ಜೈಪುರ: ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿ ಇರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜಸ್ಥಾನದಲ್ಲಿ ನೃತ್ಯ ಕಲಾವಿದರ ಜತೆ ಸೇರಿ ತಾವೂ ನೃತ್ಯ ಮಾಡಿದ್ದಾರೆ. ಜೈಪುರ ಏರ್ ಫೋರ್ಟ್ ಗೆ ಹೋದ ಅವರನ್ನು ಅಲ್ಲಿ ಅಧಿಕಾರಿಗಳು ಸ್ವಾಗತಿಸಿದರು. ಹಾಗೇ ಕೆಲವು ಕಲಾವಿದೆಯರು ನೃತ್ಯ ಮಾಡುತ್ತಿದ್ದರು. ವಿಮಾನ ಇಳಿಯುತ್ತಿದ್ದಂತೆ ಎಲ್ಲರಿಗೂ ನಮಸ್ಕರಿಸುತ್ತ ಹೆಜ್ಜೆ ಹಾಕಿದ ಶೇಖ್ ಹಸೀನಾ, ಬಳಿಕ ಆ ಕಲಾವಿದೆಯರ ಜತೆ ತಾವೂ ಸ್ಟೆಪ್ ಹಾಕಿದ್ದಾರೆ. ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಶೇಖ್ ಹಸೀನಾ ಅವರು ಸೆಪ್ಟೆಂಬರ್ 6 ರಂದು ಭಾರತಕ್ಕೆ ಆಗಮಿಸಿದ್ದಾರೆ. ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು..ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಬಾಂಗ್ಲಾದೇಶಕ್ಕೆ ಭಾರತ ಸದಾ ನೆರವಿಗೆ ನಿಲ್ಲುತ್ತದೆ. ಭಾರತ ನಮ್ಮ ಬಹುಕಾಲದ ನಂಬಿಕಸ್ಥ ಗೆಳೆಯ ಎಂದು ಹೇಳಿದ್ದಾರೆ. ಹಾಗೇ, ಈ ಸಲ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆಯ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ಒಟ್ಟು 7 ತಿಳಿವಳಿಕಾ ಒಪ್ಪಂದಗಳಿಗೆ ಸಹಿ ಹಾಕಿವೆ.
ಇದನ್ನೂ ಓದಿ: ಬಾಂಗ್ಲಾಕ್ಕೆ ಭಾರತ ಬಹುಕಾಲದ ಗೆಳೆಯ ಎಂದು ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಶೇಖ್ ಹಸೀನಾ