ಲಖನೌ: ಹಿಂದೂ ಕ್ಯಾಲೆಂಡರ್ನ ದಿನಾಂಕಗಳ ಪ್ರಕಾರ ಅಪರಾಧಗಳನ್ನು ನಕ್ಷೆ ಮಾಡಲು ಮತ್ತು ಪತ್ತೆಹಚ್ಚಲು ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರು ಹೊರಡಿಸಿದ ಸುತ್ತೋಲೆಯಲ್ಲಿ ಪೊಲೀಸ್ ಠಾಣೆ ಮಟ್ಟದ ಅಧಿಕಾರಿಗಳಿಗೆ ರ್ದೇಶನ ನೀಡಿದ್ದಾರೆ. ಈ ವರ್ಷದ ಜೂನ್ನಲ್ಲಿ ಹಂಗಾಮಿ ಡಿಜಿಪಿಯಾಗಿ ನೇಮಕಗೊಂಡ 1988 ರ ಬ್ಯಾಚ್ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್, ರಾಜ್ಯವ್ಯಾಪಿ ಸಮೀಕ್ಷೆಯು ಅಮಾವಾಸ್ಯೆಯ ಒಂದು ವಾರದ ಮೊದಲು ಮತ್ತು ಅದರ ನಂತರದ ವಾರದಲ್ಲಿ ಹೆಚ್ಚಿನ ಅಪರಾಧ ಪ್ರಮಾಣವನ್ನು ಸೂಚಿಸಿದೆ ಎಂದು ಹೇಳಿದ್ದಾರೆ. ಹೀಗಾಗಿ ಅದರ ಪ್ರಕಾರವೇ ಅಲರ್ಟ್ ಆಗಿರುವಂತೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ಮುಖ್ಯಸ್ಥರ ಸುತ್ತೋಲೆಯು ಹಿಂದೂ ಕ್ಯಾಲೆಂಡರ್ ಪ್ರಕಾರ ಕರಾಳ ರಾತ್ರಿಗಳ ಹದಿನೈದು ದಿನಗಳನ್ನು ಗುರುತಿಸಲು ಜಿಲ್ಲಾ ಪೊಲೀಸ್ ಘಟಕಗಳಿಗೆ ನಿರ್ದೇಶಿಸಲಾಗಿದೆ. ಈ ರಾತ್ರಿಗಳಲ್ಲಿ ಸ್ವೀಕರಿಸಿದ ಅಪರಾಧ ಎಚ್ಚರಿಕೆಗಳನ್ನು ಸೂಕ್ಷ್ಮವಾಗಿ ಪತ್ತೆಹಚ್ಚಲು ಮತ್ತು ಮುಂಜಾಗ್ರತೆಯನ್ನು ಹೆಚ್ಚಿಸಲು ಜಿಲ್ಲಾ ಪೊಲೀಸ್ ಪಡೆಗಳಿಗೆ ಸೂಚಿಸಲಾಗಿದೆ. ಅಪರಾಧ ಹಾಟ್ಸ್ಪಾಟ್ಗಳನ್ನು ಗುರುತಿಸಲು ಮತ್ತು ಹೆಚ್ಚು ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ಬಳಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಪರಾಧ ಕೇಂದ್ರಗಳನ್ನು ಗುರುತಿಸುವ ಈ ಕಾರ್ಯವನ್ನು ರಾಜ್ಯದ ಪ್ರತಿ ಪೊಲೀಸ್ ಠಾಣೆಯ ಮಟ್ಟಕ್ಕೆ ಮಾಡಬೇಕು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಚಂದ್ರನ ಚಲನೆ ಆಧಾರದ ಮೇಲೆ ಪೋಲೀಸಿಂಗ್ ಅನ್ನು ಹೇಗೆ ಮಾಡಬೇಕು” ಎಂದು ಕುಮಾರ್ ಚಾರ್ಟ್ ಮೂಲಕ ವಿವರಿಸಿದ್ದಾರೆ. ಅಪರಾಧಿಗಳು ಹೆಚ್ಚಾಗಿ ಸುಮ್ಮನೆ ಇದ್ದಾಗ ಸಾರ್ವಜನಿಕರು ಅದನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಅಪರಾಧ ಅಂಶಗಳು ರಾತ್ರಿಯಲ್ಲಿ ಹೆಚ್ಚು ಸಕ್ರಿಯವಾಗಿವೆ ಮತ್ತು ಕೊಲೆ, ಕಳ್ಳತನ, ದರೋಡೆ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳಂತಹ ಘಟನೆಗಳು ಸಾರ್ವಜನಿಕರ ಮೇಳೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಸುತ್ತೋಲೆ ತಿಳಿಸಿದೆ. ನಾಗರಿಕರಿಗೆ ಸುರಕ್ಷಿತ ಭಾವನೆ ಮೂಡಿಸಲು ಪರಿಣಾಮಕಾರಿ ರಾತ್ರಿ ಪೋಲೀಸಿಂಗ್ ಪ್ರಮುಖವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಕತ್ತಲೆ ಇರುವ ರಾತ್ರಿಗಳಲ್ಲಿ ಅಪರಾಧಗಳನ್ನು ಹೆಚ್ಚುವುದು ಸಾಮಾನ್ಯ.. ಪೊಲೀಸರು ಅದಕ್ಕೆ ಪೂರಕವಾಗಿ ಕೆಲವ ಮಾಡುವುದು ಕೂಡ ಹೌದು. ಆದರೆ ಅಧಿಕೃತ ದಾಖಲೆಯಲ್ಲಿ “ಹಿಂದೂ ಕ್ಯಾಲೆಂಡರ್” ಪಾಲಿಸುವುದ ಇದೇ ಮೊದಲು.