ಲಖನೌ: ವಾರಾಣಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಪರೀಕ್ಷೆಯಲ್ಲಿ ಗೋಮಾಂಸದ (Question On Beef) ವಿಂಗಡಣೆ ಕುರಿತು ಪ್ರಶ್ನೆ ಕೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ವಿವಿಯ ವೃತ್ತಿಪರ ಪದವಿ ಕೋರ್ಸ್ (Bachelor of Vocational Course) ಎರಡನೇ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಗೋಮಾಂಸ ಕುರಿತು ಪ್ರಶ್ನೆ ಕೇಳಿದ ಕಾರಣ ಆಕ್ರೋಶ ವ್ಯಕ್ತವಾಗಿದೆ.
ಕೇಟರಿಂಗ್ ಟೆಕ್ನಾಲಜಿ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ಕುರಿತ ಪ್ರಶ್ನೆ ಪತ್ರಿಕೆಯಲ್ಲಿ “ಗೋಮಾಂಸದ ವಿಂಗಡಣೆ ಕುರಿತು ಬರೆಯಿರಿ” ಎಂಬ ಪ್ರಶ್ನೆ ಕೇಳಲಾಗಿದೆ. ಇಂತಹ ಪ್ರಶ್ನೆ ಕೇಳಿದ್ದಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಆಕ್ರೋಶ ವ್ಯಕ್ತಪಡಿಸಿದೆ. ಯಾರು ಪ್ರಶ್ನೆಪತ್ರಿಕೆ ತಯಾರಿಸಿದ್ದಾರೋ, ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದೂ ಆಗ್ರಹಿಸಿದೆ.
“ಗೋಮಾಂಸದ ವಿಂಗಡಣೆ ಕುರಿತು ಪ್ರಶ್ನೆ ಕೇಳಿರುವುದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಬನಾರಸ್ ವಿವಿ ಸಂಸ್ಥಾಪಕ ಮದನ್ ಮೋಹನ್ ಮಾಳವೀಯ ಅವರ ಆಶಯಗಳಿಗೆ ಕುಂದುಂಟಾಗಿದೆ. ಹಾಗಾಗಿ, ಪ್ರಶ್ನೆ ಪತ್ರಿಕೆ ತಯಾರಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ಎಬಿವಿಪಿ ಎಚ್ಚರಿಸಿದೆ.
ಇದನ್ನೂ ಓದಿ | Suicide Case | ಮುಸ್ಲಿಂ ಪತ್ನಿ ಬಲವಂತವಾಗಿ ಗೋಮಾಂಸ ತಿನ್ನಿಸಿದಳೆಂದು ಹಿಂದೂ ಪತಿ ಆತ್ಮಹತ್ಯೆ