ಕೋಲ್ಕೊತಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಕುರಿತು ತಮ್ಮ ಸಂಪುಟ ಸಹೋದ್ಯೋಗಿ ಅಖಿಲ್ ಗಿರಿ (Akhil Giri) ಆಡಿರುವ ಆಕ್ಷೇಪಾರ್ಹ ಮಾತುಗಳನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಅವರು ಖಂಡಿಸಿದ್ದಾರೆ. ಅಲ್ಲದೇ, ತೃಣಮೂಲ ಕಾಂಗ್ರೆಸ್ ಪರವಾಗಿ ಅವರು ಕ್ಷಮೆ ಕೂಡ ಕೋರಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಸಚಿವ ಅಖಿಲ್ ಗಿರಿ ಅವರು ಆಡಿದ ಮಾತುಗಳನ್ನು ನಾನು ಖಂಡಿಸುತ್ತೇನೆ. ಸೌಂದರ್ಯವನ್ನು ಬಾಹ್ಯ ಚಹರೆಯನ್ನು ನೋಡಿ ನಿರ್ಧರಿಸಲಾಗದು. ನಿಜ ಸೌಂದರ್ಯ ಒಳಗಿರುತ್ತದೆ. ವೈಯಕ್ತಿಕವಾಗಿ ನಾನು ದ್ರೌಪದಿ ಮುರ್ಮು ಅವರನ್ನು ಆದರಿಸುತ್ತೇನೆ. ಅವರನ್ನು ಬಹಳ ಗೌರವಿಸುತ್ತೇನೆ. ತಪ್ಪಾಗಿದೆ. ಪಕ್ಷದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಪಶ್ಚಿಮ ಬಂಗಾಳದ ಸಚಿವ ಅಖಿಲ್ ಗಿರಿ ಅವರು ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಇದನ್ನು ಖಂಡಿಸಿ ಬಿಜೆಪಿಯ ಪಶ್ಚಿಮ ಬಂಗಾಳದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿತ್ತು. ಅಂತಿಮವಾಗಿ ಸಿಎಂ ಮಮತಾ ಬ್ಯಾನರ್ಜಿ ಅವರೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕಾಯಿತು.
ಇದನ್ನೂ ಓದಿ | ಬ್ರಾಹ್ಮಣರನ್ನು ಅವಹೇಳನ ಮಾಡಿದ ಟಿಎಂಸಿ ನಾಯಕ; ಮಮತಾ ಬ್ಯಾನರ್ಜಿಯೂ ಅದೇ ಸಮುದಾಯ ಎನ್ನುತ್ತಿದ್ದಂತೆ ಟ್ವೀಟ್ ಡಿಲೀಟ್ !