ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹರಿಯಾಣ ಮೂಲದ ವೈದ್ಯೆ ಡಾ. ಗುರುಪ್ರೀತ್ ಕೌರ್ ಅವರನ್ನು ಅತ್ಯಂತ ಆತ್ಮೀಯ ಸಮಾರಂಭದಲ್ಲಿ ಗುರುವಾರ ವಿವಾಹವಾದರು. ಚಂಡೀಗಢದ ಅವರ ಖಾಸಗಿ ನಿವಾಸದಲ್ಲಿ ನಡೆದ ಮದುವೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಘವ ಛಡ್ಡಾ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಹಲವು ನಾಯಕರು ಭಾಗಿಯಾಗಿದ್ದಾರೆ.