Site icon Vistara News

SIMI Terror Group: ಉಗ್ರ ಸಂಘಟನೆ ಸಿಮಿ ಮೇಲಿನ ನಿಷೇಧ ಮತ್ತೆ ಐದು ವರ್ಷ ವಿಸ್ತರಣೆ

Ban on SIMI Terror Group extended for another five years

amit shah

ನವದೆಹಲಿ: ಭಯೋತ್ಪಾದನೆಯ (Terrorism) ವಿರುದ್ಧ ಶೂನ್ಯ ಸಹಿಷ್ಣ ನೀತಿಯ (zero tolerance) ಭಾಗವಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(Student Islamic Movement of India – SIMI) ಸಂಘಟನೆ ಮೇಲಿನ ನಿಷೇಧವನ್ನು ಮುಂದಿನ ಐದು ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹೇಳಿದ್ದಾರೆ. 2001ರಲ್ಲಿ ಈ ಸಂಘಟನೆ ಮೇಲೆ ನಿಷೇಧ ಹೇರಲಾಗಿತ್ತು. ಆ ನಿಷೇಧವನ್ನು ವಿಸ್ತರಣೆ ಮಾಡುತ್ತಾ ಬರಲಾಗಿದೆ(SIMI Terror Group).

ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ಭಯೋತ್ಪಾದನೆಯಲ್ಲಿ ತೊಡಗಿರುವ ಸಂಘಟನೆಯು ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿದೆ ಎಂದು ಶಾ ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರ ದೃಷ್ಟಿಯನ್ನು ಬಲಪಡಿಸುವ ನಿಟ್ಟಿನಲ್ಲಿ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ’ ಸಂಘಟನೆಯನ್ನು ಯುಎಪಿಎ ಅಡಿಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ‘ಕಾನೂನುಬಾಹಿರ ಸಂಘ’ ಎಂದು ಘೋಷಿಸಲಾಗಿದೆ ಎಂದು ಅಮಿತ್ ಶಾ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

2017ರ ಗಯಾ ಸ್ಫೋಟ, 2014 ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ, 2014ರ ಭೋಪಾಲ್ ಜೈಲು ಬ್ರೇಕ್ ಸೇರಿದಂತೆ ಅನೇಕ ಭಯೋತ್ಪಾದನಾ ಕೃತ್ಯಗಳಲ್ಲಿ ಸಿಮಿ ಸಂಘಟನೆಯು ಸದಸ್ಯರು ಭಾಗಿಯಾಗಿದ್ದಾರೆ.

1977ರ ಏಪ್ರಿಲ್ 25ರಂದು ಉತ್ತರ ಪ್ರದೇಶದಲ್ಲಿ ಅಲಿಘಡದಲ್ಲಿ ಸಿಮಿ ಸಂಘಟನೆಯನ್ನು ಸ್ಥಾಪನೆ ಮಾಡಲಾಯಿತು. ಈ ಸಂಘಟನೆಯ ಮುಖ್ಯ ಉದ್ದೇಶವನ್ನು ಸ್ವತಂತ್ರ ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನು ಮಾಡುವುದು ಮತ್ತು ಇದಕ್ಕಾಗಿ ದೇಶದಲ್ಲಿ ಜಿಹಾದ್ ಸಾರವುದು ಆಗಿತ್ತು. ಪರಿಣಾಮ ದೇಶದ ಅನೇಕ ಕಡೆ ಈ ಸಂಘಟನೆಯ ಸದಸ್ಯರು ವಿವಿಧ ಉಗ್ರ ಕೃತ್ಯಗಳಲ್ಲಿ ಭಾಗಿಯಾದದ್ದು ಸಾಬೀತಾಯಿತು.

SIMI ಅನ್ನು ಏಪ್ರಿಲ್ 25, 1977 ರಂದು ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಸ್ಥಾಪಿಸಲಾಯಿತು ಮತ್ತು ಸಂಘಟನೆಯು ಭಾರತವನ್ನು ಇಸ್ಲಾಮಿಕ್ ರಾಜ್ಯವಾಗಿ ಪರಿವರ್ತಿಸುವ ಮೂಲಕ ವಿಮೋಚನೆಯ ಕಾರ್ಯಸೂಚಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಲಾಗಿದೆ.

ಯುಎಪಿಎ ಅಡಿಯಲ್ಲಿ 2001ರಲ್ಲಿ ಈ ಸಂಘಟನೆಯನ್ನು ನಿಷೇಧಿಸಲಾಯಿತು. ಬಳಿಕ 2019ರಲ್ಲಿ ಐದು ವರ್ಷಗಳ ಕಾಲ ಈ ನಿಷೇಧವನ್ನು ಮುಂದುವರಿಸಲಾಗಿತ್ತು. ಈಗ ಮತ್ತೆ ನಿಷೇಧವನ್ನು ಮುಂದಿನ ಐದು ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: NIA Charges: ನಿಷೇಧಿತ ಪಿಎಫ್ಐ ಕೆಡರ್‌‌‌ನ ಶಸ್ತ್ರಾಸ್ತ್ರ ತರಬೇತಿದಾರ ಇಬ್ರಾಹಿಂ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಎನ್ಐಎ

Exit mobile version