ಭ್ರಷ್ಟರ ಕೈ ಮುರಿಯಿರಿ ಎಂದು ಭಾಷಣ ಮಾಡಿದ ಕಾಂಗ್ರೆಸ್​ ನಾಯಕನ ವಿರುದ್ಧ ಬಿಜೆಪಿ ದೂರು; ಕೇಸ್​ ದಾಖಲು - Vistara News

ದೇಶ

ಭ್ರಷ್ಟರ ಕೈ ಮುರಿಯಿರಿ ಎಂದು ಭಾಷಣ ಮಾಡಿದ ಕಾಂಗ್ರೆಸ್​ ನಾಯಕನ ವಿರುದ್ಧ ಬಿಜೆಪಿ ದೂರು; ಕೇಸ್​ ದಾಖಲು

ಒಂದೆಡೆ ಕಾಂಗ್ರೆಸ್​​ನ ಭಾರತ್​ ಜೋಡೋ ಯಾತ್ರೆ ನಡೆಯುತ್ತಿದ್ದು, ಈಗ ಹಾತ್​ ಸೆ ಹಾತ್​ ಜೋಡೋ ಎಂಬ ಇನ್ನೊಂದು ಕಾರ್ಯಕ್ರಮವನ್ನು ಕಾಂಗ್ರೆಸ್​ ಹಮ್ಮಿಕೊಂಡಿದೆ.

VISTARANEWS.COM


on

BJP Complaint Against Congress Leader In Madhya Pradesh Over his Speech
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ವೀರಾವೇಶದಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕನ (Congress Leader) ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಮಧ್ಯಪ್ರದೇಶದ ಜಬಲ್ಪುರ ಜಿಲ್ಲಾಧ್ಯಕ್ಷ ನೀಲೇಶ್​ ಜೈನ್​ ಅವರು ಕಾಂಗ್ರೆಸ್​ನಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ, ‘ಭ್ರಷ್ಟ ವ್ಯಕ್ತಿಗಳ ಕೈಯನ್ನು ಮುರಿಯಿರಿ’ ಎಂದು ಹೇಳಿದ್ದರು. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ. ಇದೊಂದು ಪ್ರಚೋದನಾತ್ಮಕ ಹೇಳಿಕೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ನಿಮ್ಮ ಮಾತು ಕೇಳದ ಭ್ರಷ್ಟ ವ್ಯಕ್ತಿಗಳ ಕೈಯನ್ನು ಮುರಿಯಿರಿ ಎಂದು ಸಾರ್ವಜನಿಕ ಭಾಷಣ ಮಾಡಿದ ನೀಲೇಶ್​ ಜೈನ್​ ವಿರುದ್ಧ ಜಬಲ್ಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜ್​ಮಣಿ ಸಿಂಗ್​ ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ಕೇಸ್​ ದಾಖಲಿಸಿದ್ದಾರೆ.

ಒಂದೆಡೆ ಕಾಂಗ್ರೆಸ್​​ನ ಭಾರತ್​ ಜೋಡೋ ಯಾತ್ರೆ ನಡೆಯುತ್ತಿದ್ದು, ಈಗ ಹಾತ್​ ಸೆ ಹಾತ್​ ಜೋಡೋ ಎಂಬ ಇನ್ನೊಂದು ಕಾರ್ಯಕ್ರಮವನ್ನು ಕಾಂಗ್ರೆಸ್​ ಹಮ್ಮಿಕೊಂಡಿದೆ. ಜನವರಿ 26ರಂದು ಈ ಅಭಿಯಾನಕ್ಕೆ ಪಕ್ಷ ಚಾಲನೆ ಕೊಟ್ಟಿದ್ದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ತಿಳಿಸುವ ಸಲುವಾಗಿ ಹಾತ್​ ಸೆ ಹಾತ್​ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದೆ. ನೀಲೇಶ್​ ಜೈನ್ ಅವರು ಜಬಲ್ಪುರದಲ್ಲಿ ಇದೇ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕೇಂದ್ರ ಸರ್ಕಾರ-ಬಿಜೆಪಿ ವಿರೋಧ ಭಾಷಣ ಮಾಡುತ್ತಿದ್ದಾಗಲೇ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬುಲ್ಡೋಜರ್​ ಹೆಸರು ಹೇಳಿ ಹೆದರಿಸಿ ಕಾಂಗ್ರೆಸ್​ ನಾಯಕರು, ಕಾರ್ಯಕರ್ತರನ್ನು ಬಿಜೆಪಿಗೆ ಕರೆದ ಮಧ್ಯಪ್ರದೇಶ ಸಚಿವ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

