ಜೈಪುರ: ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಯುವ ನಾಯಕ ಸಚಿನ್ ಪೈಲಟ್ ನಡುವಿನ ಜಗಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಅಶೋಕ್ ಗೆಹ್ಲೋಟ್ ಅವರು, ಸಚಿನ್ ಪೈಲಟ್ ಅವರನ್ನು ಉದ್ದೇಶಿಸಿ, ಸಾಂಕ್ರಾಮಿಕ ಬಳಿಕ ನಮ್ಮ ಪಕ್ಷದಲ್ಲಿ ದೊಡ್ಡ ಕೊರೊನಾ ಎದುರಾಯಿತು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಗೆಹ್ಲೋಟ್ ಅವರು ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಂಡು, ಈ ವಿವಾದಕ್ಕೆ ಕಾರಣವಾಗುವ ಮಾತುಗಳನ್ನಾಡಿದ್ದಾರೆ ಎಂಬುದು ವಿಡಿಯೋವನ್ನು ನೋಡಿದವರಿಗೆ ತಿಳಿಯುತ್ತದೆ. ಸಭೆಯಲ್ಲಿ ಪಾಲ್ಗೊಂಡವರ ಪ್ರಶ್ನೆಗೆ ಉತ್ತರಿಸಿದ ಗೆಹ್ಲೋಟ್ ಅವರು, ಯಾರನ್ನೂ ಹೆಸರಿಸದೇ, ”ಈ ಮೊದಲು ಸಭೆ ಮುಂದಾಗಿದ್ದೆ. ಆದರೆ, ಕೊರೊನಾ ಬಂತು. ಆ ಬಳಿಕ ಪಕ್ಷದೊಳಗೆ ಬಹುದೊಡ್ಡ ಕೊರೊನಾ ಕೂಡ ಎಂಟ್ರಿ ಪಡೆಯಿತು,” ಎಂದು ಹೇಳುತ್ತಾರೆ.
ಬೈಎಲೆಕ್ಷನ್ ಮತ್ತು ರಾಜ್ಯಸಭೆ ಚುನಾವಣೆಯ ಹಿನ್ನಡೆಯ ಹೊರತಾಗಿಯೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಉದ್ಯೋಗಿಗಳನ್ನು ಬೆಂಬಲಸುವ ಯೋಜನೆಗಳನ್ನುಜಾರಿಗೆ ತಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Gehlot VS Pilot | ಕಾಂಗ್ರೆಸ್ ತೊರೆದು ಬಿಜೆಪಿ ಸೇರುವರೇ ಅಶೋಕ್ ಗೆಹ್ಲೋಟ್? ಸಚಿನ್ ಪೈಲಟ್ ಹೇಳಿದ್ದೇನು?