Site icon Vistara News

Ayodhya Ram Mandir: ಇಂದಿನ `ಮುಖ್ಯ ಯಜಮಾನ’ ಮೋದಿ; ಹಾಗೆಂದರೇನು?

modi mukhya yajaman

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಇಂದು ನಡೆಯುವ ರಾಮ್ ಲಲ್ಲಾ ವಿಗ್ರಹದ ʻಪ್ರಾಣ ಪ್ರತಿಷ್ಠಾ’ ಸಮಾರಂಭದ ʼಮುಖ್ಯ ಯಜಮಾನʼ (mukhya yajaman) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಾಗಿರುತ್ತಾರೆ. ʼಮುಖ್ಯ ಯಜಮಾನʼ ಸೇರಿದಂತೆ ಈ ಸಂದರ್ಭದಲ್ಲಿ ಬಳಸಲಾಗುತ್ತಿರುವ ಹಲವಾರು ಶಾಸ್ತ್ರೀಯ, ಧಾರ್ಮಿಕ, ವೈದಿಕ ಪದಗಳ ಅರ್ಥ ಇಲ್ಲಿದೆ.

ಮುಖ್ಯ ಯಜಮಾನ: ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಯಜಮಾನ ಎನ್ನುವುದು ಧಾರ್ಮಿಕ ಆಚರಣೆ ಅಥವಾ ಸಮಾರಂಭವನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುತ್ತದೆ. ವಿಶೇಷವಾಗಿ ಯಜ್ಞದ ಆಚರಣೆಯಲ್ಲಿ ಇದನ್ನು ಬಳಸಲಾಗುವುದು. ಯಜಮಾನ ಆಚರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಅದರ ಸರಿಯಾದ ಕ್ರಮ, ಸಂಘಟನೆ ಮತ್ತು ನಿರ್ವಹಣೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಧಾರ್ಮಿಕ ಸಮಾರಂಭಗಳಲ್ಲಿ ಯಜಮಾನನ ಸ್ಥಾನ ಮಹತ್ವದ್ದು. ಅತಿಥೇಯ. ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ದೇವಾಲಯದ ಟ್ರಸ್ಟ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮುಖ್ಯ ಯಜಮಾನ ಎಂದು ನಾಮಕರಣ ಮಾಡಿದೆ. ಟ್ರಸ್ಟ್‌ನ ಹಿರಿಯ ಸದಸ್ಯ ಡಾ.ಅನಿಲ್ ಮಿಶ್ರಾ ಮತ್ತು ಅವರ ಪತ್ನಿಯನ್ನು ಪೂರ್ವಾಭಿಷೇಕ ಹಾಗೂ ಈ ಹಿಂದಿನ ಆರು ದಿನಗಳ ಆಚರಣೆಗಳಲ್ಲಿ ನಾಮನಿರ್ದೇಶನ ಮಾಡಿದೆ.

ಕಲಶ ಪೂಜೆ: ಕಲಶ ಪೂಜೆಯು ನವರಾತ್ರಿ, ದುರ್ಗಾ ಪೂಜೆ ಅಥವಾ ದೇವಾಲಯಗಳಲ್ಲಿ ಯಾವುದೇ ಪ್ರಮುಖ ಮಂಗಳಕರ ಸಂದರ್ಭಗಳಲ್ಲಿ ನಡೆಸುವ ಪ್ರಮುಖ ಆಚರಣೆ. ಕಲಶದಲ್ಲಿರುವ ನೀರು ಇಡೀ ಸೃಷ್ಟಿಯು ಹೊರಹೊಮ್ಮಿದ ಆದಿಸ್ವರೂಪದ ನೀರನ್ನು ಪ್ರತಿನಿಧಿಸುತ್ತದೆ. ನೀರು ಜೀವವನ್ನು ಸೃಷ್ಟಿಸುತ್ತದೆ ಮತ್ತು ಸೃಷ್ಟಿಯ ಎಲ್ಲಾ ರೂಪಗಳ ಮೂಲ ಎಂದು ನಂಬಲಾಗಿದೆ. ಮಾವಿನ ಎಲೆಗಳು ಸೃಷ್ಟಿಯನ್ನು ಸಂಕೇತಿಸುತ್ತದೆ. ಬ್ರಹ್ಮಾಂಡವನ್ನು ಪೂಜಿಸಲು ಕಲಶ ಪೂಜೆಯನ್ನು ನಡೆಸಲಾಗುತ್ತದೆ.

