Site icon Vistara News

Bhagwant Mann : ಅಪ್ಪ ಮಹಾನ್​ ಕುಡುಕ, ಲಂಪಟ; ಪಂಜಾಬ್ ಸಿಎಂ ಮಾನ್ ಮಾನ ತೆಗೆದ ಪುತ್ರಿ

Seerat Mann

ಚಂಡಿಗಢ: ನನ್ನ ಅಪ್ಪ ಕುಡಿದು ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಗುರುದ್ವಾರಕ್ಕೆ ಪ್ರಾರ್ಥನೆಗೆ ತೆರಳುತ್ತಾರೆ. ಕುಟುಂಬವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅವರು ಅಪ್ಪ ಎಂದು ಕರೆಸಿಕೊಳ್ಳುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಪಂಜಾಬ್​ ಆಪ್​ ಸರ್ಕಾರದ ಸಿಎಂ ಭಗವಂತ್​ ಸಿಂಗ್​ ಮಾನ್ ಅವರ ಪುತ್ರಿ ಮಾಡಿರುವ ಆರೋಪಗಳ ವಿಡಿಯೊವೊಂದು ವೈರಲ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದ ಹೊರತಾಗಿಯೂ ಅಲ್ಲಿನ ಶಿರೋಮಣಿ ಅಕಾಲಿದಳ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದೆ. ವಿರೋಧ ಪಕ್ಷಗಳ ಹಲವಾರು ಮುಖಂಡರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಭಗವಂತ್ ಮಾನ್ ಅವರ ಪುತ್ರಿ ಸೀರತ್ ಕೌರ್ ಮಾನ್ ಅವರು ಮಾತನಾಡುತ್ತಿರುವ ವಿಡಿಯೊ ಅದಾಗಿದ್ದು, ಅವರು ತಮ್ಮ ಬವಣೆ ಹಾಗೂ ಆಕ್ರೋಶಗಳನ್ನು ಹೊರಹಾಕಿದ್ದಾರೆ. ಜತೆಗೆ ಇದು ರಾಜಕೀಯ ಪ್ರೇರಿತ ವಿಡಿಯೊ ಅಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಸೀರತ್ ತಾನು ಸಿಎಂ ಭಗವಂತ್ ಮಾನ್ ಅವರ ಮಗಳು. ಆದರೆ ನಾನು ಅವನನ್ನು ಸಿಎಂ ಮಾನ್ ಎಂದು ಕರೆಯುತ್ತೇನೆ ಏಕೆಂದರೆ ಅವರು ನನ್ನಿಂ ‘ಪಾಪಾ’ ಎಂದು ಕರೆಯುವ ಹಕ್ಕನ್ನು ಬಹಳ ಹಿಂದೆಯೇ ಕಳೆದುಕೊಂಡಿದ್ದಾರೆ ಎಂದು ಮಾತು ಆರಂಭಿಸಿದ್ದಾರೆ.‘

“ನಾನು ಈ ವಿಡಿಯೋ ಮಾಡುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ನನ್ನ ಕಥೆ ಹೊರಬರಬೇಕೆಂದು ನಾನು ಬಯಸುತ್ತೇನೆ/ ಜನರು ನಮ್ಮ ಬಗ್ಗೆ ಏನು ಕೇಳಿದ್ದಾರೋ ಅದನ್ನು ಸಿಎಂ ಮಾನ್ ಅವರಿಗೆ ಗೊತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ವೀಡಿಯೊದ ಹಿಂದಿನ ಉದ್ದೇಶವು ರಾಜಕೀಯಕ್ಕಿಂತ ವೈಯಕ್ತಿಕವಾಗಿದೆ ಎಂದು ಅವರು ತ್ತಿ ಹೇಳಿದ್ದಾರೆ. ತಾನು ಮತ್ತು ತನ್ನ ತಾಯಿ ಬಹಳ ಸಮಯದವರೆಗೆ ಮೌನವಾಗಿದ್ದೆವು. ಆದರೆ ಮಾನ್ ಅವರು ನಮ್ಮ ಮೌನವನ್ನು ಅವರ ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ವಿಡಿಯೊ ಮಾಡುತ್ತಿದ್ಧೇನೆ. ನಮ್ಮ ಮೌನದಿಂದಾಗಿಯೇ ಅವರ ಪ್ರಸ್ತುತ ಉನ್ನತ ಸ್ಥಾನದಲ್ಲಿ ಕುಳಿತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ” ಎಂದು ಸೀರತ್ ಆರೋಪಿಸಿದ್ದಾರೆ.

