Site icon Vistara News

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Porsche car accident ವಿಸ್ತಾರ ಸಂಪಾದಕೀಯ

ಬೆಂಗಳೂರು : ಪುಣೆಯ ಬಾರ್​ ಒಂದರಲ್ಲಿ ಪಾರ್ಟಿ ಮಾಡಿ ಮದ್ಯ ಸೇವಿಸಿದ ನಂತರ ತನ್ನ ಅಪ್ಪನ ಐಷಾರಾಮಿ ಪೋರ್ಷೆ ಕಾರನ್ನು (Pune porsche car crash) ಚಲಾಯಿಸಿಕೊಂಡು ಹೋಗಿ ಅಫಘಾತ ಎಸಗಿದ್ದ 17 ಬಾಲಕನಿಗೆ ನೀಡಲಾಗಿದ್ದ ಜಾಮೀನನ್ನು ಬಾಲ ನ್ಯಾಯ ಮಂಡಳಿ ವಜಾ ಮಾಡಿದೆ. ಬಾಲಕ ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಮದ್ಯದ ಮತ್ತಿನಲ್ಲಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದವನಿಗೆ ಬೇಲ್​ ಕೊಟ್ಟ ಬಗ್ಗೆಯೂ ಚರ್ಚೆಗಳು ನಡೆದಿದ್ದವು.

ಅಪಘಾತ ಎಸಗಿ ಇಬ್ಬರನ್ನು ಬಲಿ ಪಡೆದ ಅಪ್ರಾಪ್ತ ವಯಸ್ಕನನ್ನು ಮಕ್ಕಳ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ ಎಂದು ಮಂಡಳಿ ಹೇಳಿದೆ. ಅಪರಾಧದ ಗಂಭೀರತೆಯನ್ನು ಆಧರಿಸಿ ವಿಚಾರಣೆ ಸಮಯದಲ್ಲಿ ಅಪ್ರಾಪ್ತ ಆರೋಪಿಗಳನ್ನು ವಯಸ್ಕರಂತೆ ಪರಿಗಣಿಸಬೇಕೆಂದು ಪುಣೆ ಪೊಲೀಸರು ಒತ್ತಾಯಿಸಿದ್ದರು. ಅದರ ಹಿನ್ನೆಲೆಯಲ್ಲಿ ಬೇಲ್ ರದ್ದು ಮಾಡಲಾಗಿದೆ. ಹೆಚ್ಚಿನ ತನಿಖೆಯ ಪ್ರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನ್ಯಾಯ ಮಂಡಳಿ ಹೇಳಿದೆ.

ಪುಣೆಯಲ್ಲಿ ಪೋರ್ಷೆ ಕಾರಿನಲ್ಲಿ ಅತಿ ವೇಗವಾಗಿ ಸಾಗಿದ ಬಾಲಕ ಇಬ್ಬರು ಐಟಿ ವೃತ್ತಿಪರರಿಬ್ಬರ ಸಾವಿಗೆ ಕಾರಣನಾಗಿದ್ದ. 17 ವರ್ಷದ ಬಾಲಕನಿಗೆ 25 ವರ್ಷ ತುಂಬುವವರೆಗೆ ಚಾಲನಾ ಪರವಾನಗಿ ನೀಡುವುದನ್ನು ನಿಷೇಧಿಸಲಾಗುವುದುಎಂದು ಮಹಾರಾಷ್ಟ್ರ ಸಾರಿಗೆ ಆಯುಕ್ತ ವಿವೇಕ್ ಭೀಮನ್ವರ್ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ:

ಕಾರಿನ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್​ ಅಗರ್ವಾಲ್​ 1,758 ರೂ.ಗಳ ಶುಲ್ಕವನ್ನು ಪಾವತಿಸದ ಕಾರಣ ಪೋರ್ಷೆ ಟೇಕಾನ್ ನ ಶಾಶ್ವತ ನೋಂದಣಿ ಆಗಿರಲಿಲ್ಲ. ಆ ಪ್ರಕ್ರಿಯೆ ಮಾರ್ಚ್ ನಿಂದ ಬಾಕಿ ಉಳಿದಿದೆ ಎಂದು ರಾಜ್ಯ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಸೆಕ್ಷನ್ 158 ರ ಅಡಿಯಲ್ಲಿ ಹೊಸ ಪ್ರಕರಣ ದಾಖಲಾದ ನಂತರ ಬಾಲಕನನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಿಶಾಲ್ ಅಗರ್ವಾಲ್ ಅವರನ್ನು ಬುಧವಾರ ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ಮೇ 24 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಚಾಣಾಕ್ಷತನ ಮೆರೆದ ಪೊಲೀಸರು
ವಿಶಾಲ್‌ ಅಗರ್ವಾಲ್‌ ಇಷ್ಟೆಲ್ಲ ಯೋಜನೆ ರೂಪಿಸಿದರೂ ಪುಣೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಂಭಾಜಿನಗರದಲ್ಲಿ ವಿಶಾಲ್‌ ಅಗರ್ವಾಲ್‌ ಅವರನ್ನು ಬಂಧಿಸಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ವಿಶಾಲ್‌ ಅಗರ್ವಾಲ್‌ ಗೆಳೆಯನ ಕಾರಿನ ಜಿಪಿಎಸ್‌ ಟ್ರ್ಯಾಕ್‌ ಮಾಡಿ, ಕೊನೆಗೂ ಅವರನ್ನು ಬಂಧಿಸಿದ್ದಾರೆ. ಸಂಭಾಜಿ ನಗರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವಿಶಾಲ್‌ ಅಗರ್ವಾಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

Exit mobile version