Site icon Vistara News

Kohinoor Diamond | ಕೊಹಿನೂರು ವಜ್ರ, ಟಿಪ್ಪು ಉಂಗುರ ಸೇರಿ ಬ್ರಿಟಿಷರು ಹೊತ್ತೊಯ್ದ ವಿಶ್ವದ ಅಮೂಲ್ಯ ವಸ್ತು ಯಾವವು?

Kohinoor diamond Crown Will Go To Camilla

ನವದೆಹಲಿ: ಬ್ರಿಟನ್‌ನಲ್ಲಿ ಸುದೀರ್ಘವಾಗಿ ಆಡಳಿತ ನಡೆಸಿದ ಕ್ವೀನ್‌ ಎಲಿಜಬೆತ್‌ II (Queen Elizabeth II) ಅವರ ನಿಧನದ ಬೆನ್ನಲ್ಲೇ ಇದುವರೆಗೆ ಅವರು ಧರಿಸುತ್ತಿದ್ದ ಕಿರೀಟದಲ್ಲಿರುವ ಭಾರತದ ಕೊಹಿನೂರು ವಜ್ರವನ್ನು (Kohinoor Diamond) ಮತ್ತೆ ದೇಶಕ್ಕೆ ತರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಕೊಹಿನೂರು ವಜ್ರ ಮಾತ್ರವಲ್ಲ ಟಿಪ್ಪು ಸುಲ್ತಾನ್‌ ಉಂಗುರ ಸೇರಿ ಜಗತ್ತಿನ ಹಲವೆಡೆಯಿಂದ ಬ್ರಿಟಿಷರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಅತ್ಯಮೂಲ್ಯ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಇಂತಹ ನಾಲ್ಕು ಅಮೂಲ್ಯ ವಸ್ತುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಟಿಪ್ಪು ಸುಲ್ತಾನ್‌ ಉಂಗುರ

ಟಿಪ್ಪು ಉಂಗುರ.

೧೭೯೯ರಲ್ಲಿ ನಡೆದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮೃತಪಟ್ಟ ಟಿಪ್ಪು ಸುಲ್ತಾನ್‌ ಬೆರಳಿನಲ್ಲಿದ್ದ ಉಂಗುರವನ್ನು ಬ್ರಿಟಿಷರು ತಮ್ಮ ದೇಶಕ್ಕೆ ತೆಗೆದುಕೊಂಡು ಹೋದರು. ಮಾಧ್ಯಮಗಳ ವರದಿ ಪ್ರಕಾರ, ಈ ಉಂಗುರವನ್ನು ಬ್ರಿಟನ್‌ನ ಅಪರಿಚಿತ ವ್ಯಕ್ತಿಗೆ ೧.೪೫ ಲಕ್ಷ ಪೌಂಡ್‌ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗ್ರೇಟ್‌ ಸ್ಟಾರ್‌ ಆಫ್ ಆಫ್ರಿಕಾ ಡೈಮಂಡ್‌

ವಜ್ರದ ಖನಿಯಾಗಿರುವ ಆಫ್ರಿಕಾದಿಂದಲೂ ಬ್ರಿಟಿಷರು ವಜ್ರದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲೂ, ವಿಶ್ವದಲ್ಲೇ ಬೃಹತ್‌ ಹಾಗೂ ಭಾರದ ವಜ್ರ ಎಂದೇ ಖ್ಯಾತಿಯಾದ “ಗ್ರೇಟ್‌ ಸ್ಟಾರ್‌ ಆಫ್‌ ಆಫ್ರಿಕಾ ಡೈಮಂಡ್‌”ಅನ್ನು ಬ್ರಿಟಿಷರು ಹೊತ್ತೊಯ್ದಿದ್ದು, ಇದು ಕ್ವೀನ್‌ ಎಲಿಜಬೆತ್‌ ಅವರು ಮೆರವಣಿಗೆ ಹೊರಟಾಗಲೆಲ್ಲ ಕಾಣಿಸುತ್ತಿತ್ತು.

ರೊಸೆಟ್ಟಾ ಸ್ಟೋನ್‌

ರೊಸೆಟ್ಟಾ ಶಿಲೆ

ಭಾರತದಲ್ಲಿ ಹೇಗೆ ಕೊಹಿನೂರು ವಜ್ರವನ್ನು ತರಬೇಕು ಎಂಬ ಆಗ್ರಹ ಕೇಳಿಬರುತ್ತಿದೆಯೋ, ಈಜಿಪ್ತ್‌ನಲ್ಲೂ ಹೋರಾಟಗಾರರು ಬ್ರಿಟನ್‌ನಿಂದ ತಮ್ಮ ದೇಶದಿಂದ ತೆಗೆದುಕೊಂಡು ಹೋದ ರೊಸೆಟ್ಟಾ ಶಿಲೆಯನ್ನು ವಾಪಸ್‌ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಶಿಲೆಗೆ ಕ್ರಿಸ್ತಪೂರ್ವದ ಇತಿಹಾಸವಿದೆ, ಫ್ರಾನ್ಸ್‌ ವಿರುದ್ಧ ಗೆಲುವು ಸಾಧಿಸಿದ ಬಳಿಕ ೧೮೦೦ರಲ್ಲಿ ಬ್ರಿಟಿಷರು ಬ್ರಿಟನ್‌ಗೆ ತೆಗೆದುಕೊಂಡು ಹೋಗಿದ್ದರು.

ಎಲ್ಗಿನ್‌ ಮಾರ್ಬಲ್ಸ್‌

ಗ್ರೀಸ್‌ನ ಐತಿಹಾಸಿಕ ಕಟ್ಟಡದ ಗೋಡೆಗಳಿಂದ ೧೮೦೩ರಲ್ಲಿ ಲಾರ್ಡ್‌ ಎಲ್ಗಿನ್‌ ಅವರು ಮಾರ್ಬಲ್‌ಗಳನ್ನು ತೆಗೆದರು ಹಾಗೂ ಇವುಗಳನ್ನು ಬ್ರಿಟಿಷರು ಲಂಡನ್‌ಗೆ ಸಾಗಿಸಿದರು. ಇವುಗಳನ್ನು ವಾಪಸ್‌ ನೀಡಬೇಕು ಎಂದು ೧೯೨೫ರಿಂದಲೂ ಗ್ರೀಸ್‌ ಮನವಿ ಮಾಡುತ್ತಿದೆ. ಆದರೆ, ಈ ಮಾರ್ಬಲ್‌ಗಳು ಬ್ರಿಟಿಷ್‌ ಮ್ಯೂಸಿಯಂನಲ್ಲಿವೆ.

ಇದನ್ನೂ ಓದಿ | Queen Elizabeth’s Death | ಯಾರ ಪಾಲಾಗಲಿದೆ ಕೊಹಿನೂರು ವಜ್ರ ಇರುವ ಕ್ವೀನ್​ ಎಲಿಜಬೆತ್​​ರ ಕಿರೀಟ?

Exit mobile version