ನವದೆಹಲಿ: ಭಾರತದಲ್ಲಿ ವಿದೇಶಿ ಕಾನೂನು ಕಂಪನಿಗಳ ಸ್ಥಾಪನೆ ಹಾಗೂ ವಿದೇಶಿ ವಕೀಲರ ಪ್ರಾಕ್ಟೀಸ್‌ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council Of India) ಅನುಮತಿ ನೀಡಿದೆ. ಇದು ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ತೆಗೆದುಕೊಂಡಿರುವ ಮಹತ್ವದ ನಿರ್ಧಾರ ಎಂದೇ ಹೇಳಲಾಗುತ್ತಿದೆ.
ಭಾರತದಲ್ಲಿ ವಿದೇಶಿ ವಕೀಲರ ಪ್ರಾಕ್ಟೀಸ್ ಹಾಗೂ ವಿದೇಶಿ ಕಂಪನಿಗಳ ಕಾರ್ಯನಿರ್ವಹಣೆಯು ನಿಯಮಿತ, ನಿಯಂತ್ರಿತ ಹಾಗೂ ನಿರ್ಬಂಧಿತ ಮಾದರಿಯಲ್ಲಿ ಇರಲಿದೆ. ನಿಯಮಗಳ ಪ್ರಕಾರ, ವಿದೇಶಿ ಕಂಪನಿಗಳು ಹಾಗೂ ವಕೀಲರು ವ್ಯಾಜ್ಯವಲ್ಲದ (Non-Litigious) ಪ್ರಕರಣಗಳಲ್ಲಿ ಮಾತ್ರ ವಾದ ಮಂಡಿಸಲಿದ್ದಾರೆ.
ವಿದೇಶಿ ಕಾನೂನು, ಅಂತಾರಾಷ್ಟ್ರೀಯ ಕಾನೂನು ಪ್ರಕರಣಗಳು ಹಾಗೂ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಮಾತ್ರ ವಿದೇಶಿ ಕಾನೂನು ಕಂಪನಿಗಳು ಹಾಗೂ ವಕೀಲರು ಭಾರತದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಣಿ ಮಾಡಿಕೊಂಡ ಕಂಪನಿಗಳು ಹಾಗೂ ವಕೀಲರು ಮಾತ್ರ ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ಅನುಮತಿ ಇದೆ. ವಿದೇಶಿ ವಕೀಲರ ನೋಂದಣಿಗೆ 20.50 ಲಕ್ಷ ರೂ. ಹಾಗೂ ಕಂಪನಿ ನೋಂದಣಿಗೆ 41 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Nawazuddin and Aaliya : ವಿಚ್ಛೇದನ ಪಡೆಯದೆಯೇ ನವಾಜುದ್ದೀನ್‌ರನ್ನು ವರಿಸಿದ್ದರು ಆಲಿಯಾ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಕೀಲರು