Site icon Vistara News

BBC Documentary On Modi: ಪ್ರದರ್ಶನಕ್ಕೆ ಮುಂದಾದ ಜೆಎನ್‌ಯು ವಿದ್ಯಾರ್ಥಿಗಳು, ಹೈದರಾಬಾದ್‌ ವಿವಿಯಲ್ಲಿ ಶೋ

BBC Documentary On Modi

BBC Documentary On Modi

ನವ ದೆಹಲಿ: ಮೋದಿಯವರ ಕುರಿತು ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ಪ್ರಯತ್ನ ಮುಂದುವರಿದಿದೆ. ಒಂದೆಡೆ ಹೈದರಾಬಾದ್‌ ಯೂನಿವರ್ಸಿಟಿಯ ಕೆಲ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಪ್ರದರ್ಶನ ಏರ್ಪಡಿಸಿದ್ದರೆ, ಇನ್ನೊಂದು ಕಡೆ ಜೆಎನ್‌ಯುವಿನಲ್ಲಿ ಏರ್ಪಡಿಸಲಾಗಿರುವ ಪ್ರದರ್ಶನವನ್ನು ರದ್ದುಪಡಿಸುವಂತೆ ಅಲ್ಲಿನ ಆಡಳಿತ ಕಠಿಣ ಎಚ್ಚರಿಕೆ ನೀಡಿದೆ.

ವಿವಾದಿತ ʼಇಂಡಿಯಾ: ದಿ ಮೋದಿ ಕ್ವೆಶ್ಚನ್‌ʼ ಸಾಕ್ಷ್ಯಚಿತ್ರವನ್ನು ನಾಳೆ ರಾತ್ರಿ 9 ಗಂಟೆಗೆ ಸಾರ್ವಜನಿಕವಾಗಿ ಪ್ರದರ್ಶಿಸಲು ಜೆಎನ್‌ಯುವಿನ ವಿದ್ಯಾರ್ಥಿಗಳ ಒಂದು ಗುಂಪು ಆಯೋಜಿಸಿತ್ತು. ಆದರೆ ಜೆಎನ್‌ಯು ಇದನ್ನು ರದ್ದುಪಡಿಸುವಂತೆ ಎಚ್ಚರಿಸಿದೆ. ʼʼಪ್ರದರ್ಶನಕ್ಕೆ ಯಾವುದೇ ಪೂರ್ವಾನುಮತಿ ಪಡೆದಿಲ್ಲ. ಇಂಥ ಚಟುವಟಿಕೆ ಸಾಮಾಜಿಕ ಸಾಮರಸ್ಯವನ್ನು ಕೆಡಿಸಲಿದೆ. ಹೀಗಾಗಿ ರದ್ದುಪಡಿಸಲು ಆದೇಶಿಸಲಾಗಿದೆʼʼ ಎಂದು ಆಡಳಿತ ತಿಳಿಸಿದೆ. ಉಲ್ಲಂಘಿಸಿದವರ ಮೇಲೆ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದೆ. ʼʼಸಾಕ್ಷ್ಯಚಿತ್ರ ನಿಷೇಧಕ್ಕೆ ಒಳಗಾಗಿಲ್ಲದಿರುವುದರಿಂದ, ಪ್ರದರ್ಶನ ಮುಂದುವರಿಸಲಿದ್ದೇವೆʼʼ ಎಂದು ಸ್ಟೂಡೆಂಟ್‌ ಯೂನಿಯನ್‌ ಹೇಳಿದೆ.

ಇದನ್ನೂ ಓದಿ: BBC Documentary On Modi | ಭಾರತೀಯ ಮುಸ್ಲಿಮರು ಭೂತಕಾಲದಿಂದ ಮುಂದೆ ಸಾಗಿದ್ದಾರೆ, ಬಿಬಿಸಿ ಅಲ್ಲೇ ಇದೆ: ಅಲಿಗಢ ಮುಸ್ಲಿಂ ವಿವಿ ಉಪಕುಲಪತಿ

ಹೈದರಾಬಾದ್‌ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಒಂದು ಗುಂಪು ಜ.21ರಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ ಹಾಗೂ ಮುಸ್ಲಿಂ ಸ್ಟೂಡೆಂಟ್‌ ಫೆಡರೇಶನ್‌ಗಳು ಜತೆಯಾಗಿ ಇದನ್ನು ಪ್ರದರ್ಶಿಸಿದ್ದು, ಸುಮಾರು 50 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ಗುಜರಾತ್‌ ಗಲಭೆಗಳ ಬಗ್ಗೆ ವಿವರಗಳನ್ನು ಹೊಂದಿರುವ ವಿವಾದಿತ ಸಾಕ್ಷ್ಯಚಿತ್ರದ ಎರಡು ಭಾಗಗಳ ಸಾಮಾಜಿಕ ಜಾಲತಾಣಗಳ ಲಿಂಕನ್ನು ಸರ್ಕಾರ ತೆಗೆಸಿಹಾಕಿದೆ. ಪ್ರತಿಪಕ್ಷಗಳ ಮುಖಂಡರು ಸರ್ಕಾರದ ಈ ನಡೆಯನ್ನು ಟೀಕಿಸಿದ್ದು, ತೃಣಮೂಲ ಕಾಂಗ್ರೆಸ್‌ನ ಮಹುವಾ ಮೋಯಿತ್ರಾ ಅವರು ಇದರ ಲಿಂಕ್‌ ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : BBC Documentary On Modi: ಕೇಂದ್ರ ಬ್ಲಾಕ್‌ ಮಾಡಿದರೂ ಪ್ರತಿಪಕ್ಷಗಳಿಂದ ಬಿಬಿಸಿ ಸಾಕ್ಷ್ಯಚಿತ್ರ ಶೇರ್‌, ಬಿಜೆಪಿ ಆಕ್ರೋಶ

Exit mobile version