Site icon Vistara News

Chicken In Mid Day Meal | ಬಂಗಾಳದ ಶಾಲೆಗಳಲ್ಲಿ ಇನ್ನು ಪುಷ್ಕಳ ಭೋಜನ, ಮಧ್ಯಾಹ್ನ ಚಿಕನ್‌, ಹಣ್ಣು ನೀಡಲು ತೀರ್ಮಾನ

Mamata Bannerjee

ಕೋಲ್ಕೊತಾ: ಕರ್ನಾಟಕದ ಶಾಲೆಗಳಲ್ಲಿ ಬಿಸಿಯೂಟಕ್ಕೆ ಮೊಟ್ಟೆ ನೀಡುವ ಕುರಿತು ಭಾರಿ ವಿರೋಧ, ಚರ್ಚೆ, ವಾದ-ಪ್ರತಿವಾದ, ಪ್ರತಿಭಟನೆಗಳು ನಡೆದಿದ್ದವು. ಈಗ ಪರ-ವಿರೋಧ ಚರ್ಚೆ ಇದ್ದೇ ಇರುತ್ತದೆ. ಇದರ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರವು ಶಾಲೆಗಳಲ್ಲಿ ಮಧ್ಯಾಹ್ನ ಪುಷ್ಕಳ ಭೋಜನ (Chicken In Mid Day Meal) ನೀಡಲು ತೀರ್ಮಾನಿಸಿದೆ. ಮಕ್ಕಳಿಗೆ ಚಿಕನ್‌, ಮೊಟ್ಟೆ, ಹಣ್ಣು ನೀಡುವ ನಿರ್ಧಾರ ತೆಗೆದುಕೊಂಡಿದೆ.

ಪಿಎಂ ಪೋಷಣ್‌ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಮಕ್ಕಳಿಗೆ ವಾರದಲ್ಲಿ ಒಮ್ಮೆ ಚಿಕನ್‌, ಮೊಟ್ಟೆ ಹಾಗೂ ಆಯಾ ಕಾಲದ ಹಣ್ಣುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಎಂದಿನಂತೆ, ಅನ್ನ, ಸಾಂಬಾರ್‌, ಆಲೂಗಡ್ಡೆ, ಸೋಯಾಬೀನ್‌ ನೀಡುವುದು ಮುಂದುವರಿಯುತ್ತದೆ.

ಜನವರಿಯಿಂದ ನಾಲ್ಕು ತಿಂಗಳವರೆಗೆ ಚಿಕನ್‌ ಹಾಗೂ ಹಣ್ಣು ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು 371 ಕೋಟಿ ರೂ. ವ್ಯಯಿಸಲಿದೆ. ಇದರಿಂದ ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ 1.16 ಕೋಟಿ ಮಕ್ಕಳಿಗೆ ಮಧ್ಯಾಹ್ನ ಪುಷ್ಕಳ ಭೋಜನ ಸಿಗಲಿದೆ.

ಇದನ್ನೂ ಓದಿ | Model School | ಅಜ್ಜರಣಿ ಸ.ಹಿ.ಪ್ರಾ.ಶಾಲೆಯಲ್ಲಿ ಕೃಷಿ ಪಾಠ; ಆವರಣದಲ್ಲಿದೆ ತರಕಾರಿ ತೋಟ, ಇದರಿಂದಲೇ ಇಲ್ಲಿ ಬಿಸಿಯೂಟ!

Exit mobile version