Site icon Vistara News

Intranasal Vaccine | ಇಂಟ್ರಾನಾಸಲ್‌ ಕೊರೊನಾ ನಿರೋಧಕ ಬೂಸ್ಟರ್‌ ಡೋಸ್‌ ತುರ್ತು ಬಳಕೆಗೆ ಡಿಸಿಜಿಐ ಅಸ್ತು

iNCOVACC vaccine

ನವದೆಹಲಿ: ಭಾರತ್‌ ಬಯೋಟೆಕ್‌ನ ಇಂಟ್ರಾನಾಸಲ್‌ (ಮೂಗಿನ ಮೂಲಕ ನೀಡುವ) ಕೊರೊನಾ ನಿರೋಧಕ ಬೂಸ್ಟರ್‌ ಡೋಸ್‌ ಲಸಿಕೆಯ (Intranasal Vaccine) ತುರ್ತು ಬಳಕೆಗೆ ಡ್ರಗ್ಸ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾ (DCGI) ಅನುಮತಿ ನೀಡಿದೆ.

“ತುರ್ತು ಸಂದರ್ಭಗಳಲ್ಲಿ ಮೂಗಿನ ಮೂಲಕ ನೀಡುವ iNCOVACC ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿದೆ. ಕೊವ್ಯಾಕ್ಸಿನ್‌ ಅಥವಾ ಕೋವಿಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ಪಡೆದ ವಯಸ್ಕರು ಮೂರನೇ ಅಥವಾ ಬೂಸ್ಟರ್‌ ಡೋಸ್‌ ಆಗಿ iNCOVACCಅನ್ನು ಪಡೆಯಬಹುದಾಗಿದೆ.

ಮೂಗಿನ ಮೂಲಕವೇ ಕೊರೊನಾ ಸೋಂಕು ದೇಹವನ್ನು ಪ್ರವೇಶಿಸುವುದರಿಂದ iNCOVACC ಲಸಿಕೆಯನ್ನು ಮೂಗಿನಿಂದ ನೀಡಲಾಗುತ್ತದೆ. ಇದಕ್ಕಾಗಿ ಸೂಜಿಯನ್ನು ಬಳಸದ ಕಾರಣ ಲಸಿಕೆ ನೀಡಿಕೆಯು ಸುಲಭವಾಗಿದೆ. ಹಾಗೆಯೇ, ಇದು ಸೋಂಕು ನಿಗ್ರಹಿಸುವಲ್ಲಿ ಪ್ರಭಾವಶಾಲಿ ಎಂಬುದು ಕ್ಲಿನಿಕಲ್‌ ಪ್ರಯೋಗಗಳಿಂದ ದೃಢಪಟ್ಟಿದೆ.

ಇದನ್ನೂ ಓದಿ | Moderna Vaccine | ಓಮಿಕ್ರಾನ್‌ ತಳಿಗೂ ಲಸಿಕೆ, ಅನುಮತಿ ನೀಡಿದ ಮೊದಲ ರಾಷ್ಟ್ರ ಬ್ರಿಟನ್

Exit mobile version