Site icon Vistara News

Bypoll Results 2022 | ಉಪ ಚುನಾವಣೆಯ 7 ಕ್ಷೇತ್ರದ ಪೈಕಿ ಬಿಜೆಪಿಗೆ 4ರಲ್ಲಿ ಜಯ, ಉದ್ಧವ್‌ಗೆ ‘ಮಹಾʼ ಮುನ್ನಡೆ

ನವದೆಹಲಿ: ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯು ಮೂರು ಪ್ರಮುಖ ಕ್ಷೇತ್ರಗಳಲ್ಲಿ ಗೆಲುವು (Bypoll Results 2022) ಸಾಧಿಸಿದೆ. ಉತ್ತರ ಪ್ರದೇಶದ ಗೋಲ ಗೋರಖನಾಥ್, ಹರಿಯಾಣದ ಅದಮ್‌ಪುರ, ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಬಿಜೆಪಿ ಜಯಿಸಿದೆ. ಬಿಹಾರದ ಮೊಕಾಮ ಕ್ಷೇತ್ರದಲ್ಲಿ ಆರ್‌ಜೆಡಿ ಗೆದ್ದರೆ, ಮಹಾರಾಷ್ಟ್ರದ ಅಂಧೇರಿ ಪೂರ್ವ ಕ್ಷೇತ್ರದಲ್ಲಿ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಒಡಿಶಾದ ಧಾಮ್‌ನಗರ ಹಾಗೂ ತೆಲಂಗಾಣದ ಮುನುಗೋಡೆ ಕ್ಷೇತ್ರದದಲ್ಲಿ ಟಿಆರ್‌ಎಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

‌ಗೋಲ ಗೋರಖನಾಥ್‌ನಲ್ಲಿ ಬಿಜೆಪಿಯ ಅಮನ್‌ ಗಿರಿ, ಹರಿಯಾಣದ ಅದಮ್‌ಪುರದಲ್ಲಿ ಭವ್ಯಾ ಬಿಷ್ಣೋಯಿ, ಬಿಹಾರದ ಗೋಪಾಲಗಂಜ್‌ನಲ್ಲಿ ಬಿಜೆಪಿಯ ಕುಸುಮ್‌ ದೇವಿ, ಇದೇ ರಾಜ್ಯದ ಮೊಕಾಮ ಕ್ಷೇತ್ರದಲ್ಲಿ ಆರ್‌ಜೆಡಿಯ ನೀಲಂ ದೇವಿ ಗೆಲುವು ಸಾಧಿಸಿದ್ದಾರೆ. ತೆಲಂಗಾಣದ ಮುನುಗೋಡೆಯಲ್ಲಿ ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಹಾಗೂ ಒಡಿಶಾದ ಧಾಮ್‌ನಗರದಲ್ಲಿ ಬಿಜೆಪಿಯ ಸೂರ್ಯವಂಶಿ ಸೂರಜ್‌ ಗೆಲುವಿನ ನಗೆ ಬೀರಿದ್ದಾರೆ. ಮುನುಗೋಡೆಯಲ್ಲಿ ಟಿಆರ್‌ಎಸ್‌ ಹಾಗೂ ಧಾಮ್‌ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಉದ್ಧವ್‌ ಬಣಕ್ಕೆ ಮುನ್ನಡೆ

ಮಹಾರಾಷ್ಟ್ರದ ಅಂಧೇರಿ ಪೂರ್ವ ಉಪ ಚುನಾವಣೆಯಲ್ಲಿ ಉದ್ಧವ್‌ ಠಾಕ್ರೆ ಬಣವು ಭಾರಿ ಮುನ್ನಡೆ ಸಾಧಿಸಿದೆ. ಅದರಲ್ಲೂ, ಶಿವಸೇನೆಯು ಇಬ್ಭಾಗವಾದ ಬಳಿಕ ನಡೆದ ಚುನಾವಣೆಯಲ್ಲಿ ಉದ್ಧವ್‌ ಬಣ ಗೆಲುವು ಸಾಧಿಸಿದೆ. ಶಿವಸೇನೆ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ)ಯ ರುತುಜಾ ಲಟ್ಕೆ ಅವರು ಗೆಲುವು ಸಾಧಿಸಿದ್ದಾರೆ. ಇಲ್ಲಿ ನೋಟಾಗೆ ಹಾಕಿದ ಮತಗಳ ಪ್ರಮಾಣವೇ ಹೆಚ್ಚಿನ ಸ್ಥಾನದಲ್ಲಿವೆ. ಲಟ್ಕೆ ಅವರು 65 ಸಾವಿರಕ್ಕೂ ಅಧಿಕ ಮತ ಪಡೆದರೆ, ನೋಟಾಗೆ 10 ಸಾವಿರಕ್ಕಿಂತ ಹೆಚ್ಚು ಮತಗಳು ದಾಖಲಾದವು.

ಇದನ್ನೂ ಓದಿ | Election Bypoll results 2022 | ಬಿಜೆಪಿಗೆ 4, ಆರ್‌ಜೆಡಿ 1, ಟಿಆರ್‌ಎಸ್‌ಗೆ 1 ಕ್ಷೇತ್ರಗಳಲ್ಲಿ ಮುನ್ನಡೆ

Exit mobile version