Site icon Vistara News

Su 30MKI: ಮೇಕ್‌ ಇನ್‌ ಇಂಡಿಯಾಗೆ ಬಲ; ವಾಯುಪಡೆ ಸೇರಲಿವೆ 12 ಸು-30 ಎಂಕೆಐ ಯುದ್ಧವಿಮಾನ

Su 30MKI Aircraft

Big Boost For Make In India; Defence Ministry approved the proposal for the procurement of 12 Su 30MKIs

ನವದೆಹಲಿ: ಕೇಂದ್ರ ಸರ್ಕಾರವು ಮೇಕ್‌ ಇನ್‌ ಇಂಡಿಯಾ (Make In India) ಯೋಜನೆಗೆ ಬಲ ನೀಡುವ ದಿಸೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ದೇಶದ ವಾಯುಪಡೆಗೆ (Indian Air Force) 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 12 ಸು-30ಎಂಕೆಐ (Su 30MKI) ಯುದ್ಧವಿಮಾನಗಳನ್ನು ಸೇರಿಸಿಕೊಳ್ಳುವ ವಾಯುಪಡೆಯ ಪ್ರಸ್ತಾಪಕ್ಕೆ ರಕ್ಷಣಾ ಸಚಿವಾಲಯವು ಶುಕ್ರವಾರ ಅನುಮೋದನೆ ನೀಡಿದೆ.

ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಲ್ಲಿಯೇ (HAL) ದೇಶೀಯವಾಗಿ 12 ಯುದ್ಧವಿಮಾನಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಯುದ್ಧವಿಮಾನಗಳ ಶೇ.60ರಷ್ಟು ಉಪಕರಣಗಳು ದೇಶೀಯವಾಗಿ ಉತ್ಪಾದಿಸಿದ ಉಪಕರಣಗಳಾಗಿರುತ್ತವೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲೂ ಮೇಕ್‌ ಇನ್‌ ಇಂಡಿಯಾಗೆ ಒತ್ತು ನೀಡಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿ ಎಚ್‌ಎಎಲ್‌ನಲ್ಲಿಯೇ ಅತ್ಯಾಧುನಿಕ ಯುದ್ಧವಿಮಾನಗಳನ್ನು ತಯಾರಿಸಲಾಗುತ್ತಿದೆ.

ಏಕೆ ಸು-30ಎಂಕೆಐ ಯುದ್ಧವಿಮಾನ ಪ್ರಮುಖ?

ಸು-30ಎಂಕೆಐ ಯುದ್ಧವಿಮಾನಗಳು ಅತ್ಯಾಧುನಿಕವಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ. ವು 38,880 ತೂಕದ ಉಪಕರಣಗಳನ್ನು ಹೊತ್ತೊಯ್ಯಬಲವು. ರೇಡಾರ್‌ ಸೇರಿ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು, ಉಪಕರಣಗಳನ್ನು ಅಳವಡಿಸಲಾಗಿದೆ. ವಾಯುಪಡೆಯ ಕಾರ್ಯಾಚರಣೆ, ಜನರ ರಕ್ಷಣೆ, ವಾಯುಪ್ರದೇಶದಿಂದಲೇ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿವೆ.

ಎರಡು ಎಂಜಿನ್‌ ಹೊಂದಿರುವ ಸು-30ಎಂಕೆಐ ಯುದ್ಧವಿಮಾನವು ಸುಮಾರು 3 ಸಾವಿರ ಕಿಲೋಮೀಟರ್‌ವರೆಗೆ ಕಾರ್ಯಾಚರಣೆ ನಡೆಸುತ್ತವೆ. ಅಲ್ಲದೆ, 3.5 ಗಂಟೆಯವರೆಗೆ ಆಗಸದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ. ರಷ್ಯಾದ ಇರ್ಕುಟ್‌ ಕಾರ್ಪೊರೇಷನ್‌ ಸಹಯೋಗದಲ್ಲಿ ಯುದ್ಧವಿಮಾನಗಳನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: Putin Praises Modi: ಭಾರತದ ಏಳಿಗೆಗೆ ʼಮೇಕ್‌ ಇನ್‌ ಇಂಡಿಯಾ’ ಕಾರಣ, ಮೋದಿಯನ್ನು ಹಾಡಿ ಹೊಗಳಿದ ಪುಟಿನ್‌

ದೇಶದ ರಕ್ಷಣಾ ಕ್ಷೇತ್ರದಲ್ಲೂ ಮೇಕ್‌ ಇಂಡಿಯಾ, ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಭಾರತದ ರಕ್ಷಣಾ ರಫ್ತು ಕೂಡ ಏರಿಕೆಯಾಗಿದ್ದು, 2022-23ನೇ ಸಾಲಿನಲ್ಲಿ ಶಸ್ತ್ರಾಸ್ತ್ರಗಳ ರಫ್ತು 15,920 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಸಾರ್ವಕಾಲಿಕ ದಾಖಲೆ ಎಂದೇ ಹೇಳಲಾಗುತ್ತಿದೆ.

Exit mobile version