗೆ ಸಿಕಂದರ್ ಖಾನ್ ಮನೆಯನ್ನು ಧ್ವಂಸಗೊಳಿಸಲಾಗಿತ್ತು. ಈಗ ಎರಡನೇ ಬಾರಿಗೂ ತೆರವು ಕಾರ್ಯಾಚರಣೆ ನಡೆಸಿ ಆತನ ಮನೆಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ.