ನವದೆಹಲಿ: ಹೊಸ ಸಂಸತ್ ಭವನವನ್ನು (New Parliament Building) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಮೌಲ್ಯಗಳನ್ನು ಒಳಗೊಂಡಿರುವ ಈ ಭವ್ಯ ನಿರ್ಮಾಣವು ಭಾರತದ ಹೆಮ್ಮೆಗಳಲ್ಲಿ ಒಂದಾಗಿದೆ. ಇಂಥ ಕಟ್ಟಡದ ಹಿಂದಿ ವಿನ್ಯಾಸಕಾರರು (Architect) ಎಂಬ ಕುತೂಹಲ ಸಹಜ. ಆ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ಬಿಮಲ್ ಹಸ್ಮುಖ್ ಪಟೇಲ್ (Bimal Patel). 64 ವರ್ಷದ ಈ ವ್ಯಕ್ತಿಯೇ ತ್ರಿಕೋನಾಕೃತಿಯ ಭವ್ಯ ನಿರ್ಮಾಣದ ಹಿಂದಿರುವ ವಿನ್ಯಾಸಕಾರ. ಅಂದ ಹಾಗೆ, ಬಿಮಲ್ ಅವರು ಸೆಂಟ್ರಲ್ ವಿಸ್ತಾರ ನವೀಕರಣ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ಸಬರಮತಿ ರಿವರ್ ಫ್ರಂಟ್ ಪ್ರಾಜೆಕ್ಟ್‌ಗಳನ್ನೂ ಮುನ್ನಡೆಸಿದ್ದಾರೆ. ಬನ್ನಿ ಈ ಬಿಮಲ್ ಹಸ್ಮುಖ್ ಪಟೇಲ್ ಅವರು ಬಗ್ಗೆ ತಿಳಿದುಕೊಳ್ಳೋಣ….
ದೇಶದ ಪ್ರಮುಖ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿರುವ ಪಟೇಲ್ ಸುಮಾರು 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಪಟೇಲ್ ಸಿದ್ಧಹಸ್ತರು. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಿಇಪಿಟಿ ವಿವಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜತೆಗೆ, ಎಚ್‌ಸಿಪಿ ಡಿಸೈನ್ ಪ್ಲ್ಯಾನಿಂಗ್ ಮತ್ತು ಮ್ಯಾನೇಜ್ಮೆಂಟ್ ಪ್ರೈ ಲಿ. ಕಂಪನಿಯನ್ನು ನಡೆಸುತ್ತಿದ್ದಾರೆ. ಇದೊಂದು ಆರ್ಕಿಟೆಕ್ಟ್, ಪ್ಲ್ಯಾನಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕಂಪನಿಯಾಗಿದೆ. 1960ರಲ್ಲಿ ಬಿಮಲ್ ಅವರ ತಂದೆ ಹಸ್ಮುಖ್ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಅದನ್ನೀಗ ಬಿಮಲ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಗುಜರಾತ್ ಮೂಲದ ಈ ವಾಸ್ತುಶಿಲ್ಪಿ ಸುಮಾರು 35 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ದೇಶದ ಹೊಸ ಸಂಸತ್ ವಿನ್ಯಾಸ ಮಾಡಿದ್ದು ಮಾತ್ರವಲ್ಲದೇ, ಸಬರಮತಿ ರಿವರ್‌ಫ್ರಂಟ್ ಡೆವಲಪ್ಮೆಂಟ್ ಪ್ರಾಜೆಕ್ಟ್, ಹೈದ್ರಾಬಾದ್‌ನ ಅಘಾ ಖಾನ್ ಅಕಾಡೆಮಿ, ಹೈದ್ರಾಬಾದ್‌ನ ಐಐಎಂ, ಕಾಶಿ ವಿಶ್ವನಾಥ ಕಾರಿಡಾರ್, ಮುಂಬೈ ಪೋರ್ಟ್ ಟ್ರಸ್ಟ್ ಡೆವಲ್‌ಪ್ಮೆಂಟ್ ಸೇರಿದಂತೆ ಅನೇಕ ಗಣ್ಯ ಬಿಲ್ಡಿಂಗ್ ಪ್ರಾಜೆಕ್ಟ್‌ಗಳನ್ನು ನಿರ್ವಹಣೆ ಮಾಡಿದ್ದಾರೆ.
ಆರ್ಕಿಟೆಕ್ಚರ್‌ನಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಬಿಮಲ್ ಅವರಿಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 1992ರಲ್ಲಿ ಅಗಾ ಘಾನ್ ಅವಾರ್ಡ್, 1998ರಲ್ಲಿ ಯುನೈಡೆಟ್ ನೇಷನ್ಸ್ ಸೆಂಟರ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ ಅವಾರ್ಡ್ ಆಫ್ ಎಕ್ಸ್‌ಲೆನ್ಸ್, 2001ರಲ್ಲಿ ವರ್ಲ್ಡ್ ಆರ್ಕಿಟೆಕ್ಚರ್ ಅವಾರ್ಡ್, 2006 ಅರ್ಬನ್ ಪ್ಲ್ಯಾನಿಂಗ್ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪುರಸ್ಕಾರ ಕೂಡ ಸಂದಿದೆ.
ಇದನ್ನೂ ಓದಿ: New Parliament Building: ಹೊಸ ಸಂಸತ್ ಭವನ ತ್ರಿಕೋನಾಕೃತಿಯಲ್ಲಿ ಯಾಕಿದೆ?
ಬಿಮಲ್ ಪಟೇಲ್ ಅವರ ಸಂಸ್ಥೆ, ಎಚ್‌ಸಿಪಿ ಡಿಸೈನ್ಸ್, ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ಗೆ ಸಲಹಾ ಬಿಡ್ ಅನ್ನು ಗೆದ್ದುಕೊಂಡಿತು, ಅದರ ಅಡಿಯಲ್ಲಿ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಕನ್ಸಲ್ಟನ್ಸಿ ಸರ್ವೀಸ್‌ಗೆ ಶುಲ್ಕವಾಗಿ 229.75 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ ಎಂದು ಈ ಹಿಂದೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. ಪ್ರಾಜೆಕ್ಟ್‌ನ ಮಾಸ್ಟರ್ ಪ್ಲ್ಯಾನ್, ಡಿಸೈನ್, ವೆಚ್ಚ ಅಂದಾಜು ಸೇರಿದಂತೆ ಇನ್ನಿತರ ಎಲ್ಲ ಸಲಹೆಗಳನ್ನು ಈ ಶುಲ್ಕಹೊಂದಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.