ಫರಿದಾಬಾದ್: ಮಾನವನ ದೇಹದ ಭಾಗಗಳಿರುವ ಟ್ರಾಲಿ ಬ್ಯಾಗ್ (Body Parts in Bag) ಇಲ್ಲಿನ ಪಾಲಿ ರಸ್ತೆಯ ಅರವಳ್ಳಿ ಪರ್ವತದಲ್ಲಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರ್ವತಕ್ಕೆ ಹೋದ ವ್ಯಕ್ತಿಯೊಬ್ಬರು ಈ ಬ್ಯಾಗ್ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬ್ಯಾಗ್ ಪರೀಕ್ಷಿಸಿದಾಗ ಅದರಲ್ಲಿ ಮಾನವನ ದೇಹದ ಭಾಗಗಳಿರುವುದು ಪತ್ತೆಯಾಗಿದೆ.
ಟ್ರಾಲಿ ಬ್ಯಾಗ್‌ನಲ್ಲಿ ದೊರೆತ ಅವಶೇಷಗಳನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ವಿಧಿವಿಜ್ಞಾನ ತಜ್ಞರು ಈ ಕುರಿತು ಪರೀಕ್ಷೆ ನಡೆಸಿದ ಬಳಿಕ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ, ಈ ಭಾಗಗಳು ಭೀಕರವಾಗಿ ಕೊಲೆಯಾದ ಶ್ರದ್ಧಾ ವಾಳ್ಕರ್ ಅವರದ್ದಾಗಿರಬಹುದು ಎಂಬ ಕಾರಣಕ್ಕೆ ದಿಲ್ಲಿ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ಪರೀಕ್ಷಿಸಿದೆ. ಆದರೆ, ಟ್ರಾಲಿ ಬ್ಯಾಗ್‌ನಲ್ಲಿ ದೊರೆತ ಮಾನವ ಅವಶೇಷಗಳಿಗೂ ಶ್ರದ್ಧಾ ಕೊಲೆಗೆ ಸಂಬಂಧವಿಲ್ಲ ಎಂದು ಮೆಹ್ರೌಲಿ ಸಹಾಯಕ ಪೊಲೀಸ್ ಕಮನಿಷನರ್ ಅವರು ಸ್ಪಷ್ಪಪಡಿಸಿದ್ದಾರೆ.
ಈಗ ದೊರೆತಿರುವ ಮಾನವನ ದೇಹದ ಭಾಗಗಳು ಸುಮಾರು 2 ತಿಂಗಳಷ್ಟು ಹಳೆಯದ್ದಾಗಿವೆ. ಆದರೆ, ಈ ದೇಹದ ಭಾಗಗಳು ಗಂಡಸರದ್ದಾ ಅಥವಾ ಮಹಿಳೆಯರದ್ದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಫರಿದಾಬಾದ್ ಡೆಪ್ಯುಟಿ ಪೊಲೀಸ್ ಕಮಿಷನರ್ ನರೇಂದ್ರ ಕದಿಯಾನ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Shraddha Murder Case | ಜಗಳದ ಸಿಟ್ಟಿನ ಗಳಿಗೆಯಲ್ಲಿ ಶ್ರದ್ಧಾಳನ್ನು ಕೊಂದೆ ಎಂದ ಅಫ್ತಾಬ್