Site icon Vistara News

Mallikarjun Kharge: ನಿಷೇಧಿತ ಪಿಎಫ್ಐ ಜತೆ ಬಜರಂಗದಳ ಹೋಲಿಕೆ; ಖರ್ಗೆಗೆ ನೋಟಿಸ್ ನೀಡಿದ ಪಂಜಾಬ್‌ನ ಸ್ಥಳೀಯ ಕೋರ್ಟ್!

Mallikarjun Kharge

Rahul Gandhi died for country: Mallikarjun Kharge's Tongue Slips, BJP Taunts

ನವದೆಹಲಿ: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಸ್ಥಳೀಯ ನ್ಯಾಯಾಲಯವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ್ ಖರ್ಗೆ (Mallikarjun Kharge) ಅವರಿಗೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಬಜರಂಗದಳ ಮತ್ತು ಪಿಎಫ್ಐಗಳಂಥ ಸಮಾಜವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಭರವಸೆಯನ್ನು ನೀಡಿತ್ತು. ಆದರೆ, ನಿಷೇಧಿತ ದೇಶದ್ರೋಹಿ ಸಂಘಟನೆ ಪಿಎಫ್ಐ ಜತೆಗೆ ಬಜರಂಗಳ ದಳ ಹೋಲಿಕೆ ಮಾಡಲಾಗಿದೆ ಎಂದು ಆರೋಪಿಸಿ ಪಂಜಾಬ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮ್ಮೆಯನ್ನು ಹಿಂದೂ ಸಂಘಟನೆಯೊಂದು ದಾಖಲಿಸಿತ್ತು.

ಪಂಜಾಬ್‌ನ ಸಂಗ್ರೂರ್ ಜಿಲ್ಲಾ ನ್ಯಾಯಾಲಯವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟಿಸ್ ನೀಡಿದೆ. ಅಲ್ಲದೇ, ಜುಲೈ 10ರಂದು ಕೋರ್ಟಿಗೆ ಹಾಜರಾಗಲು ಸೂಚಿಸಿದೆ. ನಿಷೇಧಿತ ಉಗ್ರ ಸಂಘಟನೆ ಪಿಎಫ್ಐ ಜತೆ ಬಜರಂಗದಳ ಹೋಲಿಕೆ ಮಾಡಿದ್ದನ್ನು ಪ್ರಶ್ನಿಸಿ ಹಿಂದೂ ಸುರಕ್ಷಾ ಪರಿಷತ್ ಅಧ್ಯಕ್ಷ ಹಿತೇಶ್ ಭಾರದ್ವಾಜ್ ಎಂಬುವವರು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಇದಕ್ಕೂ ಮೊದಲು ವಿಶ್ವ ಹಿಂದೂ ಪರಿಷತ್ ಚಂಡೀಗಢ ಘಟಕ ಕೂಡ ಖರ್ಗೆ ಅವರಿಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ನೋಟಿಸ್ ಕಳುಹಿಸಿತ್ತು.

ಬಳಿಕ ಹಿಂದೂ ಸುರಕ್ಷಾ ಪರಿಷತ್ ಅಧ್ಯಕ್ಷ ಹಿತೇಶ್ ಭಾರದ್ವಾಜ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಸ್ಥಳೀಯ ಕೋರ್ಟ್‌ನಲ್ಲಿ ದಾಖಲಿಸಿದ್ದರು. ಸಿವಿಲ್ ಕೋರ್ಟ್ ಜಡ್ಜ್ ರಮಣದೀಪ್ ಕೌರ್ ಅವರು ಖರ್ಗೆ ಅವರಿಗೆ ಈಗ ನೋಟಿಸ್ ನೀಡಿದ್ದಾರೆ .

ಇದನ್ನೂ ಓದಿ: ಬಿಜೆಪಿಗರೇ, ನನ್ನನ್ನು ಮುಗಿಸಿದರೆ ನಿಮಗೆ ಅನುಕೂಲ ಅನ್ನೋದಾದ್ರೆ ಹಾಗೆ ಮಾಡಿ: ಮಲ್ಲಿಕಾರ್ಜುನ ಖರ್ಗೆ

ಬಜರಂಗದಳ ನಿಷೇಧ ಭರವಸೆಯು ಚುನಾವಣೆ ವೇಳೆ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಬಿಜೆಪಿಯನ್ನೇ ಇದನ್ನು ಅಸ್ತ್ರವಾಗಿ ಬಳಸಿಕೊಂಡಿತು. ಪ್ರಧಾನಿ ಮೋದಿ ಅವರಂತು ಬಜರಂಗ ದಳ ನಿಷೇಧ ವಿಷಯವನ್ನು ಬಜರಂಗಿಗೆ ಮಾಡಿದ ಅವಮಾನ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದರು. ತಮ್ಮೆಲ್ಲ ಚುನಾವಣಾ ಪ್ರಚಾರ ಸಭೆಗಳಲ್ಲಿ ಜೈ ಬಜರಂಗಿಬಲಿ ಎಂದು ಘೋಷಣೆ ಕೂಗುವಂತೆ ಮಾಡುತ್ತಿದ್ದರು. ಅಲ್ಲದೇ, ಜೈ ಬಜರಂಗಬಲಿ ಎನ್ನುತ್ತಾ ಮತ ಹಾಕಲು ಜನರಿಗೆ ಕರೆ ನೀಡಿದ್ದರು. ಆದರೆ, ಈ ತಂತ್ರವೇನೂ ಬಿಜೆಪಿಗೆ ಅಧಿಕಾರವನ್ನು ತಂದುಕೊಡಲಿಲ್ಲ. ಕಾಂಗ್ರೆಸ್ ಭರ್ಜರಿ ಜಯ ಬಾರಿಸಿತು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version