ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಯುವಕರಿಂದ ಹಿಡಿದು ಮುದುಕರವರೆಗೆ, ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ ಎಲ್ಲರೂ ರೀಲ್ಸ್ ಮಾಡಿ, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಖ್ಯಾತಿ, ಹಣ ಗಳಿಸುತ್ತಿದ್ದಾರೆ. ಇನ್ನೂ ಕೆಲವರು ಚಲಿಸುವ ಕಾರ್, ಬೈಕ್ ಮೇಲೆ ರೀಲ್ಸ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ ಯುವಕರಿಬ್ಬರು ಬೈಕ್ ಮೇಲೆ ರೀಲ್ಸ್ ಮಾಡಲು ಹೋಗಿ ಮಹಿಳೆಯೊಬ್ಬರ (Telangana Reels Tragedy:) ಪ್ರಾಣವನ್ನೇ ತೆಗೆದಿದ್ದಾರೆ.
ಪುಣೆ ನಗರದ ಮೊಹಮ್ಮದ್‌ವಾಡಿ ಪ್ರದೇಶದಲ್ಲಿ ಮಾರ್ಚ್ 6ರಂದು ಇಬ್ಬರು ಯುವಕರು ಬೈಕ್ ಚಲಾಯಿಸುತ್ತ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡುವಾಗ ಬೈಕ್ ತಸ್ಲಿಮ್ ಪಠಾಣ್ ಎಂಬ 31 ವರ್ಷದ ಮಹಿಳೆಗೆ ಡಿಕ್ಕಿಯಾಗಿದೆ. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗುತ್ತಲೇ ಇಬ್ಬರೂ ಯುವಕರು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಅಯಾನ್ ಶೇಖ್ ಹಾಗೂ ಜಯೇದ್ ಜಾವೇದ್ ಶೇಖ್ ಎಂದು ಗುರುತಿಸಲಾಗಿದೆ. ಅಯಾನ್ ಬೈಕ್ ಚಲಾಯಿಸುತ್ತಿದ್ದ ಹಾಗೂ ಜಯೇದ್ ಇನ್‌ಸ್ಟಾಗ್ರಾಂ ರೀಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Instagram Influencer: ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: ರೀಲ್ಸ್ ಸ್ಟಾರ್ ದೀಪಕ್ ಗೌಡ ಅರೆಸ್ಟ್