Priyanka Gandhi: ಅಮೇಥಿ ಮತ್ತು ರಾಯ್​​ಬರೇಲಿ ಲೋಕಸಭಾ ಸ್ಥಾನಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಯ್ಕೆಯಾಗಿದ್ದವು. ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಊಹಿಸಲಾಗಿತ್ತು. ಕೊನೆಗೆ ರಾಹುಲ್ ಗಾಂಧಿ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್​ಬರೇಲಿಯಲ್ಲಿ ಸ್ಪರ್ಧಿಸಿದ್ದರು.

VISTARANEWS.COM


on

Priyanka Gandhi:
Koo

ನವದೆಹಲಿ: ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿಯಾಗಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi) ನಿಂತಿದ್ದರೆ 2 ರಿಂದ 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದರು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ರಾಯ್​ಬರೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

“ನಾನು ಇದನ್ನು ಅಹಂಕಾರದಿಂದ ಹೇಳುತ್ತಿಲ್ಲ” ಎಂದು ಹೇಳಿದ ರಾಹುಲ್ ಗಾಂಧಿ, ಭಾರತದ ಜನರು ಪ್ರಧಾನಿ ಮೋದಿಯವರ ಆಡಳಿತದಿಂದ ಸಂತುಷ್ಟರಾಗಿಲ್ಲ. ಅವರಿಗೆ ಮತದಾರರು ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ನುಡಿದಿದ್ದಾರೆ. ಜನರು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ನಿಲ್ಲುತ್ತೇವೆ ಎಂಬ ಸಂದೇಶವನ್ನು ಕಳುಹಿಸಿದ್ದಾರೆ” ಎಂದು ಮುಂದುವರಿದ ರಾಹುಲ್ ಗಾಂಧಿ ಹೇಳಿದರು.

ಅಮೇಥಿ ಮತ್ತು ರಾಯ್​​ಬರೇಲಿ ಲೋಕಸಭಾ ಸ್ಥಾನಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಯ್ಕೆಯಾಗಿದ್ದವು. ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಊಹಿಸಲಾಗಿತ್ತು. ಕೊನೆಗೆ ರಾಹುಲ್ ಗಾಂಧಿ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್​ಬರೇಲಿಯಲ್ಲಿ ಸ್ಪರ್ಧಿಸಿದ್ದರು. ಅವರು ಅಮೇಥಿಯಿಂದ ಕೆಎಲ್ ಶರ್ಮಾ ಅವರನ್ನು ಕಣಕ್ಕಿಳಿಸಿದರು, ಅವರು ಬಿಜೆಪಿಯ ಸ್ಮೃತಿ ಇರಾನಿ ಅವರನ್ನು 1.6 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: Modi Ka Parivar : ಸೋಶಿಯಲ್​ ಮೀಡಿಯಾ ಹ್ಯಾಂಡಲ್​​ಗಳಿಂದ ‘ಮೋದಿ ಕಾ ಪರಿವಾರ್​’ ತೆಗೆಯಲು ಸೂಚನೆ

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಆದಾಗ್ಯೂ, ಅವರ ಗೆಲುವಿನ ಅಂತರವು 2019 ಮತ್ತು 2014 ಕ್ಕಿಂತ ಕಡಿಮೆಯಾಗಿದೆ. 1.5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ 543 ಸ್ಥಾನಗಳಲ್ಲಿ 293 ಸ್ಥಾನಗಳನ್ನು ಗೆದ್ದಿದೆ. ಆದಾಗ್ಯೂ, ಬಿಜೆಪಿ ಲೋಕಸಭೆಯಲ್ಲಿ 240 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದ ಕೊರತೆಯನ್ನು ಎದುರಿಸಿತು. 2014 ಮತ್ತು 2019 ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದೆ

