Site icon Vistara News

RRR Movie | ಆರ್‌ಆರ್‌ಆರ್‌ಗೆ ಮತ್ತೊಂದು ಜಾಗತಿಕ ಗರಿ, ದಿ ಚೆಲ್ಲೊ ಶೋಗೂ ಇಂಟರ್‌ನ್ಯಾಷನಲ್‌ ಪ್ರೆಸ್‌ ಅಕಾಡೆಮಿ ಪುರಸ್ಕಾರ

RRR And Last Film Show

ನವದೆಹಲಿ: ಎಸ್.ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ (RRR Movie) ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್‌ ಗ್ಲೋಬ್ಸ್‌ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತ ಬೆನ್ನಲ್ಲೇ ಮತ್ತೊಂದು ಜಾಗತಿಕ ಹಿರಿಮೆ ಸಿಕ್ಕಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ ಆರ್‌ಆರ್‌ಆರ್‌ ಹಾಗೂ ಚೆಲ್ಲೊ ಶೋ (Last Film Show) ಸಿನಿಮಾಗಳಿಗೆ ಇಂಟರ್‌ನ್ಯಾಷನಲ್‌ ಪ್ರೆಸ್‌ ಅಕಾಡೆಮಿ (IPA) ಪುರಸ್ಕಾರ ದೊರೆತಿದೆ.

ಲಾಸ್ಟ್‌ ಫಿಲಂ ಶೋನಲ್ಲಿ ಮನೋಜ್ಞವಾಗಿ ನಟಿಸಿದ ಬಾಲನಟ ಭಾವಿನ್‌ ರಾಬರಿಗೆ ಬ್ರೇಕ್‌ತ್ರೂ ಪರ್ಫಾರ್ಮನ್ಸ್‌ ಅವಾರ್ಡ್‌ (Breakthrough Performance Award) ದೊರೆತರೆ, ಆರ್‌ಆರ್‌ಆರ್‌ಗೆ ಹಾನರರಿ ಸ್ಯಾಟಲೈಟ್‌ ಅವಾರ್ಡ್ (Honorary Satellite Award)‌ಗೆ ಭಾಜನವಾಗಿದೆ. ಐಪಿಎ 27ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಸ್ಪೆಷಲ್‌ ಅಚೀವ್‌ಮೆಂಟ್ಸ್‌ ಅವಾರ್ಡ್ಸ್‌ ಘೋಷಿಸಿದೆ. ದಿ ಚೆಲ್ಲೋ ಶೋ ಗುಜರಾತಿ ಸಿನಿಮಾ ಆಗಿದ್ದು, ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ.

ಏನಿದು ಇಂಟರ್‌ನ್ಯಾಷನಲ್‌ ಪ್ರೆಸ್‌ ಅಕಾಡೆಮಿ ಪುರಸ್ಕಾರ?
ಮಾಧ್ಯಮ ವೃತ್ತಿಪರರೇ ಸ್ಥಾಪಿಸಿದ, ಅಮೆರಿಕ ಮೂಲದ ಇಂಟರ್‌ನ್ಯಾಷನಲ್‌ ಪ್ರೆಸ್‌ ಅಕಾಡೆಮಿಯು ಜಾಗತಿಕ ಸಿನಿಮಾಗಳಿಗೆ ಪ್ರತಿ ವರ್ಷ ಬ್ರೇಕ್‌ತ್ರೂ ಪರ್ಫಾರ್ಮನ್ಸ್‌ ಅವಾರ್ಡ್‌, ಹಾನರರಿ ಸ್ಯಾಟಲೈಟ್‌ ಅವಾರ್ಡ್ ಸೇರಿ ಹಲವು ಪ್ರಶಸ್ತಿಗಳನ್ನು ನೀಡುತ್ತದೆ. 1996ರಲ್ಲಿ ಇಂಟರ್‌ನ್ಯಾಷನಲ್‌ ಪ್ರೆಸ್‌ ಅಕಾಡೆಮಿ ಸ್ಥಾಪಿಸಲಾಗಿದ್ದು, 1997ರಿಂದ ಪ್ರಶಸ್ತಿ ನೀಡುತ್ತಿದೆ.

ಇದನ್ನೂ ಓದಿ | RRR Movie | ಆರ್‌ಆರ್‌ಆರ್‌ ಬಾಲಿವುಡ್‌ ಸಿನಿಮಾವಲ್ಲ: ನಿರ್ದೇಶಕ ರಾಜಮೌಳಿ

Exit mobile version