ಮೂರನೇ ಮಗು

ಮಾನ್ ಅವರ ಪತ್ನಿ ಡಾ.ಗುರ್ಕಿರತ್ ತಮ್ಮ ಮೂರನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಸೀರತ್ ವೀಡಿಯೊದಲ್ಲಿ ಹೇಳಿದ್ದಾರೆ. ಸಂವಹನದ ಕೊರತೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಅವರು, ಅಸ್ತಿತ್ವದಲ್ಲಿರುವ ಮಕ್ಕಳನ್ನು ನಿರ್ಲಕ್ಷಿಸಿ ಕುಟುಂಬ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಪಂಜಾಬ್ ಸಿಎಂ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Mayawati : ಸೋದರಳಿಯನನ್ನೇ ಉತ್ತರಾಧಿಕಾರಿಯಾಗಿ ಘೋಷಿಸಿದ ಬಿಎಸ್​ಪಿ ನಾಯಕಿ ಮಾಯಾವತಿ

ಸಿಎಂ ಮಾನ್ ಅವರೊಂದಿಗೆ ಸಂಪರ್ಕ ಸಾಧಿಸಲು ತನ್ನ ಸಹೋದರ ದೋಶನ್ ಅವರ ಪ್ರಯತ್ನಗಳನ್ನು ವಿವರಿಸಿದ ಸೀರತ್, ಸಿಎಂ ಮನೆಗೆ ಪ್ರವೇಶವನ್ನೇ ನಮಗೆ ನಿರಾಕರಿಸಲಾಯಿತು. ಅವರ ಭೇಟಿಯ ಸಮಯದಲ್ಲಿ ಸಮಸ್ಯೆ ಎದುರಿಸಿದರು ಹೇಳಿಕೊಂಡಿದ್ದಾರೆ. ಮಾನ್​ ಅವರು ಭಾವನಾತ್ಮಕ ಮತ್ತು ದೈಹಿಕ ನಿಂದನೆ ಮಾಡುತ್ತಾರೆ. ಮದ್ಯಪಾನ, ಅಭ್ಯಾಸದ ಸುಳ್ಳು ಚಟವಿದೆ. ಕುಡಿದ ಅಮಲಿನಲ್ಲಿ ಅಧಿಕೃತ ಸಮಾರಂಭಗಳಿಗೆ ಹಾಜರಾಗುತ್ತಿದ್ದಾರೆ ಎಂದು ಸೀರತ್​ ಆರೋಪಿಸಿದ್ದಾರೆ.

ದೋಶನ್ ಅವರಿಗೆ ಸಿಎಂ ನಿವಾಸಕ್ಕೆ ಬರಲು ಅವಕಾಶ ನೀಡಲಿಲ್ಲ. ಕಷ್ಟಪಟ್ಟು ಒಳಕ್ಕೆ ಹೋದರೆ ಅಲ್ಲಿಂದ ಹೊರಹಾಕಲಾಯಿತು. ಅಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಹೋಗುವಂತೆ ಹೇಳಲಾಯಿತು. ತನ್ನ ಸ್ವಂತ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಾಗದ ವ್ಯಕ್ತಿ, ಪಂಜಾಬ್ ಜನರ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳುತ್ತಾನೆ” ಎಂದು ಸೀರತ್ ವಿಡಿಯೊದಲ್ಲಿ ಪ್ರಶ್ನಿಸಿದ್ದಾರೆ.

ವೀಡಿಯೊ ವೈರಲ್ ಆದ ನಂತರ, ಅಕಾಲಿ ದಳದ ಮುಖಂಡ ಬಿಕ್ರಮ್ ಮಜಿಥಿಯಾ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸೀರತ್ ಕೌರ್ ಅವರ ವೀಡಿಯೊವನ್ನು ಸಹ ಪ್ಲೇ ಮಾಡಿ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.

Exit mobile version