Site icon Vistara News

Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

Bangladesh MP Missing Case

ಕೋಲ್ಕತ್ತಾ: ಚಿಕಿತ್ಸೆಗೆಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ(Kolkata)ಕ್ಕೆ ಚಿಕಿತ್ಸೆಗೆಂದು ಬರುತ್ತಿದ್ದ ಬಾಂಗ್ಲಾದೇಶ(Bangladesh MP Missing)ದ ಸಂಸದನೋರ್ವ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಾರೆ. ಸಂಸದ ಅನ್ವರುಲ್‌ ಅಜೀಂ(Anwarul Azim) ಮೇ 12ರಂದು ಕೋಲ್ಕತ್ತಾಗೆ ಆಗಮಿಸಿದ್ದರು. ಇದಾದ ಬಳಿಕ ಅವರು ತಮ್ಮ ಕುಟುಂಬಸ್ಥರ ಜೊತೆ ಸಂಪರ್ಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅಜೀಂ ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.

ಅವಾಮಿ ಲೀಗ್‌ ಪಕ್ಷದಿಂದ ಮೂರು ಬಾರಿ ಸಂಸದರಾಗಿ ಗೆದ್ದಿರುವ ಅನ್ವರುಲ್‌ ಅಜೀಂ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಆಗಾಗ ಹೆಚ್ಚಿನ ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದಿದ್ದರು. ಇದಾದ ಬಳಿಕ ಅವರು ತಮ್ಮ ಕುಟುಂಬಸ್ಥರ ಜತೆ ಸಂಪರ್ಕ ಕಳೆದುಕೊಂಡಿದ್ದಾರೆ. ಅದೂ ಅಲ್ಲದೇ ಮೇ 14 ರ ನಂತರ ಅವರ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ದಿಲ್ಲಿ ಮತ್ತು ಕೋಲ್ಕತ್ತಾದಲ್ಲಿರುವ ತಮ್ಮ ರಾಜತಾಂತ್ರಿಕ ಅಧಿಕಾರಿಗಳಿಗೆ ವಿಚಾರವನ್ನು ತಿಳಿಸಿದ್ದಾರೆ. ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಜೀಂಗಾಗಿ ಹುಡುಕಾಟ ಶುರುವಾಗಿದೆ. ಅಲ್ಲದೇ ಬಾಂಗ್ಲಾದೇಶ ರಾಯಭಾರ ಕಚೇರಿ ಕೂಡ ತನಿಖೆ ಕೈಗೆತ್ತಿಕೊಂಡಿದೆ. ಇದಾಗ್ಯೂ ಅಜೀಂ ಪತ್ತೆಯಾಗಿಲ್ಲ.

ಘಟನೆ ವಿವರ:

ದೀರ್ಘಾಕಾಲಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಜೀಂ ದರ್ಶನಾ ಗಡಿ ಮೂಲಕ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಅದೇ ದಿನ ಬಾರಾನಗರ್‌ನಲ್ಲಿರುವ ಅವರ ಸ್ನೇಹಿತಿ ಗೋಪಾಲ್‌ ಬಿಸ್ವಾಸ್‌ ಮನೆಗೆ ತೆರಳಿದ್ದರು.ಎರಡು ದಿನಗಳ ನಂತರ ಮೇ 14ರಂದು ಅವರು ಸ್ನೇಹಿತನ ಮನೆಯಿಂದ ಇಲ್ಲೇ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದರು. ಅವತೇ ಅಥವಾ ಮರುದಿನ ವಾಪಾಸ್‌ ಬರುವುದಾಗಿ ಗೋಪಾಲ್‌ ಬಿಸ್ವಾಸ್‌ಗೆ ಅಜೀಂ ಹೇಳಿ ಹೋಗಿದ್ದರು. ಇದಾದ ಬಳಿಕ ಅವರು ವಾಪಾಸ್‌ ಮರಳಿ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಗೋಪಾಲ್‌ ಪೊಲೀಸರಿಗೆ ದೂರು ನೀಡಿ ಘಟನೆ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

ಅಜೀಂ ಬಾಂಗ್ಲಾದೇಶ ಮಾತ್ರವಲ್ಲದೇ ಭಾರತದ ಸಿಮ್‌ ಕೂಡ ಹೊಂದಿದ್ದಾರೆ. ಅವರ ಎರಡೂ ನಂಬರ್‌ ಸ್ವಿಚ್‌ ಆಫ್‌ ಬರ್ತಿದೆ. ಅವರು ತಮ್ಮ ಜೊತೆಗೆ ತಂದಿದ್ದ ಎಲ್ಲಾ ವಸ್ತುಗಳನ್ನು ತಮ್ಮ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಗೋಪಾಲ್‌ ಹೇಳಿದ್ದಾರೆ. ಮತೊಂದೆಎ ಅಜೀಂ ಪುತ್ರಿ ಮುಮ್ತರಿನ್‌ ಫಿರ್ದೋದ್‌ ತಮ್ಮ ತಂದೆ ಕಣ್ಮರೆ ಆಗಿರುವ ಬಗ್ಗೆ ಢಾಕಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.


Exit mobile version