Site icon Vistara News

ಬಿಜೆಪಿ ‘ಗೋ ಮೂತ್ರ’ ರಾಜ್ಯಗಳಲ್ಲಷ್ಟೇ ಗೆಲ್ಲೋದು! ಡಿಎಂಕೆ ಸಂಸದನ ಹೇಳಿಕೆಗೆ ಬಿಜೆಪಿ ವ್ಯಘ್ರ

BJP can only win gau mutra states Says DMK MP

ಚೆನ್ನೈ: ಭಾರತೀಯ ಜನತಾ ಪಾರ್ಟಿಯು (Bharatiya Janata Party) ಕೇವಲ ಗೋ ಮೂತ್ರ ರಾಜ್ಯಗಳಲ್ಲಿ (gau mutra states) ಮಾತ್ರ ಗೆಲ್ಲುತ್ತದೆ ಎಂದು ಹೇಳುವ ಮೂಲಕ ತಮಿಳುನಾಡಿನ ಧರ್ಮಪುರಿ ಕ್ಷೇತ್ರದ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ (DMK MP Senthil Kumar) ಅವರು ವಿವಾದಕ್ಕೆ ಕಾರಣವಾಗಿದ್ದಾರೆ. ಹಿಂದಿ ಹಾರ್ಟ್‌ಲ್ಯಾಂಡ್ ಎಂದು ಹೇಳಲಾಗುವ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಸೆಂಥಿಲ್ ಕುಮಾರ್ ಈ ಕಮೆಂಟ್ ಮಾಡಿದ್ದಾರೆ(election Results 2023).

ಈ ಬಿಜೆಪಿಯ ಶಕ್ತಿಯು ಮುಖ್ಯವಾಗಿ ಹಿಂದಿಯ ಹೃದಯಭಾಗದ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಈ ದೇಶದ ಜನರು ಭಾವಿಸುತ್ತಿದ್ದಾರೆ. ನಾವು ಸಾಮಾನ್ಯವಾಗಿ ಈ ರಾಜ್ಯಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಕರೆಯುತ್ತೇವೆ ಎಂದು ಲೋಕಸಭೆಯ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಸೆಂಥಿಲ್ ಕುಮಾರ್ ಹೇಳಿದರು.

ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಅವರ ಈ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿಯು ವಿರೋಧ ವ್ಯಕ್ತಪಡಿಸಿದೆ. ಇದೊಂದು ಅಸೂಕ್ಷ್ಮ ಹೇಳಿಕೆಯಾಗಿದೆ ಎಂದುಹೇಳಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಸೆಂಥಿಲ್ ಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಡಿಎಂಕೆಯ ದುರಾಡಳಿತದಿಂದ ಚೆನ್ನೈ ಮುಳುಗುತ್ತಿದೆ ಮತ್ತು ಸಂಸತ್ತಿನಲ್ಲಿ ಆ ಪಕ್ಷದ ಸಂಸದ ಭಾಷಣವೂ ಹಾಗೆಯೇ ಇದೆ. ನಮ್ಮ ಉತ್ತರ ಭಾರತದ ಸ್ನೇಹಿತರನ್ನು ಪಾನಿ ಪುರಿ ಮಾರಾಟಗಾರರು, ಶೌಚಾಲಯ ನಿರ್ಮಿಸುವವರು, ಇತ್ಯಾದಿಗಳನ್ನು ಕರೆದ ನಂತರ ಇಂಡಿಯಾ ಮೈತ್ರಿಕೂಟದ ಡಿಎಂಕೆ ಸಂಸದರು ಗೋಮೂತ್ರ ಎಂದು ಮೊದಲಿಸುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಯು ಈ ಸಂವೇದನಾರಹಿತ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ತಮಿಳುನಾಡು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಕೆ ಅಣ್ಣಾಮಲೈ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳೆಂದು ಸೆಂಥಿಲ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಹೇಳಿದ್ದಲ್ಲ. ಈ ಹಿಂದೆಯೂ ಅವರು ಗೋಮೂತ್ರ ರಾಜ್ಯಗಳು ಎಂದು ಹೇಳಿದ್ದರು. 2022ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯ ಕುರಿತು ಮಾತನಾಡುವಾಗಲೂ ಸೆಂಥಿಲ್ ಕುಮಾರ್ ಅವರು, ಗೋಮೂತ್ರ ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು ಎಂದು ಹೇಳಿದ್ದರು.

ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ಅಗತ್ಯ ಎನ್ನುವುದಾದರೆ ಅವರು ತಮಿಳುನಾಡಿನ ಮಾದರಿಯನ್ನು ದೇಶಾದ್ಯಂತ ಜಾರಿ ಮಾಡಲಿ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ಮೇಲೆ ಏಕೆ ಹೇರಲಾಗುತ್ತಿದೆ. ನಾವು ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಅವರಿಗೆ ಬೇಕಿದ್ದರೆ ತಮ್ಮ ಗೋಮೂತ್ರ ರಾಜ್ಯಗಳಲ್ಲಿ ಜಾರಿ ಮಾಡಲಿದೆ ಎಂದು ಈ ಹಿಂದೆ ಸೆಂಥಿಲ್ ಕುಮಾರ್ ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: ಅಣ್ಣಾಮಲೈ ವಿರುದ್ಧ ಆಕ್ರೋಶ: ತ.ನಾಡು ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಪದಾಧಿಕಾರಿಗಳು

Exit mobile version