ನವದೆಹಲಿ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ (Bilkis Bano Case) ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದ ಕಡತಗಳ ಕೋರಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರಗಳು ಮನವಿ ಸಲ್ಲಿಸುವ ಸಾಧ್ಯತೆ ಇದೆ. ತನಗಿರುವ ಸವಲತ್ತು ಬಳಸಿ ಈ ಪ್ರಕರಣದಲ್ಲಿ ಕೈಗೊಳ್ಳಲಾದ ಪ್ರಕ್ರಿಯೆಯಗಳ ದಾಖಲೆಗಳನ್ನು ನೀಡಲು ಬಯಸುವುದಿಲ್ಲ ಎಂದು ಸರ್ಕಾರಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳ ಕ್ಷಮಾಪಣೆ ಪ್ರಕ್ರಿಯೆಗೆ ಸರ್ಕಾರ ತನ್ನ ವಿವೇಚನೆ ಬಳಸಿದೆಯೇ, ಕ್ಷಮಾಪಣೆ ನೀಡುವ ನಿರ್ಧಾರಕ್ಕೆ ಆಧಾರ ಏನು ಎಂಬುದು ಪ್ರಶ್ನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಇಂದು ಬಿಲ್ಕಿಸ್, ನಾಳೆ ಮತ್ತಿನ್ನಾರೋ ಆಗಬಹುದು, ನೀವು ಅಥವಾ ನಾವೇ ಆಗಿರಬಹುದು. ಕ್ಷಮಾಣಪಣೆಗೆ ನೀಡಿರುವ ನಿಮ್ಮ ಕಾರಣಗಳನ್ನು ತೋರಿಸದಿದ್ದರೆ, ನಾವು ನಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಖಡಕ್ಕಾಗಿ ಹೇಳಿದೆ.
2002ರ ಗುಜರಾತ್ ಗಲಭೆ ವೇಳೆ ತನ್ನನ್ನು ಅತ್ಯಾಚಾರ ಮಾಡಿ, ಕುಟುಂಬದ 7 ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು ಅವಧಿಪೂರ್ವವೇ ಬಿಡುಗಡೆ ಮಾಡಿತ್ತು. ಬಿಲ್ಕಿಸ್ ಬಾನೊ ಅವರು ಗುಜರಾತ್ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಪರಾಧಿಗಳ ಬಿಡುಗಡೆಯ ಸಮಾಜದ ಸಾಕ್ಷಿಪ್ರಜ್ಞೆಯನ್ನು ಅಲ್ಲಾಡಿಸಿದೆ ಎಂದು ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದರು.
ಈ ಕುರಿತು ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಅಪರಾಧಿಗಳ ಕ್ಷಮಾಪಣೆಯ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಗುಜರಾತ್ ಹಾಗೂ ಕೇಂದ್ರ ಸರ್ಕಾರಗಳಿಗೆ ಮಾರ್ಚ್ 27ರಂದು ಸೂಚಿಸಿತ್ತು.
ಜಸ್ಟೀಸ್ ಕೆ ಎಂ ಜೋಸೆಫ್ ಮತ್ತು ಜಸ್ಟೀಸ್ ಬಿ ವಿ ನಾಗರತ್ನ ಅವರಿದ್ದ ಪೀಠವು, ಬಾನೊ ಪ್ರಕರಣದ 11 ಅಪರಾಧಿಗಳಿಗೆ ನೀಡಿರುವ ಕ್ಷಮಾಪಣೆಯನ್ನು ಪ್ರಶ್ನಿಸಿದೆ. ಅಲ್ಲದೇ, ಗುಜರಾತ್ ಸರ್ಕಾರವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಬೇಕಾಗಿತ್ತು ಎಂದು ಹೇಳಿದೆ.
ಗರ್ಭಿಣಿಯ ಮೇಲೆ ಮೃಗೀಯ ಅತ್ಯಾಚಾರ ನಡೆದಿದೆ. ಆಕೆಯ ಕುಟುಂಬದ ಅನೇಕರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣವನ್ನು ಸಾಮಾನ್ಯ ಭಾರತೀಯ ದಂಡ ಸಂಹಿತೆ 302ರ ಮರ್ಡರ್ ಸೆಕ್ಷನ್‌ನೊಂದಿಗೆ ಹೋಲಿಸಲಾಗದು. ಸೇಬುಹಣ್ಣುಗಳನ್ನು ಯಾವ ರೀತಿಯಲ್ಲಿ ಕಿತ್ತಳೆ ಹಣ್ಣುಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯ ಇಲ್ಲವೋ ಅದೇ ರೀತಿ, ಒಂದು ಕೊಲೆಯ ಜತೆಗೆ ಹತ್ಯಾಕಾಂಡವನ್ನು ತುಲನೆ ಮಾಡಲಾಗುವುದಿಲ್ಲ. ಅಪರಾಧಕೃತ್ಯಗಳು ಸಾಮಾನ್ಯವಾಗಿ ಸಮುದಾಯ ಮತ್ತು ಸಮಾಜ ವಿರುದ್ಧ ನಡೆಯುತ್ತವೆ. ಅಸಮಾನರನ್ನು ಸಮಾನವಾಗಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: Bilkis Bano Case: ಬಿಲ್ಕಿಸ್ ಬಾನೊ ಕೇಸಿಗೆ ಪ್ರತಿಕ್ರಿಯಿಸಲು ರೆಡಿಯಾಗಿರಿ; ಕೇಂದ್ರ, ಗುಜರಾತ್‌ಗೆ ಸುಪ್ರೀಂ ಕೋರ್ಟ್ ಸೂಚನೆ
ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳ ಕ್ಷಮಾಪಣೆ ಪ್ರಕ್ರಿಯೆಗೆ ಸರ್ಕಾರ ತನ್ನ ವಿವೇಚನೆ ಬಳಸಿದೆಯೇ, ಕ್ಷಮಾಪಣೆ ನೀಡುವ ನಿರ್ಧಾರಕ್ಕೆ ಯಾವ ವಸ್ತು ಆಧಾರವಾಗಿದೆ ಎಂಬುದು ಪ್ರಶ್ನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ,ಇಂದು ಬಿಲ್ಕಿಸ್, ನಾಳೆ ಮತ್ತಿನ್ನಾರೋ ಆಗಬಹುದು, ನೀವು ಅಥವಾ ನಾವೇ ಆಗಿರಬಹುದು. ಕ್ಷಮಾಣಪಣೆಗೆ ನೀಡಿರುವ ನಿಮ್ಮ ಕಾರಣಗಳನ್ನು ತೋರಿಸದಿದ್ದರೆ, ನಾವು ನಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಖಡಕ್ಕಾಗಿ ಹೇಳಿದೆ. ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ನಿಗದಿಪಡಿಸಿದೆ.