Site icon Vistara News

ವಿದ್ಯಾರ್ಥಿ ಮೇಲೆ, ಮೂತ್ರ ವಿಸರ್ಜನೆ; ನಾಲ್ವರನ್ನು ಬಂಧಿಸಿದ ಯುಪಿ ಪೊಲೀಸ್

Beating, urinating on student case, UP Police arrested four people

ನವದೆಹಲಿ: ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ (Meerut) ವಿದ್ಯಾರ್ಥಿಯೊಬ್ಬನಿಗೆ ಥಳಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದೆ(urinating on student). ಈ ಕೇಸ್‌ ಸಂಬಂಧಿತ ಬಂಧಿತರಾದವರ ಸಂಖ್ಯೆ ಒಟ್ಟು ನಾಲ್ಕಕ್ಕೆ ಏರಿಕೆಯಾಗಿದೆ. ನಿನ್ನೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆದ್ದರಿಂದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಸಂತ್ರಸ್ತ ವಿದ್ಯಾರ್ಥಿಯು ಪರೀಕ್ಷೆಯನ್ನು ಮುಗಿಸಿಕೊಂಡು ತನ್ನ ಆಂಟಿಯ ಮನೆಗೆ ಹೋಗುತ್ತಿದ್ದಾಗ ಕೆಲವರು ಆತನ ಮೇಲೆ ಹಲ್ಲೆ ಮಾಡಿ, ಮೂತ್ರ ವಿಸರ್ಜನೆ ಮಾಡಿದ್ದರು. ನವೆಂಬರ್ 13ರಂದು ಈ ಘಟನೆ ನಡೆದಿತ್ತು.

ಘಟನೆ ನಡೆದ ರಾತ್ರಿ ಸಂತ್ರಸ್ತ ವಿದ್ಯಾರ್ಥಿ ಮನೆಗೆ ಹೋಗಿರಲಿಲ್ಲ. ಮರುದಿನ ಬೆಳಗ್ಗೆ ಆತ ಮನೆಗೆ ಹೋದಾಗ, ಹಿಂದಿನ ರಾತ್ರಿ ನಡೆ ಘಟನೆಯ ಕುರಿತು ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ನೀಡಿದ್ದಾನೆ. ಆತ ಜರ್ಜರಿತನಾಗಿದ್ದ ಮತ್ತು ಮೂಗಿಗೆ ಬಲವಾದ ಏಟು ಬಿದ್ದಿತ್ತು. ಆದರೆ, ತನ್ನ ಮೇಲೆ ಆರೋಪಿಗಳು ಮೂತ್ರ ವಿಸರ್ಜನೆ ಮಾಡಿರುವ ಬಗ್ಗೆ ತಿಳಿಸಿರಲಿಲ್ಲ. ಕೆಲವು ದಿನಗಳ ಬಳಿಕ ಈ ವಿಡಿಯೋ ವೈರಲ್ ಆದ ಬಳಿಕ ಇಡೀ ಘಟನೆ ಬಗ್ಗೆ ಗೊತ್ತಾಗಿದೆ.

ವಿಡಿಯೋದಲ್ಲಿ ಕೆಲವರು ಮದ್ಯಪಾನ ಮಾಡಿ ಸಂತ್ರಸ್ತನನ್ನು ಥಳಿಸುತ್ತಿರುವುದನ್ನು ಕಾಣಬಹುದು ಮತ್ತು ನಂತರ ಒಬ್ಬ ವ್ಯಕ್ತಿಯು, ಸಂತ್ರಸ್ತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸಂತ್ರಸ್ತೆ ತನಗೆ ಆದ ಅವಮಾನವನ್ನು ದಾಖಲಿಸಬೇಡಿ ಎಂದು ಅವರಲ್ಲಿ ಮನವಿ ಮಾಡುವುದನ್ನು ಕೇಳಬಹುದು. ದಾಳಿಕೋರರಲ್ಲಿ ಆತನ ಇಬ್ಬರು ಸ್ನೇಹಿತರು ಸೇರಿದ್ದಾರೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 7 ಜನರ ವಿರುದ್ಧ ಮೀರತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಪೈಕಿ ನಾಲ್ವರನ್ನು ಗುರುತಿಸಲಾಗಿದೆ. ಅಲ್ಲದೇ ಈ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಭಾನುವಾರ ತಿಳಿಸಿದ್ದರು. ಆದರೆ, ಈ ಘಟನೆಗೆ ಕಾರಣ ಏನು ಎಂಬುದೂ ಇದುವರೆಗೂ ಗೊತ್ತಾಗಿಲ್ಲ.

ಕುಟುಂಬವು ಮೊದಲು ಜಾಗೃತಿ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಈ ವೇಳೆ, ಸಂತ್ರಸ್ತ ವಿದ್ಯಾರ್ಥಿಯು ಈಗ ದಾಳಿ ನಡೆಸಿರುವ ಕೆಲವರ ಸಂಪರ್ಕ ಬಂದಿದ್ದ ಎನ್ನಲಾಗಿದೆ. ಏಳು ಆರೋಪಿಗಳ ಪೈಕಿ ಇಬ್ಬರು ಆತನ ಸ್ನೇಹಿತರು ಮತ್ತು ಇನ್ನಿಬ್ಬರು ಪರಿಚಯಸ್ಥರು. ಇನ್ನೂ ಮೂವರು ಶಂಕಿತರ ಗುರುತು ಪತ್ತೆಯಾಗಬೇಕಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಆದಿವಾಸಿ ಮೇಲೆ ಮೂತ್ರ ವಿಸರ್ಜನೆ! ಆರೋಪಿ ಬಿಜೆಪಿಯವ? ತನಿಖೆಗೆ ಆದೇಶಿಸಿದ ಮಧ್ಯ ಪ್ರದೇಶ ಸಿಎಂ

Exit mobile version