Site icon Vistara News

Bihar Caste Census | ಬಿಹಾರದಲ್ಲಿ ಜಾತಿ ಗಣತಿ ಆರಂಭ, ಇದರಿಂದ ಏನು ಲಾಭ?

Bihar Caste Census

ಪಟ್ನಾ: ಭಾರೀ ಚರ್ಚೆಗೆ ಕಾರಣವಾಗಿದ್ದ ಜಾತಿ ಆಧರಿತ ಜನಗಣತಿಯನ್ನು ಬಿಹಾರ ಸರ್ಕಾರವು ಶನಿವಾರದಿಂದ ಆರಂಭಿಸಿದೆ(Bihar Caste Census). ಜಾತಿ ಗಣತಿಯಿಂದ ಬಿಹಾರದ ಎಲ್ಲ ವರ್ಗದ ಜನರಿಗೆ ಲಾಭವಾಗಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಹೇಳಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಲಾಭಗಳನ್ನು ದಾಟಿಸಲು ಅನುಕೂಲವಾಗಲೆಂದೇ ಈ ಜಾತಿಗಣತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

”ಜಾತಿ ಗಣತಿಯಿಂದ ಎಲ್ಲರಿಗೂ ಅನುಕೂಲವಾಗಲಿದೆ. ಸೌಲಭ್ಯ ವಂಚಿತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡಲು ಇದರಿಂದ ಸಾಧ್ಯವಾಗಲಿದೆ. ಗಣತಿ ಕಾರ್ಯ ಮುಗಿದ ಬಳಿಕ ಅಂತಿಮ ವರದಿ ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಗುವುದು” ಎಂದು ಸಿಎಂ ನಿತೀಶ್ ಕುಮಾರ್ ಅವರು ಶೆಯೋಹರ್ ಜಿಲ್ಲೆಯಲ್ಲಿ ತಮ್ಮ ‘ಸಮಾಧಾನ ಯಾತ್ರೆ’ಯ ಎರಡನೇ ದಿನದಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಬಿಹಾರದ ಜಾತಿ ಗಣತಿ ಕಾರ್ಯವು ಎರಡು ಹಂತದಲ್ಲಿ ನಡೆಯಲಿದ್ದು, 2023ರ ಮೇ ತಿಂಗಳಲ್ಲಿ ಮುಕ್ತಾಯವಾಗಲಿದೆ. ಬಿಹಾರ ಸರ್ಕಾರವು ಇದಕ್ಕಾಗಿ 500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಏತನ್ಮಧ್ಯೆ, ಬಿಹಾರ ಸರ್ಕಾರದ ಈ ಜಾತಿ ಗಣತಿಗೆ ಬಿಜೆಪಿಯನ್ನು ಅಸಮಾಧಾನ ವ್ಯಕ್ತಪಡಿಸಿದೆ. ಜಾತಿಗಣತಿಗೆ ಆಕ್ಷೇಪಿಸುತ್ತಿರುವ ಬಿಜೆಪಿ, ಬಡವರ ವಿರೋಧಿಯಾಗಿದೆ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Voter Data | ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ವಿವರವನ್ನು ಚುನಾವಣೆಗೆ ಬಳಸಿತ್ತು: ಸಿಎಂ ಬೊಮ್ಮಾಯಿ ಆರೋಪ

Exit mobile version