Site icon Vistara News

Ayodhya Railway Station: ಅಯೋಧ್ಯಾ ರೈಲು ನಿಲ್ದಾಣಕ್ಕೆ ಮರುನಾಮಕರಣ!

Ayodhya Railway Station renamed as Ayodhya Dham Junction

ನವದೆಹಲಿ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir) ಉದ್ಘಾಟನೆಗೆ ಭಾರೀ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಅಯೋಧ್ಯೆ ನಗರ ಕೂಡ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ರೈಲು ನಿಲ್ದಾಣವನ್ನು, ಸಿಟಿ ಅಯೋಧ್ಯಾ ಜಂಕ್ಷನ್‌ಗೆ (Ayodhya Railway Station) ಬದಲಿಗೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ(Ayodhya Dham Junction). ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜನವರಿ 22ರಂದು ಉದ್ಘಾಟನೆ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯಾ ಧಾಮ ಜಂಕ್ಷನ್ ಅನ್ನು ಡಿಸೆಂಬರ್ 30ರಂದು ಉದ್ಘಾಟನೆ ಮಾಡಲಿದ್ದಾರೆ. ಈ ರೈಲು ನಿಲ್ದಾಣವನ್ನು ಮೂರು ಹಂತದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ರೈಲು ನಿಲ್ದಾಣ ಉದ್ಘಾಟನೆ ಹೊತ್ತಿಗೆ ಮೊದಲ ಹಂತದ ಅಭಿವೃದ್ದಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ. ಅಯೋಧ್ಯ ರೈಲು ನಿಲ್ದಾಣ ಮರುನಾಮಕರಣದ ಉತ್ತರ ಪ್ರದೇಶದ ಪ್ರಸ್ತಾಪವನ್ನು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ. ಹಾಗಿದ್ದೂ, ಸ್ಟೇಷನ್ ಕೋಡ್‌ನೇಮ್‌ನಲ್ಲಿ ಬದಲಾವಣೆ ಮಾಡುತ್ತಿಲ್ಲ.

ರಾಮ ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದ ಭಾರತಪುರ್ ಜಿಲ್ಲೆಯಿಂದಲೇ ಕಲ್ಲುಗಳನ್ನು ತರಿಸಲಾಗಿತ್ತು. ಈ ಅಯೋಧ್ಯೆ ರೈಲು ನಿಲ್ದಾಣ ಅಭಿವೃದ್ಧಿಗೂ ಅಲ್ಲಿಂದಲೇ ಕಲ್ಲುಗಳನ್ನು ತರಿಸಲಾಗಿದೆ. ಗುಣಮಟ್ಟ ಮತ್ತು ಅನುಕೂಲತೆಯ ದೃಷ್ಟಿಯಿಂದ ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಸಹ ಮೀರಿಸುವಂತಹ ಅದರ ನಿಖರವಾದ ಯೋಜಿತ ನಿಲ್ದಾಣವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಶಿಶುಪಾಲನಾ ಕೇಂದ್ರ, ಆನಾರೋಗ್ಯರಿಗೆ ಪ್ರತ್ಯೇಕ ಕೋಣೆ, ಪ್ರವಾಸಿ ಮಾಹಿತಿ ಕೇಂದ್ರ, ಅಗ್ನಿ ಅವಘಡ ನಿರ್ಗಮನ ದ್ವಾರ ಮತ್ತು ದೇಶದಲ್ಲೇ ಅತಿ ದೊಡ್ಡ ಎನ್ನಬಹುದಾದ ಅಂಗಣ ಸೇರಿದಂತೆ ಅನೇಕ ಸೌಲಭ್ಯಗಳು ಈ ರೈಲ್ವೆ ನಿಲ್ದಾಣದಲ್ಲಿ ದೊರೆಯಲಿವೆ ಎಂದು ಮೂಲಗಳು ತಿಳಿಸಿವೆ.

ಮೋದಿಗೆ ರಾಮ ಪೂಜೆ ಮಾಡುವ ಹಕ್ಕಿದೆಯೇ ಎಂದ ಸುಬ್ರಮಣಿಯನ್ ಸ್ವಾಮಿಗೆ ಜಾಡಿಸಿದ ನೆಟ್ಟಿಗರು

ನೇರ ನಡೆ, ದಿಟ್ಟ ಮಾತು, ಯಾರ ಬಗ್ಗೆಯೂ ಟೀಕೆಗಳನ್ನು ವ್ಯಕ್ತಪಡಿಸಲು ಹಿಂಜರಿಯದ ಕಾರಣ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ (Subramanian Swamy) ಅವರು ಅಪಾರ ಅಭಿಮಾನಿಗಳನ್ನೂ, ಬೆಂಬಲಿಗರನ್ನೂ ಹೊಂದಿದ್ದಾರೆ. ಆದರೆ, “ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ರಾಮ ಪೂಜೆ ಮಾಡುವ ಹಕ್ಕಿದೆಯೇ” ಎಂದು ಸುಬ್ರಮಣಿಯನ್‌ ಸ್ವಾಮಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ನೆಟ್ಟಿಗರು ಸುಬ್ರಮಣಿಯನ್ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌

“ರಾಜಕೀಯವಾಗಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ನೀವು ಮೋದಿ ಜತೆಗೆ ಇರಬೇಕು. ಎಲ್ಲ ಭಿನ್ನಾಭಿಪ್ರಾಯ ಬದಿಗಿಟ್ಟು ನೀವು ರಾಮಮಂದಿರ ಉದ್ಘಾಟನೆಯ ಸುವರ್ಣ ಘಳಿಗೆಯಲ್ಲಿ ಭಾಗಿಯಾಗಿ. ಶತಮಾನಗಳ ಹೋರಾಟದ ಭಾಗವಾಗಿ ರಾಮಮಂದಿರದ ಕನಸು ನನಸಾಗುತ್ತಿರುವುದು ಅದ್ಭುತವಲ್ಲವೇ” ಎಂದು ದಿವ್ಯಾ ಕಾಮತ್‌ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಸುಬ್ರಮಣಿಯನ್‌ ಸ್ವಾಮಿ ಅವರ ಅಭಿಪ್ರಾಯವನ್ನು ಖಂಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ರಾಮನ ಕರೆ ಇದ್ದವರು ಬರ್ತಾರೆ; ‘ಅಯೋಧ್ಯೆ’ ಆಮಂತ್ರಣ ನಿರಾಕರಿಸಿದ ಸಿಪಿಎಂಗೆ ಬಿಜೆಪಿ ಚಾಟಿ

Exit mobile version