Site icon Vistara News

2027ರ ಹೊತ್ತಿಗೆ ಡೀಸೆಲ್​ ಚಾಲಿತ 4 ಚಕ್ರ ವಾಹನಗಳು ಬ್ಯಾನ್​?; ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ ವರದಿ ಏನು?

Ban On Diesel Vehicles by 2027 What Panel Recommended to Government

#image_title

ನವ ದೆಹಲಿ: 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ 2027ರ ಹೊತ್ತಿಗೆ ಡೀಸೆಲ್​ ಚಾಲಿತ ನಾಲ್ಕು ಚಕ್ರಗಳ ವಾಹನಗಳ (Ban On Diesel Vehicles)ಬಳಕೆಯನ್ನು ನಿಷೇಧಿಸಬೇಕು ಮತ್ತು ಅವುಗಳ ಬದಲು ಎಲೆಕ್ಟ್ರಿಕ್​ ಮತ್ತು ಗ್ಯಾಸ್​ ಫ್ಯುಯೆಲ್​ (ಅನಿಲ ಇಂಧನ) ಚಾಲಿತ ವಾಹನಗಳ ಬಳಕೆಗೆ ಅನುಮತಿ ಕೊಡಬೇಕು ಎಂದು ಪೆಟ್ರೋಲಿಯಂ ಸಚಿವಾಲಯದಿಂದ ರಚಿಸಲ್ಪಟ್ಟ ಸಮಿತಿಯೊಂದು ವರದಿ ನೀಡಿದೆ. ಈ ಸಮಿತಿಯ ನೇತೃತ್ವವನ್ನು ತೈಲ ಸಚಿವಾಲಯದ ಮಾಜಿ ಕಾರ್ಯದರ್ಶಿ ತರುಣ್ ಕಪೂರ್​ ಅವರು ವಹಿಸಿದ್ದರು.

‘ಮೋಟಾರ್​ಸೈಕಲ್​, ಸ್ಕೂಟರ್​​ಗಳು, ಮೂರು ಚಕ್ರದ ವಾಹನಗಳು ಸೇರಿ ಎಲ್ಲ ರೀತಿಯ ಆಂತರಿಕ ದಹನಕಾರಿ ಎಂಜಿನ್​ ವ್ಯವಸ್ಥೆ ಇರುವ ವಾಹನಗಳನ್ನು ಹಂತಹಂತವಾಗಿ ನಿಷೇಧಿಸಿ, 20235ರ ಹೊತ್ತಿಗೆ ಸಂಪೂರ್ಣವಾಗಿ ಅವುಗಳ ಬಳಕೆ ನಿಲ್ಲಿಸಬೇಕು’ ಎಂದೂ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಅಷ್ಟೇ ಅಲ್ಲ, ನಗರ ಪ್ರದೇಶಗಳಲ್ಲಿ ಸಂಚರಿಸಲು ಡೀಸೆಲ್ ಚಾಲಿತ ಸಿಟಿ ಬಸ್​ಗಳನ್ನು ಖರೀದಿ ಮಾಡಬಾರದು’ ಎಂದೂ ಹೇಳಿದೆ. ಈ ವರ್ಷ ಫೆಬ್ರವರಿಯಲ್ಲೇ ಈ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಅದನ್ನಿನ್ನೂ ಸರ್ಕಾರ ಅಂಗೀಕಾರ ಮಾಡಿಲ್ಲ. ಹಾಗೊಮ್ಮೆ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿ, ನಿಷೇಧ ಮಾಡಲು ಮುಂದಾದರೆ, ಡೀಸೆಲ್​​ನಿಂದ ಚಾಲಿತಗೊಳ್ಳುವ ಕಾರುಗಳು, ಜೀಪ್​ಗಳೆಲ್ಲ ಬ್ಯಾನ್ ಆಗುತ್ತವೆ.

ಇದನ್ನೂ ಓದಿ: Vehicle Scrap Policy | ಮುಂದಿನ ವರ್ಷ ಏಪ್ರಿಲ್‌ನಿಂದ 15 ವರ್ಷಗಿಂತ ಹಳೆಯ ವಾಹನಗಳು ಸ್ಥಗಿತ!

ಆಂತರಿಕ ದಹನಕಾರಿ ಎಂಜಿನ್​​ಗಳಿಂದ ಸಂಚಿರಿಸುವ ಅಂದರೆ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು 20235ರ ಹೊತ್ತಿಗೆ ಸಂಪೂರ್ಣವಾಗಿ ನಿಷೇಧಿಸಲು, ಎಲೆಕ್ಟ್ರಿನ್​ ವಾಹನಗಳು ಅತ್ಯುತ್ತಮ ಪರ್ಯಾಯವಾಗಬಲ್ಲವು. ಅವುಗಳನ್ನು ಈಗಿನಿಂದಲೇ ಪ್ರಚಾರ ಮಾಡಬಹುದು. ಅದರ ಹೊರತಾಗಿ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ಕಾರುಗಳು, ಟ್ಯಾಕ್ಸಿ, ಜೀಪ್​​ಗಳನ್ನು ನಿಷೇಧಿಸಿ, ಅದರ ಬದಲಿಗೆ ಶೇ.50ರಷ್ಟು ಎಲೆಕ್ಟ್ರಿಕ್​ ಕಾರು/ಟ್ಯಾಕ್ಸಿ/ಜೀಪ್​ ಮತ್ತು ಶೇ.50ರಷ್ಟು ಎಥೆನಾಲ್​ ಮಿಶ್ರಿತ ಪೆಟ್ರೋಲ್​ ಬಳಸುವ ನಾಲ್ಕು ಚಕ್ರಗಳ ವಾಹನಗಳನ್ನು ಬಳಕೆಗೆ ತರುವುದು ಉತ್ತಮ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ. ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳನ್ನು ಎಷ್ಟಾಗತ್ತೋ, ಅಷ್ಟು ಬೇಗ ರಸ್ತೆಗಳಿಂದ ಹೊರಹಾಕುವುದು ಒಳ್ಳೆಯದು. ಅದರಲ್ಲೂ ಲಕ್ಷಾಂತರ ಜನರು ಇರುವ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಇದ್ದೇ ಇರುತ್ತದೆ. ಈ ವಾಹನಗಳನ್ನು ನಿಷೇಧ ಮಾಡುವುದರಿಂದ ಮಾಲಿನ್ಯ ಪ್ರಮಾಣ ತಗ್ಗಿಸಬಹುದು ಎಂದೂ ಹೇಳಿದೆ. ಕಾರ್ಖಾನೆ ಮತ್ತು ಅಟೊಮೊಬೈಲ್​ ಕ್ಷೇತ್ರದಲ್ಲಿ ಡೀಸೆಲ್​​ಗೆ ಪರ್ಯಾಯವಾಗಿ ನೈಸರ್ಗಿಕ ಅನಿಲ ಬಳಕೆಯನ್ನು ಹೆಚ್ಚಿಸಲು ಸಮಿತಿ ಶಿಫಾರಸ್ಸು ಮಾಡಿದೆ.

Exit mobile version