Continue Reading

ಪ್ರಮುಖ ಸುದ್ದಿ

Modi Ka Parivar : ಸೋಶಿಯಲ್​ ಮೀಡಿಯಾ ಹ್ಯಾಂಡಲ್​​ಗಳಿಂದ ‘ಮೋದಿ ಕಾ ಪರಿವಾರ್​’ ತೆಗೆಯಲು ಸೂಚನೆ

Modi Ka Parivar : ಕಳೆದ ಮಾರ್ಚ್​ನಲ್ಲಿ ಲಾಲೂ ಪ್ರಸಾದ್ ಯಾದವ್​​, ಮೋದಿಯ ವಿರುದ್ಧ ಟೀಕೆ ಮಾಡುವಾಗ, ಕುಟುಂಬವೇ ಇಲ್ಲದವರು ಎಂದಿದ್ದರು. ತಿರುಗೇಟು ಕೊಟ್ಟಿದ್ದ ಮೋದಿ, ಭಾರತ ಎಲ್ಲರೂ ನನ್ನ ಕುಟುಂಬದ ಸದಸ್ಯರು ಎಂದಿದ್ದರು. ಈ ವೇಳೆ ಮೋದಿ ಪರವಾಗಿ ನಿಂತ ಬಿಜೆಪಿ ನಾಯಕರು ನಾವೆಲ್ಲರೂ ಅವರ ಕುಟುಂಬ ಎಂದು ಹೇಳಿದ್ದರು. ಆ ಅಭಿಯಾನದ ಭಾಗವೇ ‘ಮೋದಿ ಕಾ ಪರಿವಾರ್​’.

VISTARANEWS.COM


on

Modi Ka Parivar
Koo

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟ ಸರ್ಕಾರ ರಚಿಸಿದ ಬಳಿಕ ತಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ ಪ್ರಧಾನ ಮಂತ್ರಿ ಮೋದಿ ಅವರು, ಚುನಾವಣೆ ವೇಳೆ ತಮಗೆ ಬೆಂಬಲ ವ್ಯಕ್ತಪಡಿಸಲು ತಮ್ಮ ತಮ್ಮ ಸೋಶಿಯಲ್​ ಮೀಡಿಯಾ ಹ್ಯಾಂಡಲ್​ಗಳಲ್ಲಿ ಹಾಕಿದ್ದ ‘ಮೋದಿ ಕಾ ಪರಿವಾರ್​’ (ಮೋದಿಯ ಕುಟುಂಬ) ಉಲ್ಲೇಖವನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು, ಮೋದಿಗೆ ಕುಟುಂಬವಿಲ್ಲ ಎಂದು ಹೇಳಿರುವುದಕ್ಕೆ ಪ್ರತಿಯಾಗಿ ಮೋದಿ ಅಭಿಮಾನಿಗಳು, ಬಿಜೆಪಿ ನಾಯಕರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಂಡಲ್​ಗಳಲ್ಲಿ ‘ಮೋದಿ ಕಾ ಪರಿವಾರ್​’ (Modi Ka Parivar) ಎಂದು ಬರೆದುಕೊಂಡಿದ್ದರು.

ಕಳೆದ ಮಾರ್ಚ್​ನಲ್ಲಿ ಲಾಲೂ ಪ್ರಸಾದ್ ಯಾದವ್​​, ಮೋದಿಯ ವಿರುದ್ಧ ಟೀಕೆ ಮಾಡುವಾಗ, ಕುಟುಂಬವೇ ಇಲ್ಲದವರು ಎಂದಿದ್ದರು. ತಿರುಗೇಟು ಕೊಟ್ಟಿದ್ದ ಮೋದಿ, ಭಾರತ ಎಲ್ಲರೂ ನನ್ನ ಕುಟುಂಬದ ಸದಸ್ಯರು ಎಂದಿದ್ದರು. ಈ ವೇಳೆ ಮೋದಿ ಪರವಾಗಿ ನಿಂತ ಬಿಜೆಪಿ ನಾಯಕರು ನಾವೆಲ್ಲರೂ ಅವರ ಕುಟುಂಬ ಎಂದು ಹೇಳಿದ್ದರು. ಆ ಅಭಿಯಾನದ ಭಾಗವೇ ‘ಮೋದಿ ಕಾ ಪರಿವಾರ್​’.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಚುನಾವಣಾ ಪ್ರಚಾರದ ಮೂಲಕ ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮಕ್ಕೆ ‘ಮೋದಿ ಕಾ ಪರಿವಾರ್’ ಸೇರಿಸಿದ್ದರು. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದುಕೊಂಡೆ. ಭಾರತದ ಜನರು ಎನ್​ಡಿಎಗೆ ಸತತ ಮೂರನೇ ಬಾರಿಗೆ ಬಹುಮತ ನೀಡಿದ್ದಾರೆ, ಇದು ಒಂದು ರೀತಿಯ ದಾಖಲೆಯಾಗಿದ. ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಜನಾದೇಶವನ್ನು ನೀಡಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: Odisha chief minister : ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾaದ ನೂತನ ಮುಖ್ಯಮಂತ್ರಿ; ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ

“ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುವುದರೊಂದಿಗೆ, ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ. ಈಗ ನಿಮ್ಮ ಸಾಮಾಜಿಕ ಮಾಧ್ಯಮಗಳಿಂದ ‘ಮೋದಿ ಕಾ ಪರಿವಾರ್’ ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ. ಹ್ಯಾಂಡಲ್​ಗಳ ಹೆಸರು ಬದಲಾಗಬಹುದು. ಆದರೆ ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಒಂದು ಪರಿವಾರವಾಗಿ ನಮ್ಮ ಬಂಧವು ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಪಿಎಂ ಮೋದಿ ತಮ್ಮ ಎಕ್ಸ್ ಹ್ಯಾಂಡಲ್​​ನಲ್ಲಿ ತಮ್ಮ ಪ್ರೊಫೈಲ್ ಮತ್ತು ಹೆಡರ್ ಫೋಟೋಗಳನ್ನು ಸಹ ಬದಲಾಯಿಸಿದ್ದಾರೆ. ಇತ್ತೀಚಿನ ಚಿತ್ರಗಳು ಅವರ ಅಧಿಕಾರದ ಮೊದಲ ದಿನ ಮತ್ತು ಅವರ ಸರ್ಕಾರದ ಮೂರನೇ ಅವಧಿಯ ಪ್ರಮಾಣವಚನ ಸಮಾರಂಭದ ಚಿತ್ರಗಳಾಗಿವೆ. ಅವರು ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳುವ ಚಿತ್ರ ಹೆಡರ್​ನಲ್ಲಿದೆ.

Continue Reading

ವೈರಲ್ ನ್ಯೂಸ್

YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

ಜರ್ಮನಿ ಕನ್ಯೆಯೊಂದಿಗಿನ ಪ್ರೇಮ ಆರಂಭದಿಂದ ವಿವಾಹದ ಬಂಧನದವರೆಗಿನ ಕಥೆಯನ್ನು ಭಾರತೀಯ ಯೂಟ್ಯೂಬರ್ ಧ್ರುವ ರಾಥಿ (YouTuber, Dhruv Rathee) ಹೇಳಿಕೊಂಡಿದ್ದಾರೆ. ಜರ್ಮನ್ ನ ಜೂಲಿ ಎಲ್ಬ್ರ್ ಅವರೊಂದಿಗಿನ ಮೊದಲ ಭೇಟಿ, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

By

YouTuber Dhruv Rathee
Koo

ಮೋದಿ ಅಭಿಮಾನಿಗಳು ಮತ್ತು ವಿರೋಧಿಗಳಿಬ್ಬರಿಗೂ ಯೂಟ್ಯೂಬರ್‌ ಧ್ರುವ ರಾಥಿ ಗೊತ್ತು. ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಹರಿತ ವಿಡಿಯೊಗಳನ್ನು ಮಾಡುವ ಮೂಲಕ ಇವರು ಖ್ಯಾತರಾಗಿದ್ದಾರೆ. ಆದರೆ ಇವರ ಪ್ರೀತಿ, ಪ್ರೇಮ, ಪ್ರಣಯದ ಕತೆ ನಿಮಗೆ ಗೊತ್ತೆ? ಯೂಟ್ಯೂಬರ್ ಧ್ರುವ ರಾಥಿ (YouTuber Dhruv Rathee) ತಮ್ಮ ಪ್ರೇಮ ಕಥೆಯನ್ನು (Love story) ಹಂಚಿಕೊಂಡಿದ್ದಾರೆ. ಜರ್ಮನ್‌ನ (Germany) ಜೂಲಿ ಎಲ್ಬ್ರ್ (Juli Lbr) ಅವರೊಂದಿಗಿನ ಮೊದಲ ಭೇಟಿ, ಯಾವಾಗ ಪ್ರೀತಿಯಾಯಿತು, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

17.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಧ್ರುವ ರಾಥಿ ಪ್ರಸಿದ್ಧ ಭಾರತೀಯ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಪ್ರವಾಸದ ವಿಷಯದ ಕುರಿತೂ ಅವರು ಸದಾ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದ ಶಾಲೆಯಲ್ಲಿ ಪೂರ್ಣಗೊಳಿಸಿದರು. ಜರ್ಮನಿಯಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದ ಅವರು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

ಧ್ರುವ ಅವರ ವೃತ್ತಿಪರ ಜೀವನ ಮತ್ತು ವ್ಲಾಗ್‌ಗಳ ಬಗ್ಗೆ ಅವರ ಅಭಿಮಾನಿಗಳಿಗೆ ತಿಳಿದಿದ್ದರೂ ಅವರ ಜರ್ಮನ್ ಪತ್ನಿ ಜೂಲಿ ಎಲ್ಬ್ರ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. 2021ರಲ್ಲಿ ಧ್ರುವ ಮತ್ತು ಜೂಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ವಿವಾಹವಾದರು. ಅದೂ ಒಂದೆರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ಬಳಿಕ. ಆದರೂ ಅವರು ತಮ್ಮ ಸಂಬಂಧವನ್ನು ಮಾಧ್ಯಮದಿಂದ ಮತ್ತು ಅಭಿಮಾನಿಗಳ ಊಹಾಪೋಹಗಳಿಂದ ದೂರವಿಟ್ಟಿದ್ದರು. 2022ರಲ್ಲಿ ಅವರು ಹಿಂದೂ ಸಂಸ್ಕೃತಿಯಂತೆ ಮತ್ತೆ ವಿವಾಹವಾದರು.

ಜೂಲಿ ಎಲ್ಬ್ರ್ ಅವರೊಂದಿಗೆ ಮೊದಲ ಭೇಟಿ

ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಧ್ರುವ, 2014ರಲ್ಲಿ ಜೂಲಿಯೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಅವರು ಮೊದಲ ಬಾರಿಗೆ ರೈಲಿನಲ್ಲಿ ಜೂಲಿ ಅವರನ್ನು ಭೇಟಿಯಾಗಿದ್ದರು. ಆಗ ತಮ್ಮಿಬ್ಬರಿಗೂ 19 ವರ್ಷ ವಯಸ್ಸಾಗಿತ್ತು ಎಂದು ಹೇಳಿದರು. ಧ್ರುವ ತಮ್ಮ ಇಂಟರ್ನ್‌ಶಿಪ್‌ಗಾಗಿ ರೈಲು ಮೂಲಕ ಹೋಗುತ್ತಿದ್ದಾಗ ಜೂಲಿ ಶಾಲೆಗೆ ಹೋಗುತ್ತಿದ್ದರು. ಅವರು ಪ್ರತಿದಿನ ರೈಲಿನಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಮಾತನಾಡಲು ಪ್ರಾರಂಭಿಸಿದರು. ಧ್ರುವ ಅವರು ತಮ್ಮ ಯೂಟ್ಯೂಬ್ ಪ್ರಯಾಣವನ್ನು ಪ್ರಾರಂಭಿಸಿದ್ದು ಅದೇ ವರ್ಷ ಎಂದು ಹೇಳಿದ್ದಾರೆ.


ಕನಸಿನಂತೆ ಮದುವೆ

2021ರ ನವೆಂಬರ್ 24ರಂದು, ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ಆತ್ಮೀಯರ ಸಮ್ಮುಖದಲ್ಲಿ ಧ್ರುವ ಅವರು ತಮ್ಮ ದೀರ್ಘಕಾಲದ ಗೆಳತಿ ಜೂಲಿಯನ್ನು ವಿವಾಹವಾದರು. ಈ ಕುರಿತು ಇನ್ ಸ್ಟಾ ಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣದಲ್ಲಿ ಅದು ಭಾರೀ ವೈರಲ್ ಆಗಿತ್ತು. ಜೂಲಿ ಅವರು ಬಿಳಿ ಗೌನ್ ಧರಿಸಿದ್ದು, ಧ್ರುವ ನೇವಿ ಬ್ಲೂ ಧಿರಿಸಿನಲ್ಲಿ ಮಿಂಚಿದ್ದರು.

ಕೋವಿಡ್ ಸಾಂಕ್ರಾಮಿಕದ ಸಮಯವಾದ್ದರಿಂದ ಇವರ ಮದುವೆಯಲ್ಲಿ ಕೇವಲ 22 ಮಂದಿ ಆತ್ಮೀಯರು ಮಾತ್ರ ಪಾಲ್ಗೊಂಡಿದ್ದರು. ಮದುವೆಯ ಅನಂತರ ದಂಪತಿ ಕೆಲ ಕಾಲ ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ತಮ್ಮ ಜೀವನದ ಕೆಲವೊಂದು ಸುಂದರ ಕ್ಷಣಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


ಹಿಂದೂ ಸಂಸ್ಕೃತಿಯಂತೆ ವಿವಾಹ

ಧ್ರುವ ಅವರು ಪತ್ನಿ ಜೂಲಿಯೊಂದಿಗೆ 2022ರಲ್ಲಿ ಭಾರತಕ್ಕೆ ಬಂದರು. ಬಳಿಕ ಇಲ್ಲಿ ದಂಪತಿ ಹಿಂದೂ ಸಂಪ್ರದಾಯಗಳ ಪ್ರಕಾರ ಎರಡನೇ ಬಾರಿಗೆ ವಿವಾಹವಾದರು. ಈ ಕುರಿತು ಧ್ರುವ ಅವರು ವಿಡಿಯೋವನ್ನು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಜೂಲಿ ಅವರು ಭಾರವಾದ ಕಸೂತಿ ಇರುವ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಇದರೊಂದಿಗೆ ಚೋಕರ್, ಕಿವಿಯೋಲೆ ಮತ್ತು ಮೂಗುತಿ ಯೊಂದಿಗೆ ಹಿಂದೂ ವಧುವಿನಂತೆ ಕಂಗೊಳಿಸಿದ್ದಾರೆ. ಮತ್ತೊಂದೆಡೆ ಧ್ರುವ ಅವರು ಪೇಟದೊಂದಿಗೆ ಶೇರ್ವಾನಿ ಧರಿಸಿದ್ದರು.

ಇದನ್ನೂ ಓದಿ: MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

ಜೂಲಿಗೆ ಹಿಂದಿ ಗೊತ್ತು

ಧ್ರುವ ದಂಪತಿ ಪರಸ್ಪರರ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಧ್ರುವ ಅವರು ಜರ್ಮನ್ ಭಾಷೆ ತಿಳಿದಿದ್ದು, ಅವರ ಪತ್ನಿ ಜೂಲಿ ಹಿಂದಿ ಕಲಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಧ್ರುವ ಅವರು ತಮ್ಮ ಪತ್ನಿ ಜೂಲಿಗಿಂತ ಉತ್ತಮವಾಗಿ ಜರ್ಮನ್ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಜೂಲಿ ಅವರಿಗೆ ಹಿಂದಿ ಸ್ವಲ್ಪ ಕಠಿಣವೆಂದು ಪರಿಗಣಿಸಿದ್ದಾರೆ.

ಧ್ರುವ ರಾಥಿ ಅವರ ಆಸ್ತಿ ಎಷ್ಟು?

ಧ್ರುವ ರಾಥಿ ಅವರು ಕಂಠದಾನ ಮಾಡುತ್ತಾರೆ ಮತ್ತು ಆಗಾಗ ಯೂಟ್ಯೂಬ್‌ನಲ್ಲಿ ತಮ್ಮ ಅನುಭವ, ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ನಿವ್ವಳ ಸಂಪತ್ತು ಸುಮಾರು 4 ಮಿಲಿಯನ್ ಡಾಲರ್ ಅಂದರೆ, ಸುಮಾರು 33 ಕೋಟಿ ರೂ. ಆಗಿದೆ. ಯೂಟ್ಯೂಬ್ ಚಾನಲ್ ಮತ್ತು ವಿವಿಧ ಬ್ರ್ಯಾಂಡ್‌ಗಳ ಸಹಯೋಗವೇ ಅವರ ಪ್ರಾಥಮಿಕ ಆದಾಯದ ಮೂಲವಾಗಿದೆ.

Continue Reading

ಪ್ರಮುಖ ಸುದ್ದಿ

University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

University Grants Commission : ಈ ಹಿಂದೆ, ಯುಜಿಸಿ ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್) ಮತ್ತು ಆನ್​ಲೈನ್​ ವಿಧಾನಗಳಿಗೆ ವರ್ಷಕ್ಕೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಇದರ ಪರಿಣಾಮವಾಗಿ ಸುಮಾರು 5 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳು ಅವಕಾಶ ಪಡೆದಿದ್ದರು. ಈ ಯಶಸ್ಸಿನಿಂದ ಉತ್ತೇಜಿತರಾದ ಯುಜಿಸಿ ಈ ನೀತಿಯನ್ನು ನಿಯಮಿತ ಕೋರ್ಸ್​ಗಳಿಗೆ ವಿಸ್ತರಿಸಿತ್ತು.

VISTARANEWS.COM


on

University Grants Commission
Koo

ನವದೆಹಲಿ: ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಪ್ರಕಟಿಸಲಾಗಿದ್ದು. ಮುಂದಿನ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳಿಗೆ ಅಡ್ಮಿಷನ್​ (ಪ್ರವೇಶ ಕಲ್ಪಿಸಲು) ವಿಶ್ವವಿದ್ಯಾಲಯ ಧನಸಹಾಯ ಆಯೋಗ (University Grants Commission) ನಿರ್ಧರಿಸಿದೆ, ಪ್ರವೇಶಗಳು ಈಗ ಜನವರಿ / ಫೆಬ್ರವರಿ ಮತ್ತು ಜುಲೈ / ಆಗಸ್ಟ್​​ನಲ್ಲಿ ನಡೆಯಲಿವೆ. ಬೋರ್ಡ್ ಫಲಿತಾಂಶಗಳಲ್ಲಿನ ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಆರಂಭಿಕ ಪ್ರವೇಶ ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಯುಜಿಸಿ ಅಧ್ಯಕ್ಷ ಪ್ರೊಫೆಸರ್ ಮಾಮಿಡಾಲ ಜಗದೀಶ್ ಕುಮಾರ್ ಈ ಕುರಿತು ಮಾಹಿತಿ ಪ್ರಕಟಿಸಿದ್ದಾರೆ. ಎರಡು ಬಾರಿ ಪ್ರವೇಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ದಾಖಲಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲಾಗುವುದು. ಆ ಮೂಲಕ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ಕಲ್ಪಿಸಲಾಗುವುದು ಎಂದು ವಿವರಿಸಿದ್ದಾರೆ. ಇದು ಕೈಗಾರಿಕೆಗಳಿಗೆ ವರ್ಷಕ್ಕೆ ಎರಡು ಬಾರಿ ಕ್ಯಾಂಪಸ್ ನೇಮಕ ಮಾಡಲು ಅನುವು ಮಾಡಿಕೊಡುತ್ತದೆ, ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ, ಯುಜಿಸಿ ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್) ಮತ್ತು ಆನ್​ಲೈನ್​ ವಿಧಾನಗಳಿಗೆ ವರ್ಷಕ್ಕೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಇದರ ಪರಿಣಾಮವಾಗಿ ಸುಮಾರು 5 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳು ಅವಕಾಶ ಪಡೆದಿದ್ದರು. ಈ ಯಶಸ್ಸಿನಿಂದ ಉತ್ತೇಜಿತರಾದ ಯುಜಿಸಿ ಈ ನೀತಿಯನ್ನು ನಿಯಮಿತ ಕಾರ್ಯಕ್ರಮಗಳಿಗೆ ವಿಸ್ತರಿಸಿತ್ತು.

