Site icon Vistara News

S Jaishankar On BBC: ಭಾರತದ ಕಾನೂನು ಪಾಲನೆ ಅನಿವಾರ್ಯ, ಬ್ರಿಟನ್‌ಗೆ ಜೈಶಂಕರ್‌ ಸ್ಪಷ್ಟ ಸಂದೇಶ ರವಾನೆ

BBC must follow law, India’s foreign minister Jaishankar tells UK foreign secretary

S Jaishankar

ನವದೆಹಲಿ: ಭಾರತದಲ್ಲಿರುವ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (BBC) ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಬ್ರಿಟನ್‌ಗೆ ಸ್ಪಷ್ಟ ಸಂದೇಶ (S Jaishankar On BBC) ರವಾನಿಸಿದ್ದಾರೆ. “ಬಿಬಿಸಿಯು ಭಾರತದ ಕಾನೂನುಗಳನ್ನು ಗೌರವಿಸಲೇಬೇಕು” ಎಂಬುದಾಗಿ ಬ್ರಿಟನ್‌ ವಿದೇಶಾಂಗ ವ್ಯವಹಾರಗಳ ಸಚಿವ ಜೇಮ್ಸ್‌ ಕ್ಲೆವೆರ್ಲಿ ಅವರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿ-20 ಸದಸ್ಯ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಜೇಮ್ಸ್‌ ಕ್ಲೆವೆರ್ಲಿ ಅವರನ್ನು ಜೈಶಂಕರ್‌ ಅವರು ನವದೆಹಲಿಯಲ್ಲಿ ಭೇಟಿಯಾದರು. ಇದೇ ವೇಳೆ ಬಿಬಿಸಿ ಕಚೇರಿಗಳಲ್ಲಿ ಐಟಿ ಸಮೀಕ್ಷೆ ವಿಚಾರವೂ ಚರ್ಚೆಗೆ ಬಂದಿದೆ. ಆಗ ಜೈ ಶಂಕರ್‌ ಅವರು ಭಾರತದ ಕಾನೂನಿಗೆ ಗೌರವ ಸಲ್ಲಿಸಬೇಕು ಎಂಬುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

“ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳು ಈ ನೆಲದ ಕಾನೂನನ್ನು ಗೌರವಿಸಬೇಕು” ಎಂಬುದಾಗಿ ಬ್ರಿಟನ್‌ಗೆ ತಿಳಿಸಿದ್ದಾರೆ. ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಫೆಬ್ರವರಿ 14 ಹಾಗೂ 15ರಂದು ಸಮೀಕ್ಷೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿಯು ಆಕ್ಷೇಪಾರ್ಹ ಡಾಕ್ಯುಮೆಂಟರಿ ನಿರ್ಮಿಸಿದ ಕಾರಣಕ್ಕಾಗಿ ಐಟಿ ಪರಿಶೀಲನೆ ನಡೆದಿದೆ ಎಂಬ ಆರೋಪವಿದೆ.

ಇದನ್ನೂ ಓದಿ: IT Survey at BBC Offices: 58 ಗಂಟೆ ಬಳಿಕ ಬಿಬಿಸಿ ಕಚೇರಿಗಳಲ್ಲಿ ‘ಸಮೀಕ್ಷೆ’ ನಿಲ್ಲಿಸಿದ ಐಟಿ, ಸಿಕ್ಕ ದಾಖಲೆ ಏನು?

Exit mobile version