Site icon Vistara News

ಅಗ್ನಿಪಥ್‌ ಹಿಂಸಾಚಾರಗಳ ಹಿಂದೆ ಕೋಚಿಂಗ್‌ ಸೆಂಟರ್‌ಗಳ ಕೈವಾಡ ಶಂಕಿಸಿದ ಬಿಹಾರದ ಪೊಲೀಸರು

bihar protest

ಪಟನಾ: ಸೇನೆಯ ಹೊಸ ನೇಮಕಾತಿ ಅಗ್ನಿಪಥ್‌ ಯೋಜನೆ ವಿರುದ್ಧ ನಡೆದ ಹಿಂಸಾಚಾರದ ಹಿಂದೆ ಬಿಹಾರದ ಕೋಚಿಂಗ್‌ ಸೆಂಟರ್‌ಗಳ ಪಾತ್ರ ಇರಬಹುದು ಎಂಬ ಶಂಕೆಯನ್ನು ಬಿಹಾರದ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆದರೂ, ಮುಖ್ಯವಾಗಿ ಬಿಹಾರದಲ್ಲಿ ಭಾರಿ ಹಿಂಸಾಚಾರಕ್ಕೆ ತಿರುಗಿತ್ತು. ರಾಜ್ಯದಲ್ಲಿ ಗೊಂದಲ ಮತ್ತು ಹಿಂಸಾತ್ಮಕ ಪ್ರತಿಭಟನೆ ಹೆಚ್ಚುವಲ್ಲಿ ಈ ಕೋಚಿಂಗ್‌ ಸೆಂಟರ್‌ಗಳ ಕೈವಾಡ ಇರಬಹುದು ಎಂದು ಬಿಹಾರದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪಟನಾ ಜಿಲ್ಲಾಧಿಕಾರಿ ಹೇಳಿದ್ದೇನು?

ಪಟನಾ ಜಿಲ್ಲಾಧಿಕಾರಿ ಚಂದ್ರಶೇಖರ್‌ ಸಿಂಗ್‌ ಅವರು ಹಲಭೆಯ ಹಿಂದೆ ಕೋಚಿಂಗ್‌ ಸೆಂಟರ್‌ಗಳ ಪಾತ್ರವನ್ನು ಶಂಕಿಸಿದ್ದಾರೆ. ” ಧನಾಪುರ್‌ ರೈಲ್ವೆ ನಿಲ್ದಾಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ೮೬ ಯುವಕರನ್ನು ಅರೆಸ್ಟ್‌ ಮಾಡಲಾಗಿದೆ. ೭ ಕೋಚಿಂಗ್‌ ಸೆಂಟರ್‌ಗಳ ಪಾತ್ರದ ಬಗ್ಗೆಯೂ ವಿಚಾರಿಸಲಾಗುವುದುʼʼ ಎಂದು ಅವರು ತಿಳಿಸಿದ್ದಾರೆ.

WhatsApp ಮೂಲಕ ಕುಮ್ಮಕ್ಕು

ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿತರಿಂದ ವಶಪಡಿಸಿದ ಮೊಬೈಲ್‌ಗಳನ್ನು ಪರಿಶೀಲಿಸಿದಾಗ, WhatsApp ಸಂದೇಶಗಳ ಮೂಲಕ ಕುಮ್ಮಕ್ಕು ನೀಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ. ಈ ಸಂದೇಶಗಳನ್ನು ೭-೯ ಕೋಚಿಂಗ್‌ ಸೆಂಟರ್‌ಗಳು ಹರಿಡಿಸಿರುವ ಬಗ್ಗೆ ಶಂಕೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

170 ಮಂದಿ ವಿರುದ್ಧ ಎಫ್‌ಐಆರ್

ಬಿಹಾರದ ಧನಾಪುರ್‌ ರೈಲ್ವೆ ನಿಲಾಣದಲ್ಲಿ ಗಲಭೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ೧೭೦ ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ನಡುವೆ ಭಾನುವಾರ ರಕ್ಷಣಾ ಸಚಿವರು ಮತ್ತು ಸೇನಾಪಡೆಯ ಮೂರೂ ವಿಭಾಗಗಳ ಮುಖ್ಯಸ್ಥರು ಅಗ್ನಿಪಥ್‌ ಬಗ್ಗೆ ವಿವರಣೆ ನೀಡಲಿದ್ದಾರೆ.

ಪ್ರತಿಭಟನೆಗೆ ಕಾಂಗ್ರೆಸ್‌ ಬೆಂಬಲ

ಅಗ್ನಿಪಥ್‌ ಯೋಜನೆ ವಿರುದ್ಧದ ಶಾಂತಿಯುತ ಪ್ರತಿಭಟನೆಗೆ ಕಾಂಗ್ರೆಸ್‌ನ ಪೂರ್ಣ ಬೆಂಬಲ ಇದೆ ಎಂದು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಶಾತಿಯುತ ಪ್ರತಿಭಟನೆಯನ್ನು ನಿಲ್ಲಿಸಬೇಡಿ ಎಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್‌ ಯೋಜನೆ ಬಗ್ಗೆ ವಾಯುಪಡೆ ಬಿಡುಗಡೆಗೊಳಿಸಿದ ವಿವರದಲ್ಲಿ ಏನೇನಿದೆ?

Exit mobile version