ಧ್ವಜ ದಂಡ: ಧ್ವಜ ಸ್ತಂಭ ಅಥವಾ ಧ್ವಜ ದಂಡವು ದೇವಾಲಯದ ಮುಖ್ಯ ರಚನೆಯ ಮೇಲ್ಭಾಗದಲ್ಲಿ ನಿರ್ಮಿಸಲಾಗುವ ಕಂಬ. ಇದು ದೇವಾಲಯದ ಗರ್ಭಗೃಹ ಮತ್ತು ಬ್ರಹ್ಮಾಂಡದ ನಡುವಿನ ಸಂಪರ್ಕ ಎಂದು ನಂಬಲಾಗಿದೆ. ರಾಮಮಂದಿರದಲ್ಲಿ 55 ಕೆ.ಜಿ ತೂಕದ ಧ್ವಜದಂಡವನ್ನು ಅಳವಡಿಸಲಾಗಿದೆ. “ಧ್ವಜ ದಂಡವು ಬಹುಶಃ ಯಾವುದೇ ದೇವಾಲಯದ ಪ್ರಮುಖ ಲಕ್ಷಣ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ದೇವಸ್ಥಾನ ಇರುವವರೆಗೂ ಅದು ಇರುತ್ತದೆ. ಧ್ವಜ ಸ್ತಂಭವು ಗರ್ಭಗುಡಿಯನ್ನು ವಿಶ್ವಕ್ಕೆ ಸಂಪರ್ಕಿಸುತ್ತದೆ ಮತ್ತು ದೇವರ ಆಶೀರ್ವಾದವನ್ನು ಬಯಸುವವರಿಗೆ ಧನಾತ್ಮಕ ಶಕ್ತಿಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಅನುಷ್ಠಾನ: ಯಾವುದೇ ಧಾರ್ಮಿಕ ಆಚರಣೆ ಮಾಡುವಾಗ ಮಂತ್ರ ಉಚ್ಚಾರಣೆ, ಸ್ತೋತ್ರಗಳ ಪಠಣ, ಮಂತ್ರಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಂತೆ ಕ್ರಿಯೆಗಳ ಸರಣಿ ಇರುತ್ತದೆ. ಆಚರಣೆಯ ಸಮಯದಲ್ಲಿ ನಡೆಸಲಾಗುವ ಈ ಅನುಕ್ರಮ ಕ್ರಿಯೆಗಳನ್ನು ಒಟ್ಟಾಗಿ ಅನುಷ್ಠಾನ ಎಂದು ಕರೆಯಲಾಗುತ್ತದೆ.

ಪ್ರಾಣ ಪ್ರತಿಷ್ಠಾ: ಪ್ರಾಣ ಪ್ರತಿಷ್ಠೆಯು (pran pratistha) ಪವಿತ್ರೀಕರಣದೊಂದಿಗೆ ಸಂಬಂಧಿಸಿದೆ. ಈ ಪದವು ಆಳವಾದ ಪ್ರಾಮುಖ್ಯತೆಯನ್ನು ಹೊಂದಿರುವ ಹಿಂದೂ ಆಚರಣೆಯನ್ನು ಉಲ್ಲೇಖಿಸುತ್ತದೆ. ಇದರರ್ಥ, ದೇವತೆಯನ್ನು ವಿಗ್ರಹಕ್ಕೆ ಆವಾಹನೆ ಮಾಡುವುದು. ಆ ಮೂಲಕ ಮೂರ್ತಿಯಲ್ಲಿ ಪವಿತ್ರತೆ ಅಥವಾ ದೈವಿಕ ಸಾರವನ್ನು ತುಂಬಲಾಗುತ್ತದೆ. ಪ್ರಾಣ ಎಂದರೆ ಜೀವ, ಪ್ರತಿಷ್ಠೆ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾವನ್ನು “ಜೀವ ಶಕ್ತಿಯ ಸ್ಥಾಪನೆ” ಅಥವಾ “ದೇವತೆಯನ್ನು ಜೀವಕ್ಕೆ ತರುವ” ಕ್ರಿಯೆ ಎಂದು ಅರ್ಥೈಸಿಕೊಳ್ಳಬಹುದು ಎಂದು ವಾರಣಾಸಿಯ ಪ್ರಸಿದ್ಧ ವೇದ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಹೇಳುತ್ತಾರೆ.

ಗರ್ಭ ಗೃಹ: ಗರ್ಭಗೃಹ ಜನಪ್ರಿಯ ಪದ. ಗರ್ಭ ಪದವು ಅಕ್ಷರಶಃ ಗರ್ಭ ಪದದಿಂದ ಬಂದಿದೆ. ಗೃಹ ಎಂದರೆ ಮನೆ. ಗರ್ಭಗೃಹವು ದೇವಾಲಯದ ಮುಖ್ಯ ವಿಗ್ರಹವನ್ನು ಇರಿಸುವ ಭಾಗ.

ಪ್ರಾಯಶ್ಚಿತ್ತ ಪೂಜೆ: ಪ್ರಾಯಶ್ಚಿತ್ತ ಪದವು ಕ್ಷಮೆ ಅಥವಾ ಪ್ರಾಯಶ್ಚಿತ್ತವನ್ನು ಕೋರುವುದು ಎಂದರ್ಥ. ಇದು ಸನಾತನ ಧರ್ಮದಲ್ಲಿ ನಡೆಸಲಾಗುವ ಕಾರ್ಯಕ್ರಮ. ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ನಡೆಸುವ ವ್ಯಕ್ತಿಯು ಅದನ್ನು ಆಚರಿಸಬೇಕು. ಇದು ಆತ್ಮದ ಶುದ್ಧೀಕರಣವನ್ನು ಗುರಿಯಾಗಿರಿಸಿಕೊಳ್ಳುತ್ತದೆ.

ಇದನ್ನೂ ಓದಿ: Ram Mandir : ರಾಮ ಮಂದಿರದ ವಿಶೇಷತೆಗಳ ಸಂಕ್ಷಿಪ್ತ ವಿವರ ಇಲ್ಲಿದೆ

Exit mobile version