Site icon Vistara News

Manual Scavenger As Deputy Mayor | ಸಫಾಯಿ ಕರ್ಮಚಾರಿ ಮಹಿಳೆ ಈಗ ಉಪ ಮೇಯರ್‌, ಇದು ಬ್ಯೂಟಿ ಆಫ್‌ ಡೆಮಾಕ್ರಸಿ

Gaya Deputy Mayor Chinta Devi

ಪಟನಾ: ಭಾರತ ವಿಶ್ವದಲ್ಲೇ ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಯಾರು ಯಾವ ಹುದ್ದೆಯನ್ನು ಬೇಕಾದರೂ ಏರಬಹುದು. ಚಹಾ ಮಾರುತ್ತಿದ್ದ ಮೋದಿ, ರೈತನ ಮಗ ದೇವೇಗೌಡರು ಪ್ರಧಾನಿಯಾಗಿದ್ದೇ ಈ ದೇಶದ ಹೆಗ್ಗಳಿಕೆ. ಹೀಗೆ, ತಳಮಟ್ಟದಿಂದ ಬಂದು ದೊಡ್ಡ ಹುದ್ದೆ ಏರಿದವರು, ಉನ್ನತ ಹಂತಕ್ಕೆ ಬೆಳೆದ ಲಕ್ಷಾಂತರ ನಿದರ್ಶನ ದೊರಕುತ್ತವೆ. ಇದಕ್ಕೆ ಜೀವಂತ ಸಾಕ್ಷಿ ಎಂಬಂತೆ, ಬಿಹಾರದಲ್ಲಿ ಸಫಾಯಿ ಕರ್ಮಚಾರಿ ಮಹಿಳೆಯೊಬ್ಬರು (Manual Scavenger As Deputy Mayor) ನಗರ ಪಾಲಿಕೆಯ ಡೆಪ್ಯುಟಿ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಹೌದು, ಕಳೆದ 40 ವರ್ಷದಿಂದ ಸಫಾಯಿ ಕರ್ಮಚಾರಿಯಾಗಿದ್ದ, ತರಕಾರಿ ಮಾರಾಟ ಸೇರಿ ಹಲವು ಕೆಲಸ ಮಾಡಿದ ಚಿಂತಾ ದೇವಿ ಅವರು ಇತ್ತೀಚೆಗೆ ನಡೆದ ಗಯಾ ನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈಗ ಸದಸ್ಯರ ಬೆಂಬಲದೊಂದಿಗೆ ಡೆಪ್ಯುಟಿ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಮಾಜಿ ಡೆಪ್ಯುಟಿ ಮೇಯರ್‌ ಮೋಹನ್‌ ಶ್ರೀವಾಸ್ತವ ಅವರು ಕೂಡ ಚಿಂತಾ ದೇವಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉನ್ನತ ಹುದ್ದೆ ದೊರೆತಾಗ, ಜನ ಬೆಂಬಲದಿಂದ ಅವರು ಗೆಲುವು ಸಾಧಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ” ಎಂದು ಮೋಹನ್‌ ತಿಳಿಸಿದ್ದಾರೆ. 1996ರ ಲೋಕಸಭೆ ಚುನಾವಣೆಯಲ್ಲಿ ಗಯಾ ಕ್ಷೇತ್ರದಿಂದ ಮುಸಾಹರ್‌ ಎಂಬ ಅತಿ ಹಿಂದುಳಿದ ಸಮುದಾಐದ ಭಗವತಿ ದೇವಿ ಎಂಬ ಮಹಿಳೆ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.  

ಇದನ್ನೂ ಓದಿ | Letter to God | ದೇವರೇ.. ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರ‍್ಯಾರೂ ತಾಳಿ ಕಟ್ಟಬಾರದು; ಮಾಯಮ್ಮದೇವಮ್ಮನಿಗೆ ಭಕ್ತೆಯ ಪತ್ರ ವೈರಲ್‌

Exit mobile version