ಇದನ್ನೂ ಓದಿ: Odisha chief minister : ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿ; ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ

ಈ ಬದಲಾವಣೆಯು ಭಾರತೀಯ ವಿಶ್ವವಿದ್ಯಾಲಯಗಳನ್ನು ಜಾಗತಿಕವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆಗೆ ಪೂರಕವಾಗಿದೆ. ಅಂತಾರಾಷ್ಟ್ರೀಯ ಸಹಯೋಗ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೂ ಪ್ರೇರಣೆ ನೀಡುತ್ತದೆ. ಆದಾಗ್ಯೂ, ಎರಡು ಬಾರಿ ಪ್ರವೇಶ ಕಲ್ಪಿಸುವುದು ಕಡ್ಡಾಯವಲ್ಲ.

ವರ್ಷಕ್ಕೆ ಎರಡು ಪ್ರವೇಶವು ಒಟ್ಟು ದಾಖಲಾತಿ ಅನುಪಾತ ಹೆಚ್ಚಿಸುತ್ತದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರಲ್ಲಿ ಕಲ್ಪಿಸಿದಂತೆ ಭಾರತವನ್ನು ‘ಜಾಗತಿಕ ಅಧ್ಯಯನ ತಾಣ’ ವನ್ನಾಗಿ ಮಾಡುತ್ತದೆ.

Continue Reading
Advertisement
Priyanka Gandhi:
ಪ್ರಮುಖ ಸುದ್ದಿ3 mins ago

Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

CM Siddaramaiah
ಕರ್ನಾಟಕ13 mins ago

CM Siddaramaiah: ಗಣಿಗಳ ಹರಾಜು ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

Modi Ka Parivar
ಪ್ರಮುಖ ಸುದ್ದಿ26 mins ago

Modi Ka Parivar : ಸೋಶಿಯಲ್​ ಮೀಡಿಯಾ ಹ್ಯಾಂಡಲ್​​ಗಳಿಂದ ‘ಮೋದಿ ಕಾ ಪರಿವಾರ್​’ ತೆಗೆಯಲು ಸೂಚನೆ

Rajeev Taranath
ಕರ್ನಾಟಕ45 mins ago

Rajeev Taranath: ಖ್ಯಾತ ಸರೋದ್‌ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ

Aishwarya Arjun
ಪ್ರಮುಖ ಸುದ್ದಿ1 hour ago

Aishwarya Arjun : ಚೆನ್ನೈನಲ್ಲಿ ವಿವಾಹವಾದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್​; ಇಲ್ಲಿವೆ ಚಿತ್ರಗಳು

Chellagurki Shri Yerrithathanavara Maharathotsava On 12th June
ಧಾರ್ಮಿಕ1 hour ago

Ballari News: ಜೂ.12ರಂದು ಚೇಳ್ಳಗುರ್ಕಿ ಶ್ರೀ ಎರ‍್ರಿತಾತನವರ ಮಹಾರಥೋತ್ಸವ

Fortis hospital Doctors Perform Successful Dual Cochlear Implant Surgery on Nigerian Young Woman
ಕರ್ನಾಟಕ1 hour ago

Fortis Hospital: ನೈಜೀರಿಯನ್ ಯುವತಿಗೆ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’

Viral News
ವೈರಲ್ ನ್ಯೂಸ್1 hour ago

Viral News: ಕೊಳದಲ್ಲಿ ತೇಲುತ್ತಿದ್ದ ದೇಹ ಮೇಲೆತ್ತಲು ಹೋದ ಪೊಲೀಸರು! ಹೆಣ ನಡೆಯತೊಡಗಿತು!

YouTuber Dhruv Rathee
ವೈರಲ್ ನ್ಯೂಸ್2 hours ago

YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

University Grants Commission
ಪ್ರಮುಖ ಸುದ್ದಿ2 hours ago

University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ6 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ8 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ10 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