Site icon Vistara News

Vande Bharat Express: ಮಧ್ಯಪ್ರದೇಶದಲ್ಲಿ ವಂದೇ ಭಾರತ್‌ ರೈಲು ಬೋಗಿಗೆ ಬೆಂಕಿ; ಚಲಿಸುವಾಗಲೇ ದುರಂತ

Coach Of Vande Bharat Train Catches Fire

Bhopal-Delhi Vande Bharat Express Catches Fire; Video Surface

ಭೋಪಾಲ್: ಮಧ್ಯಪ್ರದೇಶದಲ್ಲಿ ಭೋಪಾಲ್-ದೆಹಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಒಂದು ಬೋಗಿಯು ಹೊತ್ತಿ ಉರಿದಿದೆ. ಬಿನಾ ಜಿಲ್ಲೆಯ ಕುರ್ವೈ ಕೆಥೋರಾ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದಾಗಲೇ ಅಗ್ನಿ ದುರಂತ ಸಂಭವಿಸಿದೆ. ಕೂಡಲೇ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ನಿಲ್ಲಿಸಲಾಗಿದೆ. ರೈಲು ನಿಲ್ಲುತ್ತಲೇ ಪ್ರಯಾಣಿಕರು ಹೊರಗೆ ಓಡಿ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿ ಅವಘಡದ ವಿಡಿಯೊ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ 20171 ರೈಲು ಚಲಿಸುತ್ತಿದ್ದಾಗಲೇ ಅಗ್ನಿ ದುರಂತ ಸಂಭವಿಸಿದೆ. ಕೂಡಲೇ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಅಗ್ನಿಯನ್ನು ನಂದಿಸಲಾಗಿದೆ. ರೈಲು ನಿಲ್ಲುತ್ತಲೇ ಪ್ರಯಾಣಿಕರು ಹೊರಗೆ ಬಂದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ರೈಲಿಂದ ಇಳಿದ ಪ್ರಯಾಣಿಕರು

ಇದನ್ನೂ ಓದಿ: Fire Accident: ಸಾವಿರಾರು ಪ್ರಯಾಣಿಕರಿದ್ದ ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ನಲ್ಲಿ ಲೋಪ ಕಾಣಿಸಿಕೊಂಡಿದ್ದು, ಇದಾದ ಬಳಿಕ ಅಗ್ನಿ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕೂಡಲೇ ರೈಲನ್ನು ನಿಲ್ಲಿಸಿ, ಪ್ರಯಾಣಿಕರು ಕೆಳಗಿಳಿದಿದ್ದರಿಂದ ಅನಾಹುತ ತಪ್ಪಿದೆ. ಕೆಲ ಕಾಲ ಪ್ರಯಾಣಿಕರು ಹೆಚ್ಚಿನ ಆತಂಕಕ್ಕೀಡಾಗಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆ ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಮೂರು ರೈಲುಗಳು ಅಪಘಾತಕ್ಕೀಡಾಗಿ 293 ಜನ ಮೃತಪಟ್ಟಿದ್ದರು. ಅಲ್ಲದೆ, ಸಾವಿರಾರು ಜನ ಗಾಯಗೊಂಡಿದ್ದರು.

Exit mobile version