ನವದೆಹಲಿ: ಭಾರತವು ಸೇರಿದಂತೆ ವಿವಿಧ ದೇಶಗಳಲ್ಲಿ ಡಿಸೆಂಬರ್ 16ರಂದು ಅವತಾರ್: ದಿ ವೇ ಆಫ್ ವಾಟರ್ (Avatar 2) ಹಾಲಿವುಡ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆದರೆ, ಅದಕ್ಕಿಂತ ಮುಂಚೆಯೇ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿದೆ! ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಈ ಚಿತ್ರವನ್ನು ಪೈರಸಿ ನೆಟ್‌ವರ್ಕ್ ಆಗಿರುವ ಟೊರೆಂಟ್ ಹಾಗೂ ಇತರ ಪೈರಸಿ ನೆಟ್‌ವರ್ಕ್‌ಗಳಲ್ಲಿ ಲೀಕ್ ಮಾಡಲಾಗಿದೆ.
ಈ ಸಂಬಂಧ ಹರಿದಾಡುತ್ತಿರುವ ಸಿನಿಮಾ ಕಾಪಿಗಳು ಬಹುತೇಕ ಅಸಲಿಯಾಗಿವೆ. ಸ್ಕ್ರೀನ್ ಶಾಟ್‌ಗಳು ಮತ್ತು ಬಳಕೆದಾರರ ಕಮೆಂಟ್ ಗಮನಿಸಿದರೆ ಇದು ವೇದ್ಯವಾಗುತ್ತಿದೆ. ಆದರೂ, ಕೆಲವು ವಂಚನೆಯ ಲಿಂಕ್‌ಗಳು ಕೂಡ ಸಕ್ರಿಯವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಅವತಾರ್ ಸಿನಿಮಾದ ಹೆಸರಿನಲ್ಲಿ ಕೆಲವು ಮೋಸದ ಲಿಂಕ್‌ಗಳು ವೈರಸ್, ಮಾಲ್ವೇರ್ ಒಳಗೊಂಡಿರುವ ಸಾಧ್ಯತೆಗಳಿವೆ. ಇಂಥ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ಅಪಾಯ ತಪ್ಪಿದ್ದಲ್ಲ. ಈ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಟೊರೆಂಟ್ ವೇದಿಕೆಯಲ್ಲಿ ಲೀಕ್ ಮಾಡಲಾಗಿರುವ ಅವತಾರ್ ಕಾಪಿ ನೈಜತೆಯಿಂದ ಕೂಡಿದ್ದರೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಹೇಳಲಾಗುತ್ತಿದೆ. ಜಾಹೀರಾತುಗಳೂ ಇರುವ ಸಾಧ್ಯತೆಯೂ ಇದೆ. ಆದರೆ, ಈ ರೀತಿಯಾಗಿ ಪೈರಸಿ ಮಾಡುವುದು ಕಾನೂನು ಬಾಹಿರವಾಗಿದೆ.
ಬೆಲ್ಜಿಯಂ, ಡೆನ್ಮಾರ್ಕ್, ಈಜಿಪ್ಟ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಹಾಂಗ್ ಕಾಂಗ್, ಇಂಡೋನೇಷ್ಯಾ, ಇಟಲಿ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್‌ನಲ್ಲಿ ಅವತಾರ್ 2 ಬುಧವಾರವೇ ಬಿಡುಗಡೆಯಾಗಿದೆ. ಗುರುವಾರ ಆಸ್ಟ್ರೇಲಿಯಾ, ಬ್ರೆಜಿಲ್, ಇಸ್ರೇಲ್, ಮೆಕ್ಸಿಕೋ, ಪೋರ್ಚುಗಲ್, ಸಿಂಗಾಪುರ್ ಮತ್ತು ಥಾಯ್ಲೆಂಡ್‌ಗಳಲ್ಲಿ ತೆರೆ ಕಂಡಿದೆ. ಇನ್ನು ಭಾರತ, ಅಮೆರಿಕ, ಇಂಗ್ಲೆಂಡ್, ಚೀನಾ, ಜಪಾನ್ ಸೇರಿ ಇತರೆಡೆ ಶುಕ್ರವಾರ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ | Avatar: The Way of Water | ಅವತಾರ್ 2 ಅಮೋಘ, ಅತ್ಯದ್ಭುತ! ಹಾಡಿ ಹೊಗಳಿದ ಸಿನಿ ವಿಮರ್ಶಕರು