ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಒಂದೆಡೆ ರಾಜ್ಯ ತನಿಖಾ ಸಂಸ್ಥೆಯು (SIA) ಉಗ್ರ ಸಂಘಟನೆಗೆ ಸೇರಿದವರ ಆಸ್ತಿಯನ್ನು ಜಪ್ತಿ ಮಾಡಿದೆ. ಮತ್ತೊಂದೆಡೆ, ಸೇನೆಯು ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಶಸ್ತ್ರಾಸ್ತ್ರ ಜಾಲವೊಂದನ್ನು ಭೇದಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು (Arms Bust In Kashmir) ವಶಪಡಿಸಿಕೊಂಡಿದ್ದಾರೆ. ಇದರಿಂದ ಕಣಿವೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಉರಿ ಸೆಕ್ಟರ್‌ನ ಹತ್ಲಾಂಗ ಗ್ರಾಮದ ಬಳಿ ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಸೇನೆಯು ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ 8 ಎಕೆ-74 ರೈಫಲ್, 24 ಎಕೆ-74 ಮ್ಯಾಗಜಿನ್, ಚೀನಾದ 12 ಪಿಸ್ತೂಲ್, 24 ಪಿಸ್ತೂಲ್ ಮ್ಯಾಗಜಿನ್, ಚೀನಾದ 9 ಗ್ರೆನೇಡ್, ಪಾಕಿಸ್ತಾನದ 5 ಗ್ರೆನೇಡ್, 560 ಸುತ್ತಿನ ಎಕೆ ರೈಫಲ್‌ನ ಗುಂಡುಗಳು, 244 ಸುತ್ತಿನ ಪಿಸ್ತೂಲು ಗುಂಡುಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಣೆ, ಸಂಗ್ರಹದ ಕುರಿತು ಸ್ಪಷ್ಟ ಮಾಹಿತಿ ಮೇರೆಗೆ ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಿಕ್ಕ ಹಿನ್ನೆಲೆಯಲ್ಲಿ ಕಣಿವೆಯಲ್ಲಿ ಭಾರಿ ದಾಳಿಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ | SIA Raids In Kashmir | ಉಗ್ರ ಸಂಘಟನೆಯ ಆಸ್ತಿ ಮೇಲೂ ಕಾರ್ಯಾಚರಣೆ, 4 ಜಿಲ್ಲೆಯಲ್ಲಿ ಜಮಾತ್ ಎ ಇಸ್ಲಾಮಿ ಆಸ್ತಿ ಜಪ್ತಿ