Site icon Vistara News

INDIA Bloc: ಇಂಡಿಯಾ ಒಕ್ಕೂಟದಲ್ಲಿ ಬಿಕ್ಕಟ್ಟು; ಟಿಎಂಸಿ, ಕಾಂಗ್ರೆಸ್‌ ಜತೆ ಮೈತ್ರಿಗೆ ಸಿಪಿಎಂ ನಕಾರ

Rahul Gandhi Mamata Banerjee And Sitaram Yechury

Big Blow To INDIA Bloc, TMC Not Interested In Tie Ups In Bengal And Kerala; Say Sources

ನವದೆಹಲಿ: ಸನಾತನ ಧರ್ಮದ (Sanatana Dharma) ನಿರ್ಮೂಲನೆ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ವಿಚಾರದಲ್ಲಿ ಇಂಡಿಯಾ ಒಕ್ಕೂಟದಲ್ಲಿ (INDIA Bloc) ಭಿನ್ನಾಭಿಪ್ರಾಯ ಮೂಡಿದ ಬೆನ್ನಲ್ಲೇ, ಮೈತ್ರಿ ವಿಚಾರಕ್ಕೂ ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್‌ ಹಾಗೂ ಟಿಎಂಸಿ ಜತೆ ಮೈತ್ರಿ ಮಾಡಿಕೊಳ್ಳಲು ಸಿಪಿಎಂಗೆ ಆಸಕ್ತಿ ಇಲ್ಲ ಎನ್ನಲಾಗಿದೆ.

ಹೌದು, ಮುಂಬರುವ ಲೋಕಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜತೆ ಹಾಗೂ ಕೇರಳದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಸಿಪಿಎಂ ಹಿಂದೇಟು ಹಾಕುತ್ತಿದೆ. ಎರಡೂ ಪಕ್ಷಗಳಿಂದ ಅಂತರ ಕಾಪಾಡಿಕೊಳ್ಳುವುದು ಸಿಪಿಎಂ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸೇರಿ ಯಾವುದೇ ಪಕ್ಷಗಳ ಭಿಡೆ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲು ಸಿಪಿಎಂ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಬಿಜೆಪಿ ವಿರುದ್ಧ ಒಗ್ಗೂಡಲು 26 ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ ಚುನಾವಣೆಗೂ ಮೊದಲೇ ಹಲವು ವಿಚಾರಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವುದು ಅಪಾಯಕಾರಿ ಎಂದು ವಿಶ್ಲೇಷಿಸಲಾಗುತ್ತಿದೆ.

India bloc Leaders

ಸಮನ್ವಯ ಸಭೆಯಿಂದಲೂ ಸಿಪಿಎಂ ದೂರ

ಎಲ್ಲ ಪಕ್ಷಗಳ ಮಧ್ಯೆ ಸಂವಹನ, ಒಗ್ಗಟ್ಟು, ಒಮ್ಮತದ ಅಭಿಪ್ರಾಯ ಮೂಡಿಸುವ ದಿಸೆಯಲ್ಲಿ ಇಂಡಿಯಾ ಒಕ್ಕೂಟವು ಸಮನ್ವಯ ಸಮಿತಿ ರಚಿಸಿದೆ. ಹಾಗೆಯೇ, ಸಮನ್ವಯ ಸಮಿತಿ ಸಭೆಗಳನ್ನೂ ನಡೆಸಲಾಗುತ್ತಿದೆ. ಆದರೆ, ಸಮನ್ವಯ ಸಮಿತಿ ಸಭೆಗೆ ಸಿಪಿಎಂ ಯಾವುದೇ ಪ್ರತಿನಿಧಿಗಳನ್ನು ಕಳುಹಿಸದೆ ಇರುವ ಮೂಲಕ ಆಯಾ ರಾಜ್ಯಗಳಲ್ಲಿ ಮೈತ್ರಿ ಕುರಿತು ಚರ್ಚಿಸುವುದರಿಂದ ಅಂತರ ಕಾಪಾಡಿಕೊಂಡಿದೆ ಎಂದು ತಿಳಿದುಬಂದಿದೆ. 14 ಸದಸ್ಯರ ಸಮಿತಿ ಸಭೆಯು ಕಳೆದ ವಾರ ನಡೆದಿತ್ತು. ಆದರೆ, ಸಿಪಿಎಂ ಪ್ರತಿನಿಧಿ ಗೈರಾದ ಕಾರಣ ಸಭೆಯಲ್ಲಿ ಒಂದು ಸೀಟು ಖಾಲಿ ಇತ್ತು.

ಇದನ್ನೂ ಓದಿ: INDIA Bloc: 14 ಪತ್ರಕರ್ತರನ್ನು ಬ್ಯಾನ್‌ ಮಾಡಿದ ಇಂಡಿಯಾ ಒಕ್ಕೂಟ; ಇಲ್ಲಿದೆ ಪಟ್ಟಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸುವ ದಿಸೆಯಲ್ಲಿ ಪ್ರತಿಪಕ್ಷಗಳು ಇಂಡಿಯಾ ಒಕ್ಕೂಟ ರಚಿಸಿದ್ದು, ಪಟನಾ, ಬೆಂಗಳೂರು ಹಾಗೂ ಮುಂಬೈನಲ್ಲಿ ಬೃಹತ್‌ ಸಭೆ ಆಯೋಜಿಸಿವೆ. ಸೀಟು ಹಂಚಿಕೆ, ಬೃಹತ್‌ ಸಮಾವೇಶ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿವೆ. ಸಮನ್ವಯತೆ ಸಾಧಿಸಲು ಸಮಿತಿಯನ್ನೂ ರಚಿಸಿಕೊಂಡಿವೆ. ಇಷ್ಟಾದರೂ ಮೈತ್ರಿ ವಿಚಾರಕ್ಕೆ ಅಪಸ್ವರ ಕೇಳಿಬಂದಿದೆ.

Exit mobile version