ನವ ದೆಹಲಿ: ಬಾಬರಿ ಕಟ್ಟಡ ಧ್ವಂಸಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆಯ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್ ಅಂತ್ಯ ಹಾಡಿದೆ. ಉತ್ತರ ಪ್ರದೇಶದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಬಾಬರಿ ಮಸೀದಿ ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆಯ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈಗ ಆ ಎಲ್ಲ ಪ್ರಕರಣಗಳಿಗೂ ಮುಕ್ತಿ ದೊರೆತಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ, ಉಮಾ ಭಾರತಿ, ವಿನಯ್ ಕಟಿಯಾರ್ ಸೇರಿದಂತೆ ಅನೇಕರಿಗೆ ನಿರಾಳತೆ ಒದಗಿಸಿದೆ.
ಇದೇ ವೇಳೆ, ಗುಜರಾತ್‌ನ 2002ರ ಗೋಧ್ರೋತ್ತರ ಕೋಮು ದಂಗೆಗೆ ಸಂಬಂಧಿಸಿದ ಎಲ್ಲ ಕೇಸ್‌ಗಳನ್ನು ಕ್ಲೋಸ್ ಮಾಡಿದೆ. ಬಾಬರಿ ಕಟ್ಟಡ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 2019 ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ದೃಷ್ಟಿಯಿಂದ, ನ್ಯಾಯಾಂಗ ನಿಂದನೆ ಪ್ರಕರಣಗಳಿಗೆ ಮೌಲ್ಯ ಉಳಿದುಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗೋಧ್ರಾ ನಂತರದ ಕೋಮುಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಐಟಿ ವಿಚಾರಣೆ ನಡೆಸುತ್ತಿರುವ 9 ಪ್ರಮುಖ ಪ್ರಕರಣಗಳಲ್ಲಿ 8ರಲ್ಲಿ ವಿಚಾರಣೆಗಳು ಮುಗಿದು ಹೋಗುವುದರೊಂದಿಗೆ ಪ್ರಕರಣಗಳು ನಿರುಪಯುಕ್ತವಾಗಿವೆ ಎಂದು ಕೋರ್ಟ್ ಭಾವಿಸಿದೆ.
ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿತ……
ಇದನ್ನು ಓದಿ | Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?