Site icon Vistara News

ಭ್ರಷ್ಟರ ಕೈ ಮುರಿಯಿರಿ ಎಂದು ಭಾಷಣ ಮಾಡಿದ ಕಾಂಗ್ರೆಸ್​ ನಾಯಕನ ವಿರುದ್ಧ ಬಿಜೆಪಿ ದೂರು; ಕೇಸ್​ ದಾಖಲು

BJP Complaint Against Congress Leader In Madhya Pradesh Over his Speech

ನವ ದೆಹಲಿ: ವೀರಾವೇಶದಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕನ (Congress Leader) ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಮಧ್ಯಪ್ರದೇಶದ ಜಬಲ್ಪುರ ಜಿಲ್ಲಾಧ್ಯಕ್ಷ ನೀಲೇಶ್​ ಜೈನ್​ ಅವರು ಕಾಂಗ್ರೆಸ್​ನಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ, ‘ಭ್ರಷ್ಟ ವ್ಯಕ್ತಿಗಳ ಕೈಯನ್ನು ಮುರಿಯಿರಿ’ ಎಂದು ಹೇಳಿದ್ದರು. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ. ಇದೊಂದು ಪ್ರಚೋದನಾತ್ಮಕ ಹೇಳಿಕೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ನಿಮ್ಮ ಮಾತು ಕೇಳದ ಭ್ರಷ್ಟ ವ್ಯಕ್ತಿಗಳ ಕೈಯನ್ನು ಮುರಿಯಿರಿ ಎಂದು ಸಾರ್ವಜನಿಕ ಭಾಷಣ ಮಾಡಿದ ನೀಲೇಶ್​ ಜೈನ್​ ವಿರುದ್ಧ ಜಬಲ್ಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜ್​ಮಣಿ ಸಿಂಗ್​ ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ಕೇಸ್​ ದಾಖಲಿಸಿದ್ದಾರೆ.

ಒಂದೆಡೆ ಕಾಂಗ್ರೆಸ್​​ನ ಭಾರತ್​ ಜೋಡೋ ಯಾತ್ರೆ ನಡೆಯುತ್ತಿದ್ದು, ಈಗ ಹಾತ್​ ಸೆ ಹಾತ್​ ಜೋಡೋ ಎಂಬ ಇನ್ನೊಂದು ಕಾರ್ಯಕ್ರಮವನ್ನು ಕಾಂಗ್ರೆಸ್​ ಹಮ್ಮಿಕೊಂಡಿದೆ. ಜನವರಿ 26ರಂದು ಈ ಅಭಿಯಾನಕ್ಕೆ ಪಕ್ಷ ಚಾಲನೆ ಕೊಟ್ಟಿದ್ದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ತಿಳಿಸುವ ಸಲುವಾಗಿ ಹಾತ್​ ಸೆ ಹಾತ್​ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದೆ. ನೀಲೇಶ್​ ಜೈನ್ ಅವರು ಜಬಲ್ಪುರದಲ್ಲಿ ಇದೇ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕೇಂದ್ರ ಸರ್ಕಾರ-ಬಿಜೆಪಿ ವಿರೋಧ ಭಾಷಣ ಮಾಡುತ್ತಿದ್ದಾಗಲೇ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬುಲ್ಡೋಜರ್​ ಹೆಸರು ಹೇಳಿ ಹೆದರಿಸಿ ಕಾಂಗ್ರೆಸ್​ ನಾಯಕರು, ಕಾರ್ಯಕರ್ತರನ್ನು ಬಿಜೆಪಿಗೆ ಕರೆದ ಮಧ್ಯಪ್ರದೇಶ ಸಚಿವ!

Exit mobile version