ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯವರಾಗಿ 9 ವರ್ಷಗಳು ಕಳೆದಿವೆ. ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಬೇಕೆಂದು ವಿರೋಧ ಪಕ್ಷಗಳು ಅದೆಷ್ಟೇ ಪ್ರಯತ್ನ ಮಾಡಿದರೂ ಅದ್ಯಾವುದೂ ಸಾಧ್ಯವಾಗಿಲ್ಲ. ಯೋಜನೆಗಳ ಮೇಲೆ ಯೋಜನೆಗಳನ್ನು ಮಾಡಿ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಕೇಂದ್ರ ಸರ್ಕಾರ. ಅವರ ಸಾಧನೆಯನ್ನು ವಿವರಿಸುವಂತಹ ವಿಶಿಷ್ಟವಾದ ಆನಿಮೇಟೆಡ್ ವಿಡಿಯೊವನ್ನು (BJP Animated Video) ಇದೀಗ ಬಿಜೆಪಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: Karnataka Elections : ಬಾಗೇಪಲ್ಲಿಯಲ್ಲಿ ಜೆಡಿಎಸ್- ಬಿಜೆಪಿ ಗಿಫ್ಟ್ ವಾರ್, ಯುಗಾದಿ ನೆಪದಲ್ಲಿ ಉಡುಗೊರೆ ಸುರಿಮಳೆ!
ಪ್ರಧಾನಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ವಿಡಿಯೊ ಆರಂಭವಾಗುತ್ತದೆ. ಅದರಲ್ಲಿ ಮೊದಲಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮೋದಿ ಅವರನ್ನು ʼಮೌತ್ ಕಾ ಸೌದಾಗರ್ʼ ಎಂದು ಹೇಳುವುದನ್ನು ಕಾಣಬಹುದು. ಹಾಗೆಯೇ ಚಾಯ್‌ವಾಲಾ ಎಂದು ಮೂದಲಿಸುವುದು, ಅಮೆರಿಕದ ವೀಸಾ ಬ್ಯಾನ್ ವಿಚಾರದಲ್ಲಿ ಮೂದಲಿಸುವುದನ್ನು ಚಿತ್ರಿಸಲಾಗಿದೆ.
ಅದ್ಯಾವುದನ್ನೂ ಲೆಕ್ಕಿಸದೆ ಮುನ್ನಡೆವ ಮೋದಿ ಅರು 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗುತ್ತಾರೆ. ಆಗ ಅಮೆರಿಕ ಅಧ್ಯಕ್ಷ ಬರಕ್ ಒಬಾಮಾ ಅವರೇ ಸ್ವತಃ ಬಂದು ಮೋದಿ ಅವರಿಗೆ ಅಮೆರಿಕಕ್ಕೆ ಆಮಂತ್ರಿಸುತ್ತಾರೆ.
ವಿಡಿಯೊದಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ತೋರಿಸಿಕೊಡಲಾಗಿದೆ. ʼಸ್ವಚ್ಛ ಭಾರತ್ ಮಿಷನ್ʼ, ʼಪ್ರಧಾನ ಮಂತ್ರಿ ಮುದ್ರಾ ಯೋಜನೆʼ, ʼಉಜ್ವಲ ಯೋಜನೆʼ, ʼಜನ ಧನ ಯೋಜನೆʼ, ʼಜೀವನ ಜ್ಯೋತಿ ಬೀಮ ಯೋಜನೆʼ, ʼಪಿಎಂ ಆವಾಸ್ ಯೋಜನೆʼ, ʼಫಸಲ್ ಬೀಮಾ ಯೋಜನೆʼಗಳನ್ನು ಕೇಂದ್ರ ಸರ್ಕಾರ ಆರಂಭಿಸಿದ್ದನ್ನು ಪ್ರತಿಬಿಂಬಿಸಲಾಗಿದೆ.
ಇದನ್ನೂ ಓದಿ: Caste Politics: ಕಾಂಗ್ರೆಸ್ ಸಮಾವೇಶದ ಬೆನ್ನಿಗೇ ತಿಗಳ ಸಮುದಾಯದ ನಿಗಮ ಸ್ಥಾಪಿಸಿದ ಬಿಜೆಪಿ ಸರ್ಕಾರ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ರಫೇಲ್ ಹಗರಣವನ್ನು ಆರೋಪಿಸುವುದನ್ನೂ ತೋರಿಸಲಾಗಿದೆ. ಅದನ್ನೂ ಲೆಕ್ಕಿಸದೆ 2019ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.
ಕೊನೆಯದಾಗಿ ವಿರೋಧ ಪಕ್ಷಗಳು ಮೋದಿ ಅವರನ್ನು ಗೌತಮ್ ದಾಸ್, ಮೋದಿ ತೇರಿ ಕಬರ್ ಕುಡೆಗಿ, ನೀಚ್, ಕಾಕ್ರೋಚ್, ರಾವಣ್ ಹೀಗೆ ಹಲವಾರು ಪದಗಳಿಂದ ನಿಂದಿಸುವುದನ್ನು ತೋರಿಸಲಾಗಿದೆ. ಆದರೆ ಮೋದಿ ಎಲ್ಲವನ್ನೂ ಕೇಳಿಸಿಕೊಂಡು ನಗುತ್ತಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸೃಷ್ಟಿಯತ್ತ ಸಾಗುತ್ತಿರುವುದು ವಿಡಿಯೊದಲ್ಲಿದೆ.