Site icon Vistara News

Gorakhpur Riots | ಯೋಗಿ ಆದಿತ್ಯನಾಥ್‌ಗೆ ಸುಪ್ರೀಂ ಕೋರ್ಟ್ ಬಿಗ್‌ ರಿಲೀಫ್‌, ಯಾವುದಿದು ಪ್ರಕರಣ?

Yogi Adityanath

ನವದೆಹಲಿ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ೨೦೦೭ರಲ್ಲಿ ನಡೆದ ಗಲಭೆಗೆ (Gorakhpur Riots) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಸುಪ್ರೀಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಯೋಗಿ ಆದಿತ್ಯನಾಥ್‌ ಅವರು ದ್ವೇಷ ಭಾಷಣ ಮಾಡಿದ ಕಾರಣಕ್ಕಾಗಿಯೇ ಹಿಂಸಾಚಾರ ನಡೆದಿದೆ ಎಂಬ ಪ್ರಕರಣದಲ್ಲಿ ಯೋಗಿ ವಿರುದ್ಧ ಕ್ರಮ ಜರುಗಿಸಲು ೨೦೧೭ರಲ್ಲಿ ಉತ್ತರ ಪ್ರದೇಶ ಸರಕಾರ ನಿರಾಕರಿಸಿತ್ತು. ಸರಕಾರದ ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಈಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠವು ತಳ್ಳಿಹಾಕಿದೆ.

ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರ ಸಂಸದರಾಗಿದ್ದಾಗ ಅಂದರೆ, ೨೦೦೭ರಲ್ಲಿ ಹಿಂದೂ ಯುವ ವಾಹಿನಿ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಯೋಗಿ ವಿರುದ್ಧ ಕ್ರಮ ಜರುಗಿಸಲು ೨೦೧೭ರಲ್ಲಿ ನಿರಾಕರಿಸಲಾಗಿತ್ತು.

ಸರಕಾರದ ತೀರ್ಮಾನ ಪ್ರಶ್ನಿಸಿ ಹೋರಾಟಗಾರ ಪರ್ವೇಜ್‌ ಪರ್ವಾಜ್‌ ಎಂಬುವರು ಅಲಹಾಬಾದ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿತ್ತು. ಈಗ ಸರ್ವೋಚ್ಚ ನ್ಯಾಯಾಲಯವೂ ಅರ್ಜಿಯನ್ನು ತಳ್ಳಿಹಾಕಿದೆ. ಯೋಗಿ ಆದಿತ್ಯನಾಥ್‌ ಅವರು ದ್ವೇಷ ಭಾಷಣ ಮಾಡಿದ ಕಾರಣಕ್ಕಾಗಿಯೇ ಗೋರಖ್‌ಪುರದಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ ಎಂಬುದು ಪರ್ವೇಜ್‌ ಪರ್ವಾಜ್‌ ಅವರ ವಾದವಾಗಿತ್ತು.

ಇದನ್ನೂ ಓದಿ | ಯೋಗಿ ಸೆಕೆಂಡ್‌ ಇನಿಂಗ್ಸ್‌| 100 ದಿನದಲ್ಲಿ 525 ಎನ್‌ಕೌಂಟರ್, 1034 ಮಂದಿ ಅರೆಸ್ಟ್‌, ಐವರು ಬಲಿ

Exit mobile version