Site icon Vistara News

ಛತ್ತೀಸ್‌ಗಢ ವಿಧಾನಸಭೆ ಎಲೆಕ್ಷನ್ ಗೆಲ್ಲಲು ಬಿಜೆಪಿ ಪ್ಲ್ಯಾನ್, ಮೋದಿ ನೇತೃತ್ವದಲ್ಲಿ ಸಭೆ

BJP Delhi office

ನವದೆಹಲಿ: ಮುಂಬರುವ ಐದು ರಾಜ್ಯ ವಿಧಾನಸಭೆ ಚುನಾವಣೆಗಳ (Assembly Election) ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ(BJP)ಯ ಕೇಂದ್ರ ಚುನಾವಣಾ ಸಮಿತಿ (CEC Meeting) ಬುಧವಾರ ಸಭೆ ಸೇರಿ ಚರ್ಚಿಸಿತು. ಈ ಸಭೆಯಲ್ಲಿ ಛತ್ತೀಸ್‌ಗಢ ರಾಜ್ಯ ವಿಧಾನಸಭೆ (Chhattisgarh Assembly election) ಚುನಾವಣೆಯನ್ನು ಕೇಂದ್ರವಾಗಿಟ್ಟು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಛತ್ತೀಸ್‌ಗಢವನ್ನು ಗೆಲ್ಲುವ ಕಾರ್ಯತಂತ್ರಗಳ ಕುರಿತು ಮಾಹಿತಿ ನೀಡಲಾಗಿದೆ.

ಛತ್ತೀಸ್‌ಗಢ ರಾಜ್ಯದಲ್ಲಿ ಒಟ್ಟು 90 ವಿಧಾನಸಭೆ ಕ್ಷೇತ್ರಗಳಿವೆ. ಈ ಪೈಕಿ ಶೇ.50ರಷ್ಟು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಡ ಹೆಚ್ಚು ಒಲವು ತೋರಿಸಿದೆ. 90 ಕ್ಷೇತ್ರಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದು ತಿಳಿದು ಬಂದಿದೆ.

‘ಎ’ ವರ್ಗಕ್ಕೆ ಬಿಜೆಪಿ ಪ್ರತಿ ಬಾರಿಯೂ ಗೆಲ್ಲುವ ಕ್ಷೇತ್ರಗಳನ್ನು ಸೇರಿಸಲಾಗಿದೆ. ಮಿಶ್ರ ಫಲಿತಾಂಶವನ್ನು ನೀಡಿರುವ ಕ್ಷೇತ್ರಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗಿದೆ. ಅದೇ ರೀತಿ, ಬಿಜೆಪಿ ದುರ್ಬಲವಾಗಿರುವ ಕ್ಷೇತ್ರಗಳನ್ನು ‘ಸಿ’ ಕೆಟಗರಿಗೆ ಹಾಕಲಾಗಿದೆ. ಇನ್ನೂ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವಂಥ ಕ್ಷೇತ್ರಗಳನ್ನು ‘ಡಿ’ ವರ್ಗಕ್ಕೆ ಸೇರಿಸಲಾಗಿದೆ. ಈ ಎಲ್ಲ ಕುರಿತು ಪಕ್ಷದ ಸಿಇಸಿ ಚರ್ಚೆ ಮಾಡಿದೆ.

ಛತ್ತೀಸ್‌ಗಢ ಚುನಾವಣೆಯ ಕುರಿತೇ ಒಟ್ಟು 2 ಗಂಟೆ ಚರ್ಚೆ ನಡೆಸಲಾಗಿದೆ. ಟಿಕೆಟ್ ಹಂಚಿಕೆ, ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ, ಮತದಾರರನ್ನು ಸೆಳೆಯುವುದು, ರಾಜ್ಯ ಸರ್ಕಾರದ ವೈಫಲ್ಯಗಳ ಮೇಲೆ ಹೆಚ್ಚು ಗಮನ ಹರಿಸುವ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದೆ.

ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಛತ್ತೀಸ್‌ಗಢ ಚುನಾವಣಾ ಉಸ್ತುವಾರಿ ಓಂ ಪ್ರಕಾಶ್ ಮಾಥೂರ್, ಸಹ ಉಸ್ತುವಾರಿ ಮನ್ಶುಕ್ ಮಾಂಡವೀಯಾ ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ: BJP Election In charge: ರಾಜಸ್ಥಾನಕ್ಕೆ ಕನ್ನಡಿಗನ ಸಾರಥ್ಯ! ಎಂಪಿ, ಛತ್ತೀಸ್‌ಗಢ, ತೆಲಂಗಾಣಕ್ಕೆ ಬಿಜೆಪಿ ಉಸ್ತುವಾರಿಗಳ ನೇಮಕ

ಕರ್ನಾಟಕ ರಾಜ್ಯ ಸೋಲಿನ ಎಫೆಕ್ಟ್

ಕರ್ನಾಟಕ ಮತ್ತು ಹಿಮಾಚಲ ಪ್ರದೇಶಗಳಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿಯು ಮೂರು ತಿಂಗಳ ಮೊದಲೇ, ಐದು ರಾಜ್ಯಗಳ ಚುನಾವಣೆಗಳ ಕುರಿತು ಬುಧವಾರ ಚರ್ಚೆ ನಡೆಸಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸ್ಥಿತಿ ಗತಿಗಳ ಬಗ್ಗೆ ಹೆಚ್ಚ ಆದ್ಯತೆ ನೀಡಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version